ಬೆಂಗಳೂರು: ದರ್ಶೀಲ್ ಸಫಾರಿ ಇತ್ತೀಚೆಗೆ ʻಹುಕುಸ್ ಬುಕಸ್ʼ ಸ್ಪೋರ್ಟ್ಸ್ ಜಾನರ್ ಸಿನಿಮಾ ಮೂಲಕ ಕಮ್ ಬ್ಯಾಕ್ ಆಗಿದ್ದರು. ಆದರೂ ಸಿನಿರಸಿಕರು ಇಂದಿಗೂ ದರ್ಶೀಲ್ ಸಫಾರಿ ಅವರನ್ನು ತಾರೆ ಜಮೀನ್ ಪರ್ ಸಿನಿಮಾದಲ್ಲಿಯ ʻಇಶಾನ್ʼ ಎಂತಲೇ ಗುರುತಿಸುತ್ತಾರೆ. 2007ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಆಮೀರ್ ಖಾನ್ (Aamir Khan) ಸಹ ನಟಿಸಿದ್ದಾರೆ. ಈಗಾಗಲೇ ಆಮೀರ್ ಖಾನ್ (Aamir Khan) ತಮ್ಮ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಸಿನಿಮಾ (Sitare Zameen Par) ಘೋಷಿಸಿದ್ದಾರೆ. ಚಿತ್ರದ ಥೀಮ್ ‘ತಾರೆ ಜಮೀನ್ ಪರ್’ಅನ್ನು ಹೋಲುತ್ತದೆ ಎಂದು ನಟ ಉಲ್ಲೇಖಿಸಿದ್ದಾರೆ. ಇದರಲ್ಲಿ ದರ್ಶೀಲ್ ಸಫಾರಿ ನಟಿಸಲಿದ್ದಾರಾ? ಇಲ್ಲವಾ? ಇವೆಲ್ಲದರ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದರು ದರ್ಶೀಲ್ ಸಫಾರಿ.
“ಯಾವುದೇ ಚಿತ್ರದಿಂದ ದೂರವಿರಲು ನಾನು ಎಂದಿಗೂ ಯೋಚಿಸಲಿಲ್ಲ. ನನ್ನ ಮುಂಬರುವ ಯಾವುದೇ ಪ್ರಾಜೆಕ್ಟ್‌ಗಳನ್ನು ನೀವು ನೋಡಿದಾಗ, ನಾನು ಚಿಕ್ಕವನಿದ್ದಾಗ ನಾನು ಏನಾಗಿದ್ದೆ ಎಂಬುದನ್ನು ನೀವು ನೆನಪಿಸಿಕೊಳ್ಳುತ್ತೀರಿʼʼ ಎಂದು ಮಾತು ಶುರು ಮಾಡಿದರು.
ತಾರೆ ಜಮೀನ್ ಪರ್ ಬ್ಲಾಕ್ ಬಸ್ಟರ್ ಆದಾಗ ದರ್ಶೀಲ್‌ಗೆ ಕೇವಲ 10 ವರ್ಷ. ದರ್ಶೀಲ್ ಸಫಾರಿ ಮಾತನಾಡಿ ʻʻಇಂದಿನವರೆಗೂ, ನಾನು ಮಾಡುವ ಹೆಚ್ಚಿನ ಸಂದರ್ಶನಗಳಲ್ಲಿ, ತಾರೆ ಜಮೀನ್ ಪರ್ ಬಗ್ಗೆ ನನಗೆ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ. ಜನರು ನೆನಪಿಸಿಕೊಳ್ಳುವ ಪಾತ್ರ ಅದು. ಆ ಚಿತ್ರ ಇಂದಿಗೂ ಜನರ ಮನಸ್ಸಿನಲ್ಲಿದೆ. ಜನರು ತುಂಬಾ ಇಷ್ಟಪಟ್ಟ ಚಿತ್ರ ಅದುʼʼ ಎಂದರು.
ಇದನ್ನೂ ಓದಿ: Aamir Khan: ಹೊಸ ಸಿನಿಮಾ ಘೋಷಿಸಿದ ಆಮೀರ್ ಖಾನ್; ‘ತಾರೆ ಜಮೀನ್ ಪರ್’ಗೆ ಲಿಂಕ್ ಇದ್ಯಾ?
ಇಂದಿಗೂ ಜನರು ʼತಾರೆ ಜಮೀನ್ ಪರ್ʼ ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಮಾತನಾಡುವಾಗ ನನಗೆ ಸ್ಫೂರ್ತಿಯಾಗುತ್ತದೆ ಎಂದು ದರ್ಶೀಲ್ ಹೇಳಿದರು. “ನಾನು ಇದೇ ರೀತಿಯ ಯೋಜನೆಗಳನ್ನು ಮಾಡಲು ಮತ್ತು ಅದೇ ರೀತಿಯ ಸಿನಿಮಾಗಳ ಜತೆ ಕೈ ಜೋಡಿಸಲು ಬಯಸುತ್ತೇನೆ. ಹುಕುಸ್ ಬುಕಸ್ ಸಿನಿಮಾ ನನಗೆ ಸರಿಯಾದ ನಿರ್ದೇಶನವಾಗಿದೆʼʼ ಎಂದರು.
ʼತಾರೆ ಜಮೀನ್ ಪರ್ʼ ಬಿಡುಗಡೆಯಾಗಿ 16 ವರ್ಷಗಳಾಗಿದ್ದರೂ, ದರ್ಶೀಲ್ ಇನ್ನೂ ತಮ್ಮ ಸಹ-ನಟ ಆಮೀರ್ ಖಾನ್ ಅವರೊಂದಿಗೆ ಸಂಪರ್ಕದಲ್ಲಿದ್ದಾರಂತೆ. ಆಮೀರ್ ಕೊನೆಯ ಚಿತ್ರಕ್ಕಾಗಿ ಯುವನಟ ವಿಶ್ ಕೂಡ ಮಾಡಿದ್ದಾರಂತೆ. ಆಮೀರ್ ಅವರ ಮುಂಬರುವ ಚಲನಚಿತ್ರ ಸಿತಾರೆ ಜಮೀನ್ ಪರ್‌ನಲ್ಲಿ ಮತ್ತೆ ದರ್ಶೀಲ್ ಇದ್ದಾರಾ ಎಂಬ ಪ್ರಶ್ನೆಗೆ ನಟ ಉತ್ತರಿಸಿ ʻʻನನಗೆ ಗೊತ್ತಿಲ್ಲ. ನನಗೆ ಈ ಪ್ರಶ್ನೆ ತುಂಬಾ ಕಾಡುತ್ತಿದೆ. ಆದರೆ ನಾವು ಈಗ ಆ ವಿಚಾರವಾಗಿ ಮಾತನಾಡುವುದು ಬೇಡ. ಇನ್ನು ಯಾವಾಗಾದರೂ ಮಾತನಾಡೋಣ. ಸರ್‌ಪ್ರೈಸ್ ಅಂತೂ ಇರಲಿದೆ, ”ಎಂದು ಹೇಳಿದರು.
ಹೇಗಿರಲಿದೆ ಸಿತಾರೆ ಜಮೀನ್ ಪರ್?
ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತ ಬಳಿಕ ಆಮೀರ್ ʼಸಿತಾರೆ ಜಮೀನ್ ಪರ್’ ಸಿನಿಮ ಘೋಷಿಸಿದ್ದರು. ಈ ಬಗ್ಗೆ ಆಮೀರ್ ಮಾಧ್ಯಮವೊಂದರಲ್ಲಿ ಮಾತನಾಡಿ “ನಾನು ಸಿನಿಮಾ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ, ಈಗ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ನಾನು ಶೀರ್ಷಿಕೆಯನ್ನು ಹೇಳಬಲ್ಲೆ. ಚಿತ್ರದ ಶೀರ್ಷಿಕೆ ‘ಸಿತಾರೆ ಜಮೀನ್ ಪರ್’. ನಿಮಗೆ ನನ್ನ ‘ತಾರೆ ಜಮೀನ್ ಪರ್’ ಚಿತ್ರ ನೆನಪಿರಬೇಕು. ಈ ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’ ಏಕೆಂದರೆ ನಾವು ಅದೇ ಥೀಮ್‌ನೊಂದಿಗೆ ಮುಂದೆ ಹೋಗುತ್ತಿದ್ದೇವೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆʼಎಂದು ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: JP Nadda : ಮತದಾರರಿಗೆ ಆಮಿಷ ಆರೋಪ: ಜೆ.ಪಿ ನಡ್ಡಾ ವಿರುದ್ಧದ ತನಿಖೆಗೆ ತಡೆಯಾಜ್ಞೆ
ನಟ ಮಾತು ಮುಂದುವರಿಸಿʻʻ ಆದರೆ ಸಿನಿಮಾ ಥೀಮ್ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ನಾವು ಈ ಹೆಸರನ್ನು ಬಹಳ ಯೋಚನೆ ಮಾಡಿ ಇಟ್ಟುಕೊಂಡಿದ್ದೇವೆ. ನಮ್ಮೆಲ್ಲರಲ್ಲೂ ನ್ಯೂನತೆ ಹಾಗೂ ದೌರ್ಬಲ್ಯಗಳು ಇರುತ್ತವೆ. ಜತೆಗೆ ನಮ್ಮೆಲ್ಲರಿಗೂ ಏನಾದರೂ ವಿಶೇಷತೆಯೂ ಇರುತ್ತದೆ. ಆ ಚಿತ್ರದಲ್ಲಿ ವಿಶೇಷ ಮಗು ಇಶಾನ್ ಪಾತ್ರವಾಗಿತ್ತು. ನನ್ನ ಪಾತ್ರವು ‘ತಾರೆ ಜಮೀನ್ ಪರ್’ನಲ್ಲಿ ಆ ಪಾತ್ರಕ್ಕೆ ಸಹಾಯ ಮಾಡಿತ್ತು. ‘ಸಿತಾರೆ ಜಮೀನ್ ಪರ್’ನಲ್ಲಿ, ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುವ ಆ ಒಂಬತ್ತು ಹುಡುಗರು ನನಗೆ ಸಹಾಯ ಮಾಡುತ್ತಾರೆ, ಹಾಗಾಗಿ ಕಥೆ ವಿರುದ್ಧವಾಗಿರಲಿದೆʼʼಎಂದಿದ್ದರು.
ತಾರೆ ಜಮೀನ್ ಪರ್’ ಸಿನಿಮಾದಲ್ಲಿ ಹುಡುಗನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಹೆತ್ತವರು ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಶಿಕ್ಷಕ ಆಮೀರ್ ಖಾನ್ ಭೇಟಿಯಾಗುತ್ತಾರೆ. ಈ ಸಿನಿಮಾದಲ್ಲಿ ದರ್ಶೀಲ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ‘ತಾರೆ ಜಮೀನ್ ಪರ್’ 21 ಡಿಸೆಂಬರ್ 2007ರಂದು ಬಿಡುಗಡೆಯಾಗಿತ್ತು.