Site icon Vistara News

Deepika Padukone: ದೀಪಿಕಾಳ ಕ್ವಿಝ್‌ನಲ್ಲಿ ಆಲಿಯಾಗೆ ಫುಲ್‌ ಮಾರ್ಕ್ಸ್‌! ಅಭಿಮಾನಿಗಳಿಂದ ಭಾರೀ ಜೋಕ್ಸ್‌

Deepika Padukone and alia bhatt

#image_title

ಮುಂಬೈ: ಪೂರ್ತಿ ವಿಶ್ವವೇ ಬುಧವಾರದಂದು ವಿಶ್ವ ಯೋಗ ದಿನವನ್ನು ಆಚರಿಸಿದೆ. ಬಾಲಿವುಡ್‌ ಮಂದಿಯೂ ಕೂಡ ಯೋಗದಲ್ಲಿ ತಾವೇನು ಹಿಂದಿಲ್ಲ ಎನ್ನುವಂತೆ ತಾವು ಮಾಡುವ ಹಲವಾರು ಯೋಗಾಸನದ ಭಂಗಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಂತೆಯೇ ನಟಿ ದೀಪಿಕಾ ಪಡುಕೋಣೆ (Deepika Padukone) ಕೂಡ ಆಸನವೊಂದರ ಫೋಟೋ ಹಂಚಿಕೊಂಡಿದ್ದು, ಕ್ವಿಝ್‌ ಕೂಡ ನಡೆಸಿದ್ದಾರೆ.

ತಾವು ಮಾಡುತ್ತಿರುವ ಆಸನವೊಂದರ ಫೋಟೋ ಹಂಚಿಕೊಂಡ ದೀಪಿಕಾ, “ಇದು ಯಾವ ಆಸನವೆಂದು ಹೇಳಿ ನೋಡೋಣ” ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಸಾವಿರಾರು ಮಂದಿ ಉತ್ತರವನ್ನು ಕೊಟ್ಟಿದ್ದಾರೆ. ಅದರಲ್ಲೂ ಬಾಲಿವುಡ್‌ ಮತ್ತೊಂದು ತಾರೆ ಆಲಿಯಾ ಭಟ್‌ ಕೂಡ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸರಿಯಾದ ಉತ್ತರ ಕೊಟ್ಟ ಅವರಿಗೆ ಫುಲ್‌ ಮಾರ್ಕ್ಸ್‌ ಎಂದು ಅಭಿಮಾನಿಗಳು ಹೇಳಲಾರಂಭಿಸಿದ್ದಾರೆ.

ಇದನ್ನೂ ಓದಿ: Ranjani Raghavan: ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾದಲ್ಲಿ ಕನ್ನಡತಿ-ಆದಿತ್ಯ ಜೋಡಿ; ಹೊಸ ಹುಮ್ಮಸ್ಸು ಅಂದ್ರು ರಂಜನಿ ರಾಘವನ್
ಅಂದ ಹಾಗೆ ದೀಪಿಕಾ ಅವರು ಹಂಚಿಕೊಂಡಿದ್ದ ಯೋಗ ಭಂಗಿಯ ಹೆಸರು ಉತ್ತಾನ ಶಿಶೋಷನ. ಅದನ್ನು ಪಪ್ಪಿ ಪೋಸ್‌ ಎಂದೂ ಕರೆಯಲಾಗುತ್ತದೆ. ಆಲಿಯಾ ಕೂಡ ಪಪ್ಪಿ ಪೋಸ್‌ ಎಂದೇ ಕಾಮೆಂಟ್‌ ಮಾಡಿದ್ದಾರೆ. ಆಲಿಯಾ ರೀತಿಯಲ್ಲಿ ಹಲವಾರು ಮಂದಿ ದೀಪಿಕಾ ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿದ್ದು, ತಮಗೂ ಯೋಗದ ಬಗ್ಗೆ ಜ್ಞಾನವಿದೆ ಎಂದು ತೋರಿಸಿಕೊಂಡಿದ್ದಾರೆ.


ಆಲಿಯಾ ಹೊರೆತಾಗಿ ಸಾವಿರಾರು ಮಂದಿ ಈ ಫೋಟೋಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಗೋವಾ ಹೋಗಬೇಕೆಂದು ನಿರ್ಧರಿಸಿದಾಗ ಅಪ್ಪ ಅಮ್ಮನ ಬಳಿ ಒಪ್ಪಿಗೆ ಪಡೆಯಲು ಮಾಡುವ ಆಸನ”, “ಮಂಚದ ಕೆಳಗೆ ಸೇರಿಕೊಂಡ ಚಪ್ಪಲಿಯನ್ನು ತೆಗೆಯುವ ಆಸನ”, “ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕು ಆದರೆ ಏಳಲಾಗದೆ ಒದ್ದಾಡುವಾಗ ಮಾಡುವ ಆಸನ” ಎನ್ನುವಂತಹ ಹಲವಾರು ಹಾಸ್ಯಮಯ ಕಾಮೆಂಟ್‌ಗಳು ಈ ಪೋಸ್ಟ್‌ಗೆ ಬಂದಿವೆ.

Exit mobile version