Site icon Vistara News

Actor Darshan: ಅಮ್ಮನ ಕೈಬಿಟ್ಟರೆ ಆಗುತ್ತಾ? ಸುಮಲತಾ ಪರ ದರ್ಶನ್​ ಪ್ರಚಾರ ಗ್ಯಾರಂಟಿ!

actor Darshan and Sumalatha Ambareesh

ಬೆಂಗಳೂರು: ನಟಿ, ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರು ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ತಯಾರಾಗಿದ್ದಾರೆ. ಈ ಹಿಂದೆಯೇ ಸಮಲತಾ ಅವರಿಗೆ ಯಶ್‌ ಹಾಗೂ ದರ್ಶನ್‌ ನಿಮ್ಮ ಪರ ಪ್ರಚಾರ ಮಾಡ್ತಾರಾ ಎಂಬ ಪ್ರಶ್ನೆ ಎದುರಾದಾಗ ಈ ಬಾರಿ ಪರಿಸ್ಥಿತಿ ಬೇರೆ ರೀತಿ ಇದೆ ಎಂದು ಹೇಳಿಕೆ ನೀಡಿದ್ದರು. ಆದರೀಗ ಮಂಗಳೂರಿನಲ್ಲಿ (Mangaluru) ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ದರ್ಶನ್‌ ಅವರು ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅಮ್ಮನ ಕೈಬಿಟ್ಟರೆ ಆಗುತ್ತಾ? ಎಂದು ಹೇಳಿಕೆ ಕೊಟ್ಟಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಹಾಕಿ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ (Koragajja) ಭೇಟಿ ನೀಡಿದ್ದಾರೆ. ಕೊರಗಜ್ಜ ದೈವ ದೇವರಿಗೆ ಡಿಬಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದರ್ಶನ್ ಜತೆ ನಟ ಚಿಕ್ಕಣ್ಣ ನಟ ಯಶಸ್ ಸೂರ್ಯ ಕೂಡ ಭಾಗಿಯಾಗಿದ್ದಾರೆ. ಕುತ್ತಾರು ಕೊರಗಜ್ಜ ದೇವಸ್ಥಾನಕ್ಕೆ ಇದೇ ಮೊದಲಬಾರಿಗೆ ಭೇಟಿ ಕೊಟ್ಟಿರುವುದು ವಿಶೇಷವಾಗಿದೆ. ದರ್ಶನ್‌ ಮಾಧ್ಯಮದ ಜತೆ ಮಾತನಾಡಿ ʻʻಮಂಗಳೂರಿಗೆ ಸಾಕಷ್ಟು ಬಾರಿ ಬಂದಿದ್ದೆ. ಕುತ್ತಾರಿಗೆ ಬರಲು ಆಗಿರಲಿಲ್ಲ. ಕುತ್ತಾರು ಏನು ಡಿಫರೆನ್ಸ್ ಇಲ್ಲ ಎಲ್ಲ ದೇವಸ್ಥಾನ ಒಂದೇ. ಎಲ್ಲರು ಈ ಕ್ಷೇತ್ರದ ಬಗ್ಗೆ ಹೇಳುತ್ತಿದ್ದರು. ನಾನು ಭೇಟಿ ನೀಡಿದಕ್ಕೆ ಯಾವುದೇ XYZ ಕಾರಣ ಇಲ್ಲ ಎಂದರು. `ಮೊನ್ನೆಯವರೆಗೂ ಸುಮಲತಾ ಪರವಾಗಿ ಇದ್ದೆ. ಈಗ ಅಮ್ಮನ ಕೈಬಿಡಕ್ಕಾಗುತ್ತಾ?’ ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಈ ಬಾರಿಯೂ ಸುಮಲತಾ ಪರವಾಗಿ ಪ್ರಚಾರಕ್ಕಿಳಿಯುವುದು ಖಚಿತ ಎಂದಿದ್ದಾರೆ.

ಇದನ್ನೂ ಓದಿ: Actor Darshan: ಮೊದಲ ಬಾರಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ದರ್ಶನ್‌!

ಸುಮಲತಾ ಪರ ಪ್ರಚಾರ ಮಾಡ್ತೀರಾ? ಎಂದು ಕೇಳಿದಕ್ಕೆ ದರ್ಶನ್ ಗರಂ ಆಗಿದ್ದಾರೆ. ಮೊನ್ನೆವರೆಗೂ ಎಲ್ಲಾ ಸುಮಲತಾ ಅಮ್ಮನ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ ಎಂದಿದ್ದಾರೆ. ಈಗ ಅವರ ಕೈ ಬಿಟ್ರೆ ಆಗುತ್ತಾ ಎಂದಿದ್ದಾರೆ. ನಿಮ್ಮ ಮನೇಲಿ ನಿಮ್ಮ ತಾಯಿನ ಬಿಟ್ ಬಿಡ್ತೀರಾ ಎಂದು ದರ್ಶನ್ ಮರು ಪ್ರಶ್ನೆ ಕೇಳಿದ್ದಾರೆ.

ನನ್ನ ಪರ ಪ್ರಚಾರ ಮಾಡಲು ಯಶ್, ದರ್ಶನ್ ಬಳಿ ಕೇಳೋದು ಸರಿನಾ?

ನಟಿ, ಸಂಸದೆ ಸುಮಲತಾ ಅಂಬರೀಶ್‌ ಅವರ ಪರವಾಗಿ ಯಶ್ ಹಾಗೂ ದರ್ಶನ್ ಈ ಮುಂಚೆ ಪ್ರಚಾರ ಮಾಡಿದ್ದರು. ಈ ಬಗ್ಗೆ ಸಮಲತಾ ಕೂಡ ಮಾಧ್ಯಮಕ್ಕೆ ಕೆಲವು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದರು.

ಮಾಧ್ಯಮದ ಜತೆ ಸುಮಲತಾ ಮಾತನಾಡಿ ʻʻಕಳೆದ ಬಾರಿ ನಾನು ನಿರ್ದಿಷ್ಟವಾಗಿ ಪ್ಲ್ಯಾನ್‌ ಯಾವುದೂ ಮಾಡಿರಲಿಲ್ಲ. ಇಂಡಿಪೆಂಡೆಂಟ್‌ ಆಗಿಯೇ ನಿಂತಿದ್ದೆ. ಈಗ ಪರಿಸ್ಥಿತಿ ಚೇಂಜ್‌ ಆಗಿದೆ. ನಾನು ಈ ಬಾರಿ ಒಂದು ಪಕ್ಷದಿಂದ ನಿಲ್ಲುತ್ತಿದ್ದೇನೆ. ಈ ಪಕ್ಷದಲ್ಲಿ ಲೀಡರ್ಸ್‌ ಕೂಡ ಇರುತ್ತಾರೆ. ಪ್ರಚಾರ, ಹೋರಾಟ ಯಾವುದೇ ಇರಲಿ ವಿಭಿನ್ನವಾಗಿರುತ್ತದೆ. ಈಗಲೂ ಎಲ್ಲರೂ ಸಪೋರ್ಟ್‌ ಮಾಡುತ್ತಾರೆ. ಆಗ ಆ ಇಬ್ಬರೂ ಸೂಪರ್‌ ಸ್ಟಾರ್ಸ್‌ಗಳು ಯಾವುದೇ ಸ್ವಾರ್ಥ ಇಲ್ಲದೇ, ಯಾವುದು ಎದುರು ನೋಡದೇನೆ ನನ್ನ ಪರ ನಿಂತಿದ್ದರಲ್ಲ ಅದು ಸಾಹಸ. ಪ್ರತಿ ಸಲ ನನ್ನ ಪರ ನಿಲ್ಲಿ ಎಂದು ಕೇಳೋದು ಸರಿನಾ? ದರ್ಶನ್‌ ಅವರಿಗೂ ಸಿನಿಮಾ ಕೆಲಸಗಳು ಇರುತ್ತವೆ. ಪ್ರತಿ ಸಲ ನಮ್ಮ ಜತೆ ಬನ್ನಿ ಎಂದು ಕರೆಯುವುದು ಸರಿ ಅಲ್ಲ. ಬರೋದು ಇದ್ದರೆ ನಾನು ಖಂಡಿತ ವೆಲ್‌ಕಮ್‌ ಮಾಡ್ತೀನಿ. ಯಶ್‌ ಕೂಡ ಪ್ಯಾನ್‌ ಇಂಡಿಯಾ ಸ್ಟಾರ್‌. ಅವರಿಂದ ಮತ್ತೆ ನಿರೀಕ್ಷೆ ಮಾಡೋದು ಸರಿಯಲ್ಲ. ಬಂದರೆ ಖುಷಿ. ನಮ್ಮ ಮನೆ ಕುಟುಂಬದ ನಂಟು ಇಟ್ಟುಕೊಂಡು ಆಗ ಯಶ್‌ ಅವರೇ ಬಂದರು. ಕಳೆದ ಚುನಾವಣೆಯಲ್ಲಿ ನನ್ನ ಮನೆಯ ಮಕ್ಕಳ ತರಹ ಓಡಾಡಿದ್ದಾರೆ. ಆವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಈ ಬಾರಿ ಅವರು ಬರದಿದ್ದರೂ ನಾನು ಬೇಜಾರು ಮಾಡಿಕೊಳ್ಳಲ್ಲ ʼʼ ಎಂದು ಹೇಳಿಕೆ ನೀಡಿದ್ದರು.

Exit mobile version