Aamir Khan: ʻಸಿತಾರೆ ಜಮೀನ್ ಪರ್‌ʼನಲ್ಲಿ ಆಮೀರ್ -ದರ್ಶೀಲ್ ಸಫಾರಿ ಮತ್ತೆ ಒಂದಾಗ್ತಾರಾ? - Vistara News

ಬಾಲಿವುಡ್

Aamir Khan: ʻಸಿತಾರೆ ಜಮೀನ್ ಪರ್‌ʼನಲ್ಲಿ ಆಮೀರ್ -ದರ್ಶೀಲ್ ಸಫಾರಿ ಮತ್ತೆ ಒಂದಾಗ್ತಾರಾ?

Aamir Khan: ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ದರ್ಶೀಲ್ ಸಫಾರಿ ನಟಿಸಲಿದ್ದಾರಾ? ಇಲ್ಲವಾ? ಸಂದರ್ಶನವೊಂದರಲ್ಲಿ ದರ್ಶೀಲ್ ಸಫಾರಿ ಹೇಳಿದ್ದೇನು?

VISTARANEWS.COM


on

Darsheel Safary With Aamir Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದರ್ಶೀಲ್ ಸಫಾರಿ ಇತ್ತೀಚೆಗೆ ʻಹುಕುಸ್ ಬುಕಸ್ʼ ಸ್ಪೋರ್ಟ್ಸ್‌ ಜಾನರ್‌ ಸಿನಿಮಾ ಮೂಲಕ ಕಮ್‌ ಬ್ಯಾಕ್‌ ಆಗಿದ್ದರು. ಆದರೂ ಸಿನಿರಸಿಕರು ಇಂದಿಗೂ ದರ್ಶೀಲ್ ಸಫಾರಿ ಅವರನ್ನು ತಾರೆ ಜಮೀನ್ ಪರ್ ಸಿನಿಮಾದಲ್ಲಿಯ ʻಇಶಾನ್ʼ ಎಂತಲೇ ಗುರುತಿಸುತ್ತಾರೆ. 2007ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಆಮೀರ್ ಖಾನ್ (Aamir Khan) ಸಹ ನಟಿಸಿದ್ದಾರೆ. ಈಗಾಗಲೇ ಆಮೀರ್‌ ಖಾನ್ (Aamir Khan) ತಮ್ಮ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಸಿನಿಮಾ (Sitare Zameen Par) ಘೋಷಿಸಿದ್ದಾರೆ. ಚಿತ್ರದ ಥೀಮ್ ‘ತಾರೆ ಜಮೀನ್ ಪರ್’ಅನ್ನು ಹೋಲುತ್ತದೆ ಎಂದು ನಟ ಉಲ್ಲೇಖಿಸಿದ್ದಾರೆ. ಇದರಲ್ಲಿ ದರ್ಶೀಲ್ ಸಫಾರಿ ನಟಿಸಲಿದ್ದಾರಾ? ಇಲ್ಲವಾ? ಇವೆಲ್ಲದರ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದರು ದರ್ಶೀಲ್ ಸಫಾರಿ.

“ಯಾವುದೇ ಚಿತ್ರದಿಂದ ದೂರವಿರಲು ನಾನು ಎಂದಿಗೂ ಯೋಚಿಸಲಿಲ್ಲ. ನನ್ನ ಮುಂಬರುವ ಯಾವುದೇ ಪ್ರಾಜೆಕ್ಟ್‌ಗಳನ್ನು ನೀವು ನೋಡಿದಾಗ, ನಾನು ಚಿಕ್ಕವನಿದ್ದಾಗ ನಾನು ಏನಾಗಿದ್ದೆ ಎಂಬುದನ್ನು ನೀವು ನೆನಪಿಸಿಕೊಳ್ಳುತ್ತೀರಿʼʼ ಎಂದು ಮಾತು ಶುರು ಮಾಡಿದರು.

ತಾರೆ ಜಮೀನ್ ಪರ್ ಬ್ಲಾಕ್ ಬಸ್ಟರ್ ಆದಾಗ ದರ್ಶೀಲ್‌ಗೆ ಕೇವಲ 10 ವರ್ಷ. ದರ್ಶೀಲ್ ಸಫಾರಿ ಮಾತನಾಡಿ ʻʻಇಂದಿನವರೆಗೂ, ನಾನು ಮಾಡುವ ಹೆಚ್ಚಿನ ಸಂದರ್ಶನಗಳಲ್ಲಿ, ತಾರೆ ಜಮೀನ್ ಪರ್ ಬಗ್ಗೆ ನನಗೆ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ. ಜನರು ನೆನಪಿಸಿಕೊಳ್ಳುವ ಪಾತ್ರ ಅದು. ಆ ಚಿತ್ರ ಇಂದಿಗೂ ಜನರ ಮನಸ್ಸಿನಲ್ಲಿದೆ. ಜನರು ತುಂಬಾ ಇಷ್ಟಪಟ್ಟ ಚಿತ್ರ ಅದುʼʼ ಎಂದರು.

ಇದನ್ನೂ ಓದಿ: Aamir Khan: ಹೊಸ ಸಿನಿಮಾ ಘೋಷಿಸಿದ ಆಮೀರ್ ಖಾನ್; ‘ತಾರೆ ಜಮೀನ್ ಪರ್’ಗೆ ಲಿಂಕ್‌ ಇದ್ಯಾ?

ಇಂದಿಗೂ ಜನರು ʼತಾರೆ ಜಮೀನ್ ಪರ್ʼ ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಮಾತನಾಡುವಾಗ ನನಗೆ ಸ್ಫೂರ್ತಿಯಾಗುತ್ತದೆ ಎಂದು ದರ್ಶೀಲ್ ಹೇಳಿದರು. “ನಾನು ಇದೇ ರೀತಿಯ ಯೋಜನೆಗಳನ್ನು ಮಾಡಲು ಮತ್ತು ಅದೇ ರೀತಿಯ ಸಿನಿಮಾಗಳ ಜತೆ ಕೈ ಜೋಡಿಸಲು ಬಯಸುತ್ತೇನೆ. ಹುಕುಸ್ ಬುಕಸ್ ಸಿನಿಮಾ ನನಗೆ ಸರಿಯಾದ ನಿರ್ದೇಶನವಾಗಿದೆʼʼ ಎಂದರು.

ʼತಾರೆ ಜಮೀನ್ ಪರ್ʼ ಬಿಡುಗಡೆಯಾಗಿ 16 ವರ್ಷಗಳಾಗಿದ್ದರೂ, ದರ್ಶೀಲ್ ಇನ್ನೂ ತಮ್ಮ ಸಹ-ನಟ ಆಮೀರ್ ಖಾನ್ ಅವರೊಂದಿಗೆ ಸಂಪರ್ಕದಲ್ಲಿದ್ದಾರಂತೆ. ಆಮೀರ್‌ ಕೊನೆಯ ಚಿತ್ರಕ್ಕಾಗಿ ಯುವನಟ ವಿಶ್‌ ಕೂಡ ಮಾಡಿದ್ದಾರಂತೆ. ಆಮೀರ್ ಅವರ ಮುಂಬರುವ ಚಲನಚಿತ್ರ ಸಿತಾರೆ ಜಮೀನ್ ಪರ್‌ನಲ್ಲಿ ಮತ್ತೆ ದರ್ಶೀಲ್ ಇದ್ದಾರಾ ಎಂಬ ಪ್ರಶ್ನೆಗೆ ನಟ ಉತ್ತರಿಸಿ ʻʻನನಗೆ ಗೊತ್ತಿಲ್ಲ. ನನಗೆ ಈ ಪ್ರಶ್ನೆ ತುಂಬಾ ಕಾಡುತ್ತಿದೆ. ಆದರೆ ನಾವು ಈಗ ಆ ವಿಚಾರವಾಗಿ ಮಾತನಾಡುವುದು ಬೇಡ. ಇನ್ನು ಯಾವಾಗಾದರೂ ಮಾತನಾಡೋಣ. ಸರ್‌ಪ್ರೈಸ್‌ ಅಂತೂ ಇರಲಿದೆ, ”ಎಂದು ಹೇಳಿದರು.

ಹೇಗಿರಲಿದೆ ಸಿತಾರೆ ಜಮೀನ್ ಪರ್?

ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತ ಬಳಿಕ ಆಮೀರ್‌ ʼಸಿತಾರೆ ಜಮೀನ್ ಪರ್’ ಸಿನಿಮ ಘೋಷಿಸಿದ್ದರು. ಈ ಬಗ್ಗೆ ಆಮೀರ್‌ ಮಾಧ್ಯಮವೊಂದರಲ್ಲಿ ಮಾತನಾಡಿ “ನಾನು ಸಿನಿಮಾ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ, ಈಗ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ನಾನು ಶೀರ್ಷಿಕೆಯನ್ನು ಹೇಳಬಲ್ಲೆ. ಚಿತ್ರದ ಶೀರ್ಷಿಕೆ ‘ಸಿತಾರೆ ಜಮೀನ್ ಪರ್’. ನಿಮಗೆ ನನ್ನ ‘ತಾರೆ ಜಮೀನ್ ಪರ್’ ಚಿತ್ರ ನೆನಪಿರಬೇಕು. ಈ ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’ ಏಕೆಂದರೆ ನಾವು ಅದೇ ಥೀಮ್‌ನೊಂದಿಗೆ ಮುಂದೆ ಹೋಗುತ್ತಿದ್ದೇವೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆʼಎಂದು ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: JP Nadda : ಮತದಾರರಿಗೆ ಆಮಿಷ ಆರೋಪ: ಜೆ.ಪಿ ನಡ್ಡಾ ವಿರುದ್ಧದ ತನಿಖೆಗೆ ತಡೆಯಾಜ್ಞೆ

ನಟ ಮಾತು ಮುಂದುವರಿಸಿʻʻ ಆದರೆ ಸಿನಿಮಾ ಥೀಮ್ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ನಾವು ಈ ಹೆಸರನ್ನು ಬಹಳ ಯೋಚನೆ ಮಾಡಿ ಇಟ್ಟುಕೊಂಡಿದ್ದೇವೆ. ನಮ್ಮೆಲ್ಲರಲ್ಲೂ ನ್ಯೂನತೆ ಹಾಗೂ ದೌರ್ಬಲ್ಯಗಳು ಇರುತ್ತವೆ. ಜತೆಗೆ ನಮ್ಮೆಲ್ಲರಿಗೂ ಏನಾದರೂ ವಿಶೇಷತೆಯೂ ಇರುತ್ತದೆ. ಆ ಚಿತ್ರದಲ್ಲಿ ವಿಶೇಷ ಮಗು ಇಶಾನ್ ಪಾತ್ರವಾಗಿತ್ತು. ನನ್ನ ಪಾತ್ರವು ‘ತಾರೆ ಜಮೀನ್ ಪರ್’ನಲ್ಲಿ ಆ ಪಾತ್ರಕ್ಕೆ ಸಹಾಯ ಮಾಡಿತ್ತು. ‘ಸಿತಾರೆ ಜಮೀನ್ ಪರ್’ನಲ್ಲಿ, ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುವ ಆ ಒಂಬತ್ತು ಹುಡುಗರು ನನಗೆ ಸಹಾಯ ಮಾಡುತ್ತಾರೆ, ಹಾಗಾಗಿ ಕಥೆ ವಿರುದ್ಧವಾಗಿರಲಿದೆʼʼಎಂದಿದ್ದರು.

ತಾರೆ ಜಮೀನ್ ಪರ್’ ಸಿನಿಮಾದಲ್ಲಿ ಹುಡುಗನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಹೆತ್ತವರು ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಶಿಕ್ಷಕ ಆಮೀರ್‌ ಖಾನ್ ಭೇಟಿಯಾಗುತ್ತಾರೆ. ಈ ಸಿನಿಮಾದಲ್ಲಿ ದರ್ಶೀಲ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ‘ತಾರೆ ಜಮೀನ್ ಪರ್’ 21 ಡಿಸೆಂಬರ್ 2007ರಂದು ಬಿಡುಗಡೆಯಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Kiara Advani: ‘ಡಾನ್‌ 3’ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಕಿಯಾರಾ ಅಡ್ವಾಣಿ

Kiara Advani: ಬಾಲಿವುಡ್‌ನ ಜನಪ್ರಿಯ ನಾಯಕಿ ಕಿಯಾರಾ ಅಡ್ವಾಣಿ ಸದ್ಯ ʼಡಾನ್‌ 3ʼ ಚಿತ್ರಕ್ಕೆ ಆಯ್ಕೆಯಾಗಿದ್ದು, ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

VISTARANEWS.COM


on

kiara adwani
Koo

ಮುಂಬೈ: ಬಾಲಿವುಡ್‌ನ ಜನಪ್ರಿಯ ನಾಯಕಿ ಕಿಯಾರಾ ಅಡ್ವಾಣಿ ಸದ್ಯ ಬೇಡಿಯಲ್ಲಿರುವ ನಟಿಯರ ಪೈಕಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು. ಹಿಂದಿಯ ಜತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿರುವ ಅವರ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್‌ಗಳಿವೆ. ಈ ಮಧ್ಯೆ ಅವರು ಬಾಲಿವುಡ್‌ನ ಬಹು ನಿರೀಕ್ಷಿತ ʼಡಾನ್‌ 3ʼ (Don 3) ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಣವೀರ್‌ ಸಿಂಗ್‌ (Ranveer Singh) ಜತೆ ಮೊದಲ ಬಾರಿ ತೆರೆ ಹಂಚಿಕೊಳ್ಳಲಿರುವ ಅವರು ಈ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತದೆ.

ಸಂಭಾವನೆ ಎಷ್ಟು?

ವರದಿಯೊಂದರ ಪ್ರಕಾರ ಪ್ರರ್ಹಾನ್‌ ಅಖ್ತರ್‌ ನಿರ್ದೇಶನದ ಈ ಚಿತ್ರಕ್ಕೆ ಕಿಯಾರಾ ಬರೋಬ್ಬರಿ 13 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ಅಂದರೆ ಇದು ಅವರು ʼವಾರ್‌ 2ʼ ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಹಲವು ಪಟ್ಟು ಅಧಿಕ ಎನ್ನಲಾಗುತ್ತಿದೆ.

ʼʼಡಾನ್‌ 3ʼ ಸಿನಿಮಾಕ್ಕಾಗಿ ಕಿಯಾರಾ ಅಡ್ವಾಣಿ 13 ಕೋಟಿ ರೂ. ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ಹಲವು ಅಪಾಯಕಾರಿ ಆ್ಯಕ್ಷನ್‌ ದೃಶ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ದುಬಾರಿ ಸಂಭಾವನೆಯ ಬೇಡಿಕೆ ಸಲ್ಲಿಸಿದ್ದಾರೆ. ಇದು ʼವಾರ್‌ 2ʼ ಚಿತ್ರದಲ್ಲಿ ಪಡೆದ ಸಂಭಾವನೆಗಿಂತ ಎರಡು ಪಟ್ಟು ಅಧಿಕʼʼ ಎಂದು ವರದಿಯೊಂದು ತಿಳಿಸಿದೆ. ಇನ್ನೂ ಈ ಸುದ್ದಿ ಅಧಿಕೃತವಾಗಿ ದೃಢವಾಗಿಲ್ಲ.

2025ರಲ್ಲಿ ತೆರೆ ಕಾಣಲಿರುವ ಈ ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಈಗಾಗಲೇ ‘ಡಾನ್‌’ ಸರಣಿಯ ಎರಡೂ ಚಿತ್ರಗಳು ಯಶಸ್ವಿಯಾಗಿರುವುದರಿಂದ ಈ ಮೂರನೇ ಭಾಗ ಕುತೂಹಲ ಮೂಡಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ರಣವೀರ್‌ ಸಿಂಗ್‌ ಮತ್ತು ಕಿಯಾರಾ ಅಡ್ವಾಣಿ ತೆರೆ ಹಂಚಿಕೊಳ್ಳುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಕಿಯಾರಾ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್‌.ಶಂಕರ್‌ ಅವರ ‘ಗೇಮ್‌ ಚೇಂಜರ್‌’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಮ್‌ ಚರಣ್‌ ನಾಯಕನಾಗಿರುವ ಈ ಸಿನಿಮಾದಲ್ಲಿ ಅಂಜಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಲಿದೆ. ‘ವಾರ್‌ 2’ ಸಿನಿಮಾದಲ್ಲಿ ನಾಯಕರಾಗಿ ಹೃತಿಕ್‌ ರೋಷನ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಅಭಿಮಾನಿಳ ಗಮನ ಸೆಳೆದಿದೆ. ಕಿಯಾರಾ ಅಡ್ವಾಣಿ ಕಳೆದ ವರ್ಷ ಫೆಬ್ರವರಿ 7ರಂದು ಬಾಲಿವುಡ್‌ ಸಿದ್ಧಾರ್ಥ್‌ ಮಲ್ಹೋತ್ರಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ: ಅತಿ ಹೆಚ್ಚು ಗೂಗಲ್ಡ್ ಸೆಲೆಬ್ರಿಟಿ; ನಟಿ ಕಿಯಾರಾ, ಕ್ರಿಕೆಟಿಗ ಶುಭ್ಮನ್ ಟಾಪ್

ಸದ್ಯ ರಣವೀರ್‌ ಸಿಂಗ್‌ ಕಳೆದ ವರ್ಷ ತೆರೆಕಂಡ ʼರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಇದಕ್ಕೂ ಹಿಂದಿನ ಅವರ ಕೆಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋತಿದ್ದವು. ʼಸಿಂಗಮ್‌ ಅಗೈನ್‌ʼ ಸಿನಿಮಾದಲ್ಲಿಯೂ ರಣವೀರ್‌ ಅಭಿನಯಿಸುತ್ತಿದ್ದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ದಂಪತಿ ತಾವು ಪೋಷಕರಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಸೆಪ್ಟೆಂಬರ್‌ನಲ್ಲಿ ಚೊಚ್ಚಲ ಮಗು ಜನಿಸುವ ನಿರೀಕ್ಷೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಫ್ಯಾಷನ್

Nita Ambani: ಮಗನ ಮದುವೆ: ಕೈ ಮಗ್ಗದ ಕಾಂಚೀವರಂ ಸೀರೆಯುಟ್ಟು ಮಿಂಚಿದ ನೀತಾ ಅಂಬಾನಿ!

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

VISTARANEWS.COM


on

Nita Ambani Kanchipuram sari at Anant-Radhika pre-wedding
Koo

ಅನಂತ್ ಅಂಬಾನಿ (Nita Ambani) ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸಿದ್ದರು. ಈ ಸೀರೆಯ ವಿಶೇಷತೆ ಏನೆಂದರೆ, ಇದು ದಕ್ಷಿಣ ಭಾರತದ ನೇಕಾರರು ಕೈಯಿಂದಲೇ ಸಿದ್ಧಪಡಿಸಿದ್ದಾಗಿದೆ. ಇದನ್ನು ಕೈ ಮಗ್ಗದ ಸೀರೆ ಎನ್ನಲಾಗುತ್ತದೆ. ಯಂತ್ರಗಳಿಂದ ಅಲ್ಲದೆ, ಕುಶಲಕರ್ಮಿಗಳು ತಮಗೆ ತಲೆತಲಾಂತರದಿಂದ ಬಂದಂಥ ಅದ್ಭುತ ಕಲೆಯನ್ನು ಮೂಡಿಸಿರುವಂಥ ಮೇರು ಕಲಾಕೃತಿ ಇದು. ಭಾರತೀಯ ಸಾಂಪ್ರದಾಯಿಕ ಕರಕುಶಲತೆ ಬಗ್ಗೆ ನೀತಾ ಅಂಬಾನಿ ಅವರಿಗೆ ಇರುವಂಥ ಗೌರವ, ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇದು ಇನ್ನೊಂದು ಸುಮಧುರ ಕ್ಷಣವಾಗಿತ್ತು.

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

ರಿಲಯನ್ಸ್ ನ ಸ್ವದೇಶ್ ಎಂಬ ಉಪಕ್ರಮವು ಸಮುದಾಯಗಳ ಕೈ ಬಲಪಡಿಸುತ್ತದೆ ಹಾಗೂ ಪಾರಂಪರಿಕ ಕರಕುಶಲತೆಯ ಸಂರಕ್ಷಣೆ ಮಾಡುತ್ತದೆ.

ಇದನ್ನೂ ಓದಿ: Nita Ambani: ಅನಂತ್ ಅಂಬಾನಿ ಮದುವೆ: ವಿಶ್ವಂಭರಿ ಸ್ತುತಿಗೆ ನೀತಾ ಅಂಬಾನಿ ಅದ್ಭುತ ನೃತ್ಯ!

ವಿಶ್ವಂಭರಿ ಸ್ತುತಿಗೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ ನೀತಾ ಅಂಬಾನಿ

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದಿದೆ. ನೀತಾ ಅಂಬಾನಿ ಹಾಗೂ ಅವರ ಜತೆಗೆ ಇತರರು ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದ್ದು, ವಿಶಾಲವಾದ ವೇದಿಕೆಯಲ್ಲಿ ಈ ಸಮಾರಂಭಕ್ಕೆ ಇನ್ನಷ್ಟು ಕಳೆ ಕಟ್ಟುವಂತೆ ಮಾಡಿದ್ದಾರೆ.

ಅಂದ ಹಾಗೆ, ಅನಂತ್ ಅಂಬಾನಿ ಅವರ ಭಾವೀ ಪತ್ನಿ ರಾಧಿಕಾ ಮರ್ಚಂಟ್ ಸಹ ಅತ್ಯುತ್ತಮ ನೃತ್ಯಪಟು. ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗುತ್ತದೆ.

Continue Reading

ಬಾಲಿವುಡ್

Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

Aaradhya Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಹೇರ್‌ಸ್ಟೈಲ್‌ ಹೈಲೈಟ್‌ ಆಗಿದೆ. ಅಂತೂ ಹೇರ್‌ ಸ್ಟೈಲ್‌ ಚೇಂಜ್‌ ಆಯ್ತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ ನೆಟ್ಟಿಗರು!

VISTARANEWS.COM


on

Aaradhya Bachchan flaunts new hairstyle for Ambanis bash
Koo

ಬೆಂಗಳೂರು: ಬಚ್ಚನ್ ಕುಟುಂಬ ಭಾನುವಾರ ಸಂಜೆ (ಮಾ.3) ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು. ಕುಟುಂಬ ಸದಸ್ಯರ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಹೇರ್‌ಸ್ಟೈಲ್‌ ಹೈಲೈಟ್‌ ಆಗಿದೆ. ಅಂತೂ ಹೇರ್‌ ಸ್ಟೈಲ್‌ ಚೇಂಜ್‌ ಆಯ್ತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ ನೆಟ್ಟಿಗರು!

ಕೆಲವು ವರ್ಷಗಳಿಂದ ಆರಾಧ್ಯ ಅವರು ಯಾವಾಗಲೂ ಒಂದೇ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಈಗ ಫ್ರೀ ಹೇರ್ಸ್‌ ಬಿಟ್ಟು ಕ್ಯೂಟ್‌ ಆಗಿ ಪೋಸ್‌ ಕೊಟ್ಟಿದ್ದಾರೆ ಆರಾಧ್ಯ. ಆರಾಧ್ಯ ಅವರ ಹೊಸ ಕೇಶ ವಿನ್ಯಾಸಕ್ಕೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯೊಬ್ಬರು, “ಆ ಬ್ಯಾಂಗ್ಸ್ ಇಲ್ಲದೆ ಆರಾಧ್ಯ ತುಂಬಾ ಸುಂದರವಾಗಿ ಕಾಣುತ್ತಾಳೆ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ʻಐಶ್ವರ್ಯಾ ಅವರ ಪ್ರತಿರೂಪ. ಈಗ ಐಶ್ವರ್ಯಾ ಚಿಕ್ಕವಳಂತೆ ಕಾಣುತ್ತಾಳೆʼʼಎಂದು ಕಮೆಂಟ್‌ ಮಾಡಿದ್ದಾರೆ.

ಪಾರ್ಟಿಗಾಗಿ ಆರಾಧ್ಯ ಗುಲಾಬಿ ಮತ್ತು ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಐಶ್ವರ್ಯಾ ಕ್ರೀಂ ಕಲರ್‌ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು.

ಇದನ್ನೂ ಓದಿ: Aaradhya Bachchan: ಆರಾಧ್ಯ ಬಚ್ಚನ್‌ ಬಗ್ಗೆ ಇರುವ ಸುಳ್ಳು ವಿಡಿಯೊಗಳನ್ನು ತೆಗೆದುಹಾಕಿ: ಯೂಟ್ಯೂಬ್‌ಗೆ ಹೈಕೋರ್ಟ್‌ ಸೂಚನೆ

ಶಾರುಖ್‌, ಸಲ್ಮಾನ್ ಮತ್ತು ಆಮೀರ್ ಹೊರತುಪಡಿಸಿ, ಹಲವಾರು ಬಾಲಿವುಡ್ ತಾರೆಯರು ಈವೆಂಟ್‌ನಲ್ಲಿ ಕಾಣಿಸಿಕೊಂಡರು. ಇವರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಆಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದ್ದಾರೆ. ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹಾಜರಿದ್ದರು. ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಕ್ರೀಡಾಪಟುಗಳು ಕೂಡ ಆಚರಣೆಯಲ್ಲಿ ಭಾಗವಹಿಸಿದ್ದರು.

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಸಂಭ್ರಮದ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ಸಾವಿರಾರು ಗಣ್ಯರ ಆಗಮನದ ಮಧ್ಯೆಯೇ ಅದ್ಧೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

Continue Reading

ಬಾಲಿವುಡ್

Nita Ambani: ಅನಂತ್ ಅಂಬಾನಿ ಮದುವೆ: ವಿಶ್ವಂಭರಿ ಸ್ತುತಿಗೆ ನೀತಾ ಅಂಬಾನಿ ಅದ್ಭುತ ನೃತ್ಯ!

Nita Ambani: ಅನಂತ್ ಅಂಬಾನಿ ಅವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಸಹ ಅತ್ಯುತ್ತಮ ನೃತ್ಯಪಟು. ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

VISTARANEWS.COM


on

Nita Ambani Dances At Anant-Radhika Pre-Wedding Bash
Koo

ಬೆಂಗಳೂರು: ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಹಾಗೂ ರಾಧಿಕಾ ಮರ್ಚಂಟ್‌ ವಿವಾಹ ಪೂರ್ವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದಿದೆ. ನೀತಾ ಅಂಬಾನಿ ಹಾಗೂ ಅವರ ಜತೆಗೆ ಇತರರು ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದ್ದು, ವಿಶಾಲವಾದ ವೇದಿಕೆಯಲ್ಲಿ ಈ ಸಮಾರಂಭಕ್ಕೆ ಇನ್ನಷ್ಟು ಕಳೆ ಕಟ್ಟುವಂತೆ ಮಾಡಿತ್ತು.

ಅಂದ ಹಾಗೆ, ಅನಂತ್ ಅಂಬಾನಿ ಅವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಸಹ ಅತ್ಯುತ್ತಮ ನೃತ್ಯಪಟು. ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗಿದೆ.

ಅನಂತ್ ಹಾಗೂ ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಎಲ್ಲವನ್ನೂ ಭಾರತೀಯ ಸಂಪ್ರದಾಯದಂತೆಯೇ ಮಾಡಲಾಗುತ್ತಿದೆ. ದೇಶ- ವಿದೇಶಗಳಿಂದ ವಿಶೇಷವಾದ ಅತಿಥಿಗಳು ಬಂದಿದ್ದರು. ಸ್ಥಳೀಯ ಕಲಾವಿದರು ಅದ್ಭುತವಾಗಿ ಜಾಮ್ ನಗರದಲ್ಲಿ ಮದುವೆ ಪೂರ್ವ ಕಾರ್ಯಕ್ರಮ ನಡೆಯುವ ಸ್ಥಳವನ್ನು ಸಿದ್ಧಗೊಳಿಸಲಾಗಿತ್ತು. ಅಂಬಾನಿ ಕುಟುಂಬದ ಸದಸ್ಯರೇ ಸ್ವತಃ ಸ್ಥಳೀಯರಿಗೆ ಅನ್ನ- ಸಂತರ್ಪಣೆಯನ್ನು ಮಾಡಿದ್ದರು.

ಇದನ್ನೂ ಓದಿ: Nita Ambani: ಮುಂಬಯಿ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಾ ಅಂಬಾನಿ ನೃತ್ಯ; ’ರಘುಪತಿ ರಾಘವ’ ಹಾಡಿಗೆ ಭರತನಾಟ್ಯ

ಇದೀಗ ನೀತಾ ಅಂಬಾನಿ ಮತ್ತು ಅವರ ಜತೆಗೆ ದೊಡ್ಡ ತಂಡವೊಂದು ತುಂಬ ಸುಂದರವಾದ ವೇದಿಕೆ ಮೇಲೆ ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡುತ್ತಾ, ತಾಯಿ ಭಗವತಿ ಹಾಗೂ ಸ್ತ್ರೀ ಶಕ್ತಿಯ ಅದ್ಭುತವನ್ನು ತಿಳಿಸುವಂಥ ಪ್ರದರ್ಶನವನ್ನು ನೀಡಿದ್ದಾರೆ.

Continue Reading
Advertisement
Uma Chetry
ಕ್ರೀಡೆ3 mins ago

WPL 2024: ಕನ್ನಡತಿ ವೃಂದಾ ದಿನೇಶ್ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಉಮಾ ಚೆಟ್ರಿ ಆಯ್ಕೆ

Two days special casual leave for state government employees
ಕರ್ನಾಟಕ8 mins ago

Special Casual leave: ರಾಜ್ಯ ಸರ್ಕಾರಿ ನೌಕರರಿಗೆ ಎರಡು ದಿನ ವಿಶೇಷ ಸಾಂದರ್ಭಿಕ ರಜೆ

Veerappan Case Stella Mary
ಚಾಮರಾಜನಗರ9 mins ago

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

BJP MLA Shivaram Hebbar welcomes CM, Deputy CM by putting up flexes
ಕರ್ನಾಟಕ32 mins ago

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

Shivaram Hebbar and ST Somashekar welcome if they agree with party ideology CM Siddaramaiah
ಉತ್ತರ ಕನ್ನಡ42 mins ago

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

Abhishek Sharma
ಕ್ರಿಕೆಟ್47 mins ago

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

vande bharat train
ಕರ್ನಾಟಕ50 mins ago

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Text book Revision Karnataka
ಬೆಂಗಳೂರು51 mins ago

Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?

Shubman Gill
ಕ್ರೀಡೆ1 hour ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Mohammed Shafi Nashipudi (1)
ಕರ್ನಾಟಕ1 hour ago

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌