Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ Pragati Bhandari 4 ತಿಂಗಳುಗಳು ago ‘ಲವ್ ಮಾಕ್ಟೇಲ್’ ಸಿನಿಮಾದಿಂದ ಜನರ ಮನಗೆದ್ದ ಈ ಮುದ್ದಾದ ಜೋಡಿ ರಿಯಲ್ ಲೈಫ್‌ನಲ್ಲಿ ಕ್ಯೂಟ್ ಕಪಲ್ ಸಹ ಹೌದು. ಮಿಲನ ನಾಗರಾಜ್ (milana nagaraj) ಮತ್ತು ಡಾರ್ಲಿಂಗ್ ಕೃಷ್ಣ (darling krishna) ಈಗ ತಂದೆ ತಾಯಿಯಾದ ಸಂತಸದಲ್ಲಿದ್ದಾರೆ. ಮಿಲನ ನಾಗರಾಜ್ (milana nagaraj) ಹೆಣ್ಣು ಮಗುವಿಗೆ ಜನ್ಮನೀಡಿದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ನಮಗೆ ಹೆಣ್ಣು ಮಗುವಾಗಿದೆ. ಅಮ್ಮ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕೃಷ್ಣ ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ತ್ಯಾಗ ಮಾಡುವ ಎಲ್ಲಾ ತಾಯಂದಿರಿಗೂ ದೊಡ್ಡ ಧನ್ಯವಾದಗಳು. ನಿನ್ನನ್ನು ನೋಡಿದ ಮೇಲೆ ನನಗೆ ಮಹಿಳೆಯರ ಮೇಲಿನ ಗೌರವ ಇನ್ನಷ್ಟು ಜಾಸ್ತಿಯಾಗಿದೆ. ನನಗೀಗ ಹೆಣ್ಣು ಮಗುವಾಗಿದೆ ಹೀಗಾಗಿ ನಾನು ಅದೃಷ್ಟವಂತ’ ಎಂದು ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ. ಕಳೆದ ಮಹಾಶಿವರಾತ್ರಿಯಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ದಂಪತಿ ಬೇಬಿ ಬಂಪ್ ಫೋಟೋವನ್ನು ಆಗಾಗಾ ಶೇರ್ ಮಾಡುತ್ತಿದ್ದರು. See more