ಮುಂಬೈ: ಮಾರ್ಚ್23ರಂದು ಮುಂಬೈನಲ್ಲಿ ನಡೆದ ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್‌ನ (Indian Sports Honours) ನಾಲ್ಕನೇ ಆವೃತ್ತಿಯ ರೆಡ್ ಕಾರ್ಪೆಟ್‌ನಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಸಾಧಕರಿಗೆ ಪ್ರಶಸ್ತಿ ನೀಡಲು ಮನರಂಜನಾ ಕ್ಷೇತ್ರದಿಂದ ಹಲವು ಗಣ್ಯರು ಉಪಸ್ಥಿತರಿದ್ದರು. ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಕೂಡ ರೆಡ್ ಕಾರ್ಪೆಟ್ ಮೇಲೆ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದಾರೆ. ಆದರೆ ಜೋಡಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಅಭಿಮಾನಿಗಳು ಅವರಿಬ್ಬರ ಹಾವಭಾವ ನೋಡಿ ಊಹಿಸಿದ್ದಾರೆ. ಈವೆಂಟ್‌ನಲ್ಲಿ ರಣವೀರ್ ಅವರು ದೀಪಿಕಾ ಅವರ ಕೈ ಹಿಡಿಯಲು ಪ್ರಯತ್ನಿಸಿದಾಗ, ನಟಿ ನಿರ್ಲಕ್ಷಿಸಿ ಮುಂದೆ ಹೋಗಿರುವ ವಿಡಿಯೊ ವೈರಲ್ ಆಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮಾಧ್ಯಮಗಳು ಹಂಚಿಕೊಂಡ ವಿಡಿಯೊದಲ್ಲಿ, ದೀಪಿಕಾ ಪಡುಕೋಣೆ ತನ್ನ ಕಾರಿನಿಂದ ಇಳಿಯುತ್ತಿದ್ದಂತೆ ರಣವೀರ್ ಸಿಂಗ್ ಕಾಯುತ್ತಿರುವುದನ್ನು ಕಾಣಬಹುದು. ರೆಡ್ ಕಾರ್ಪೆಟ್‌ಗೆ ಎಂಟ್ರಿ ನೀಡುವ ಮೊದಲು ದಂಪತಿ ತಮ್ಮ ಬಟ್ಟೆಗಳನ್ನು ಸರಿಮಾಡಿಕೊಂಡು ಕೆಲವು ಗಣ್ಯರೊಂದಿಗೆ ಮಾತನಾಡುತ್ತಾರೆ. ಮುಂದೆ ನಡೆಯುವಾಗ, ರಣವೀರ್ ಅವರು ದೀಪಿಕಾ ಅವರ ಕೈಯನ್ನು ಹಿಡಿಯಲು ಪ್ರಯತ್ನಿಸಿದಾಗ ನಟಿ ನಿರ್ಲಕ್ಷಿಸಿ ಮುಂದೆ ಹೋಗುತ್ತಾರೆ. ಬಳಿಕ ಇಬ್ಬರೂ ರೆಡ್ ಕಾರ್ಪೆಟ್‌ನಲ್ಲಿ ಪೋಸ್ ನೀಡಿದ್ದಾರೆ. ಈ ವಿಡಿಯೊ ನೋಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹಲವಾರು ಅಭಿಮಾನಿಗಳು ಕಮೆಂಟ್ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬರು, “ಅವರ ಆಂಗಿಕ ಭಾಷೆ ಸಂಪೂರ್ಣವಾಗಿ ಬದಲಾಗಿದೆʼ ಎಂದು ನನಗೆ ಅನಿಸುತ್ತದೆ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು, , “ದೀಪಿಕಾ ಅವರು ಕೋಪಗೊಂಡಿರಬೇಕುʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʻರಣವೀರ್‌ಗಿಂತ ತಾನು ದೊಡ್ಡ ಸೆಲೆಬ್ರಿಟಿ ಎನ್ನುವ ಅಹಂಕಾರವಿರಬಹುದೇನೋʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ;Deepika Padukone: ಆಸ್ಕರ್ ವೇದಿಕೆ ಮೇಲೆ ದೀಪಿಕಾ ಪಡುಕೋಣೆ ಮಾಡಿದ ಭಾಷಣ ಈಗ ರ‍್ಯಾಪ್ ಸಾಂಗ್, ಇಲ್ಲಿದೆ ವಿಡಿಯೊ
ವೈರಲ್ ವಿಡಿಯೊ
ರಣವೀರ್ ಸಿಂಗ್ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ,. ಗಲ್ಲಿ ಬಾಯ್ ಸಿನಿಮಾ ನಂತರ ಆಲಿಯಾ ಭಟ್ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರವು ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆಲಿಯಾ ಮತ್ತು ರಣವೀರ್ ಇತ್ತೀಚೆಗೆ ಕಾಶ್ಮೀರದಲ್ಲಿ ಚಿತ್ರೀಕರಣವನ್ನು ಮುಗಿಸಿದ್ದರು. ರಣವೀರ್ ಸಿಂಗ್ ಕೊನೆಯದಾಗಿ ಸರ್ಕಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಪೂಜಾ ಹೆಗ್ಡೆ ನಾಯಕಿಯರಾಗಿ ನಟಿಸಿದ್ದರು.
ಮತ್ತೊಂದೆಡೆ, ದೀಪಿಕಾ ಕೊನೆಯ ಬಾರಿಗೆ ಪಠಾಣ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆಸ್ಕರ್ 2023ರಲ್ಲಿ ಪ್ರಶಸ್ತಿ ಪ್ರದಾನವನ್ನೂ ಮಾಡಿದ್ದಾರೆ.