Deepika Padukone: ಆಸ್ಕರ್‌ ವೇದಿಕೆ ಮೇಲೆ ದೀಪಿಕಾ ಪಡುಕೋಣೆ ಮಾಡಿದ ಭಾಷಣ ಈಗ ರ‍್ಯಾಪ್‌ ಸಾಂಗ್‌, ಇಲ್ಲಿದೆ ವಿಡಿಯೊ - Vistara News

ದೇಶ

Deepika Padukone: ಆಸ್ಕರ್‌ ವೇದಿಕೆ ಮೇಲೆ ದೀಪಿಕಾ ಪಡುಕೋಣೆ ಮಾಡಿದ ಭಾಷಣ ಈಗ ರ‍್ಯಾಪ್‌ ಸಾಂಗ್‌, ಇಲ್ಲಿದೆ ವಿಡಿಯೊ

Deepika Padukone: ದೀಪಿಕಾ ಪಡುಕೋಣೆ ಅವರು ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆ ಮಾಡಿದ ಭಾಷಣವನ್ನೇ ಕೆನಡಾದ ಡಿಜೆಯೊಬ್ಬರು ರ‍್ಯಾಪ್‌ ಸಾಂಗ್‌ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

VISTARANEWS.COM


on

Deepika Padukone's Naatu Naatu Oscars Speech Turned Into A Rap Song
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಪ್ರಸಕ್ತ ಸಾಲಿನ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತದ ಪಾಲಿಗೆ ಹಲವು ದಿಸೆಯಲ್ಲಿ ಮಹತ್ವದ್ದಾಗಿತ್ತು. ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು, ದಿ ಎಲಿಫೆಂಟ್‌ ವಿಸ್ಪರರ್ಸ್‌ ಸಾಕ್ಷ್ಯಚಿತ್ರವು ಆಸ್ಕರ್‌ ಪ್ರಶಸ್ತಿ ಪಡೆದವು. ಹಾಗೆಯೇ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಣೆ ಮಾಡಿದ್ದು ಗಮನ ಸೆಳೆಯಿತು. ಈಗ ದೀಪಿಕಾ ಪಡುಕೋಣೆ ಅವರು ಮಾಡಿದ ಭಾಷಣವು ರ‍್ಯಾಪ್‌ ಸಾಂಗ್‌ ಆಗಿ ಬದಲಾಗಿದೆ. ಈ ವಿಡಿಯೊ ಕೂಡ ವೈರಲ್‌ ಆಗಿದೆ.

ಹೌದು, ಕೆನಡಾದ ಡಿಜಿಯೊಬ್ಬರು ದೀಪಿಕಾ ಪಡುಕೋಣೆ ಅವರ ಭಾಷಣವನ್ನೇ ಟೋಟಲ್‌ ಬ್ಯಾಂಗರ್‌ (Total Banger) ಹೆಸರಿನಲ್ಲಿ ರ‍್ಯಾಪ್‌ ಸಾಂಗ್‌ ಆಗಿ ಮಾಡಿದ್ದಾರೆ. ಡಿಜೆಯನ್ನು ಸಿಕ್‌ಕಿಕ್‌ (SickKick) ಎಂಬುದಾಗಿ ಗುರುತಿಸಲಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ವಿಡಿಯೊ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಕ್ರಿಯೇಟಿವ್‌ ಕಂಟೆಂಟ್‌ಗಳಿಗೆ, ಸೃಜನಶೀಲ ಚಟುವಟಿಕೆಗಳಿಗೆ ಮಾನ್ಯತೆ ಸಿಗುತ್ತದೆ ಎಂಬುದಕ್ಕೆ ಇವರು ತೋರಿದ ಸೃಜನಶೀಲತೆಯೇ ಸಾಕ್ಷಿಯಾಗಿದೆ.

ಇಲ್ಲಿದೆ ದೀಪಿಕಾ ಭಾಷಣದ ರ‍್ಯಾಪ್‌ ಸಾಂಗ್

“ನಾನು ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸುತ್ತಿದ್ದೆ. ಇದೇ ವೇಳೆ ದೀಪಿಕಾ ಪಡುಕೋಣೆ ಅವರ ಅದ್ಭುತ ಭಾಷಣವನ್ನು ಕೇಳಿದೆ. ಇದರಿಂದ ಸ್ಫೂರ್ತಿಗೊಂಡು ರ‍್ಯಾಪ್‌ ಸಾಂಗ್‌ ಮಾಡಿದ್ದೇನೆ. ಅದರ ಹೆಸರು ಟೋಟಲ್‌ ಬ್ಯಾಂಗರ್‌” ಎಂದು ಸಿಕ್‌ಕಿಕ್‌ ಬರೆದುಕೊಂಡಿದ್ದಾರೆ. ಟೋಟಲ್‌ ಬ್ಯಾಂಗರ್‌ ಎಂಬ ಪದವನ್ನು ದೀಪಿಕಾ ಪಡುಕೋಣೆ ಅವರು ಭಾಷಣದಲ್ಲಿ ಬಳಸಿದ್ದರು. ಅದಕ್ಕೇ, ಡಿಜೆ ಅವರು ಹಿನ್ನೆಲೆ ಸಂಗೀತ ನೀಡಿ, ರ‍್ಯಾಪ್‌ ಸಾಂಗ್‌ ಮಾಡಿದ್ದಾರೆ.

ವಿಡಿಯೊ ಶೇರ್‌ ಮಾಡಿದ ದೀಪಿಕಾ

ಸಿಕ್‌ಕಿಕ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಲಾದ ವಿಡಿಯೊವನ್ನು ಖುದ್ದು ದೀಪಿಕಾ ಪಡುಕೋಣೆ ಅವರೇ ಇನ್‌ಸ್ಟಾಗ್ರಾಂ ಸ್ಟೋರಿಯಾಗಿ ಶೇರ್‌ ಮಾಡಿದ್ದಾರೆ. ರ‍್ಯಾಪ್‌ ಸಾಂಗ್‌ಗೆ ದೀಪಿಕಾ ಅಭಿಮಾನಿಗಳು ಖುಷಿಯಾಗಿದ್ದು, ಪ್ರತಿಕ್ರಿಯೆಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ಘೋಷಣೆ ವೇಳೆ ದೀಪಿಕಾ ಪಡುಕೋಣೆ ಅವರು ಆರ್‌ಆರ್‌ಆರ್‌ ಸಿನಿಮಾ ಹಾಗೂ ನಾಟು ನಾಟು ಹಾಡಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಭಾಷಣದ ವಿಡಿಯೊ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು.

ಅಲ್ಲದೆ, ದೀಪಿಕಾ ಪಡುಕೋಣೆ ಅವರು ಆಸ್ಕರ್‌ ವೇದಿಕೆ ಮೇಲೆ ನಿರೂಪಣೆ ಮಾಡುವಾಗ ಧರಿಸಿದ್ದ ಕ್ಲಾಸಿಕ್‌ ಕಪ್ಪು ಗೌನ್‌ ಬಗ್ಗೆಯೂ ಚರ್ಚೆಯಾಗಿತ್ತು. ದೀಪಿಕಾ ಅವರ ಧ್ವನಿ, ಸ್ಫುಟವಾಗಿ ಬಂದ ನುಡಿಗಳು, ಮನಮೋಹಕ ಉಡುಗೆಯು ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಈಗ ಅವರ ಭಾಷಣವೇ ಹಾಡಾಗಿ ಪರಿವರ್ತನೆಯಾಗಿದ್ದು ವಿಶೇಷವಾಗಿದೆ. ಅಷ್ಟೇ ಏಕೆ, ಆಸ್ಕರ್‌ ಪಾರ್ಟಿಯ ವೇಳೆ ದೀಪಿಕಾ ಧರಿಸಿದ್ದ ಉಡುಗೆಯೂ ಮನಮೋಹಕವಾಗಿತ್ತು ಎಂದು ಅವರ ಅಭಿಮಾನಿಗಳು ಹೇಳಿದ್ದರು.

ಇದನ್ನೂ ಓದಿ: Oscars 2023: ಆಸ್ಕರ್‌ ಪಾರ್ಟಿಯ ಬಳಿಕ ಶಾರ್ಟ್‌ ಪಿಂಕ್‌ ಡ್ರೆಸ್‌ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Viral News: ಉತ್ತರಪ್ರದೇಶದ ಬಾರಾಬಂಕಿ ಗ್ರಾಮದಲ್ಲಿ ಮದುವೆ ಮನೆಯೊಂದರಲ್ಲಿ ಉಡುಗೊರೆ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಸಹೋದರಿಯ ಮದುವೆಯ ಸಂದರ್ಭದಲ್ಲಿ ಆಕೆಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದ ಚಂದ್ರಪ್ರಕಾಶ್ ಮಿಶ್ರಾನನ್ನು ಪತ್ನಿ ಮನೆಯವರು ಕೊಲೆ ಮಾಡಿದ್ದಾರೆ.

VISTARANEWS.COM


on

Viral News
Koo

ಲಕ್ನೋ: ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಕಾರಣಕ್ಕೂ ಜಗಳ ನಡೆಯುವುದು ಸಾಮಾನ್ಯ ಎಂಬಂತಾಗಿದೆ. ಮದುವೆ ಮನೆಯಲ್ಲಿ ನೆಚ್ಚಿನ ತಿಂಡಿ ಬಡಿಸಲಿಲ್ಲ, ಸರಿಯಾಗಿ ಉಪಚಾರ ಮಾಡಲಿಲ್ಲ ಎಂಬಿತ್ಯಾದಿ ಕಾರಣಕ್ಕೆ ಜಗಳ ನಡೆದು ಸಂಭ್ರಮದ ಮನೆ ಸ್ಮಶಾನವಾಗಿ ಮಾರ್ಪಟ್ಟಿದ್ದನ್ನು ನೋಡಿದ್ದೇವೆ. ಇಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಕಲಹ ವ್ಯಕ್ತಿಯೊಬ್ಬನ ಜೀವವನ್ನೇ ಬಲಿ ಪಡೆದಿದೆ. ಉತ್ತರಪ್ರದೇಶದ ಬಾರಾಬಂಕಿ ಗ್ರಾಮದಲ್ಲಿ ಮದುವೆ ಮನೆಯೊಂದರಲ್ಲಿ ಉಡುಗೊರೆ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆ ಮೂಲಕ ಸಂಭ್ರಮದಿಂದ ಕೂಡಿದ್ದ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ (Viral News).

ಘಟನೆ ವಿವರ

ಚಂದ್ರಪ್ರಕಾಶ್ ಮಿಶ್ರಾ (35) ಕೊಲೆಯಾದ ವ್ಯಕ್ತಿ. ತನ್ನ ಸಹೋದರಿಯ ಮದುವೆಯ ಸಂದರ್ಭದಲ್ಲಿ ಆಕೆಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದೇ ಆತ ಮಾಡಿದ ದೊಡ್ಡ ತಪ್ಪು! ಹೌದು, ಚಂದ್ರಪ್ರಕಾಶ್ ಮಿಶ್ರಾ ತನ್ನ ತಂಗಿಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ನೀಡಲು ಚಿಂತನೆ ನಡೆಸಿದ್ದರು. ಇದರಿಂದ ಕೋಪಗೊಂಡ ಆತನ ಪತ್ನಿ ಚಾಬಿ ಈ ವಿಚಾರವನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಅಸಮಾಧಾನಗೊಂಡ ಆಕೆಯ ಮನೆಯವರು ಚಂದ್ರಪ್ರಕಾಶ್ ಮಿಶ್ರಾ ಅವರನ್ನು ಚೆನ್ನಾಗಿ ಥಳಿಸಿದ್ದರು. ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ʼʼಏಪ್ರಿಲ್‌ 26ಕ್ಕೆ ಚಂದ್ರಪ್ರಕಾಶ್ ಮಿಶ್ರಾ ಅವರ ತಂಗಿಯ ಮದುವೆ ನಿಗದಿಯಾಗಿದೆ. ಹೀಗಾಗಿ ಅವರು ಪ್ರೀತಿಯ ತಂಗಿಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ಕೊಡಲು ಯೋಜನೆ ಹಾಕಿಕೊಂಡಿದ್ದರು. ಅದನ್ನು ಪತ್ನಿ ಚಾಬಿ ಬಳಿ ಹೇಳಿಕೊಂಡಿದ್ದರು. ಆದರೆ ಇದನ್ನು ಕೇಳಿ ಚಾಬಿ ಉರಿದು ಬಿದ್ದಳು. ಈ ವಿಚಾರವಾಗಿ ದಂಪತಿಯ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವೇ ನಡೆಯಿತುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ʼʼಅಷ್ಟಕ್ಕೇ ಸುಮ್ಮನಾಗದ ಚಾಬಿ ತನ್ನ ಸಹೋದರರನ್ನು ಕರೆದು ಚಂದ್ರಪ್ರಕಾಶ್‌ಗೆ ಪಾಠ ಕಲಿಸುವಂತೆ ಹೇಳಿದ್ದಾಳೆ. ತಂಗಿಯ ಕರೆಗೆ ಓಗೊಟ್ಟು ಬಂದ ಚಾಬಿಯ ಸಹೋದರರು ಚಂದ್ರಪ್ರಕಾಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಕೋಲುಗಳಿಂದ ಥಳಿಸಿದ್ದಾನೆ. ಕೊನೆಗೆ ಚಂದ್ರಪ್ರಕಾಶ್‌ ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದರೆ ಆಸ್ಪತ್ರೆಯಲ್ಲಿ ನಿಧನರಾದರುʼʼ ಎಂದು ಅಧಿಕಾರಿಗಳು ಘಟನೆಯನ್ನು ವಿವರಿಸಿದ್ದಾರೆ.

ಸದ್ಯ ಪೊಲೀಸರು ಘಟನೆಯ ಸಂಬಂಧ ಐವರನ್ನು ಬಂಧಿಸಿದ್ದಾರೆ. ಚಾಬಿ ಮತ್ತು ಆಕೆಯ ಸಹೋದರರು ಸೇರಿ 5 ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮದುವೆ ಮನೇಲಿ ರಸಗುಲ್ಲಾಗಾಗಿ ಹೊಡೆದಾಟ; ಆರು ಮಂದಿಯ ಪರಿಸ್ಥಿತಿ ಗಂಭೀರ!

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ವಿವಾಹ ವಾರ್ಷಿಕೋತ್ಸವದ ಉಡುಗೊರೆಯನ್ನು ನೀಡದ ಕಾರಣಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ತನ್ನ ಪತಿಗೆ ಚಾಕುವಿನಿಂದ ಇರಿದಿದ್ದಳು. ಕೂಡಲೇ ಎಚ್ಚೆತ್ತುಕೊಂಡ ಆತ ತಪ್ಪಿಸಿಕೊಂಡು ಪಾರಾಗಿದ್ದ. ಬಳಿಕ ನೆರೆಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತನ್ನ ಅಜ್ಜ ನಿಧನ ಹೊಂದಿದ್ದರಿಂದ ಪತ್ನಿಗೆ ಉಡುಗೊರೆ ನೀಡಿರಲಿಲ್ಲ. ಇದೇ ಕಾರಣಕ್ಕೆ ಆಕೆ ಹಲ್ಲೆ ನಡೆಸಿದ್ದಳು ಎಂದು ಬಳಿಕ ಆತ ದೂರು ನೀಡಿದ್ದ.

Continue Reading

ದೇಶ

VVPAT Verification: ವಿವಿಪ್ಯಾಟ್‌ ಕೇಸ್; ಚುನಾವಣೆಯನ್ನು ನಾವು ನಿಯಂತ್ರಿಸಲಾಗದು ಎಂದ ಸುಪ್ರೀಂಕೋರ್ಟ್; ಮತಯಂತ್ರ ವಿರೋಧಿಗಳಿಗೆ ಹಿನ್ನಡೆ

VVPAT Verification: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ತಾಳೆ ಮಾಡಬೇಕು ಎಂಬುದಾಗಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಚುನಾವಣೆ ಆಯೋಗದಲ್ಲಿ ಬದಲಾವಣೆಗಳನ್ನು ತರುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿತು. ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿತು.

VISTARANEWS.COM


on

VVPAT Verification
Koo

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ತಾಳೆ ಮಾಡುವ ದಿಸೆಯಲ್ಲಿ ಇವಿಎಂ ಬಳಿ ಇರಿಸುವ ವಿವಿಪ್ಯಾಟ್‌ಗಳ ತಾಳೆಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ನಾವು ಚುನಾವಣೆ ಆಯೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಹಾಕಿ ನೋಡಬೇಕು ಹಾಗೂ ವಿವಿಪ್ಯಾಟ್‌ ಸ್ಲಿಪ್‌ಗಳನ್ನು (VVPAT Verification) ಬ್ಯಾಲೆಟ್‌ ಬಾಕ್ಸ್‌ನಲ್ಲಿ ಠೇವಣಿ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗಳ ಸಂಬಂಧಿಸಿದಂತೆ ಚುನಾವಣೆ ಆಯೋಗದ (Election Commission) ಸ್ಪಷ್ಟನೆ ಪಡೆದ ಸರ್ವೋಚ್ಚ ನ್ಯಾಯಾಲಯವು (Supreme Court), ಶೇ.100ರಷ್ಟು ತಾಳೆಗೆ ನಿರ್ದೇಶನ ನೀಡಬೇಕು ಎಂಬ ಬಗೆಗಿನ ತೀರ್ಪನ್ನು ಕಾಯ್ದರಿಸಿತು.

“ನಾವು ಚುನಾವಣೆ ಆಯೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಚುನಾವಣೆ ಆಯೋಗವು ದೇಶದ ಸಂವಿಧಾನದ ಅನ್ವಯ ರಚಿಸಲಾದ ಸಂಸ್ಥೆಯಾಗಿದೆ. ಹಾಗಾಗಿ, ಅದರ ಕಾರ್ಯಚಟುವಟಿಕೆಗಳನ್ನು ನಾವು ನಿಯಂತ್ರಿಸಲು ಆಗುವುದಿಲ್ಲ. ಅನುಮಾನದ ಆಧಾರದ ಮೇಲೆ ನಾವು ಆದೇಶ ಹೊರಡಿಸಲು ಬರುವುದಿಲ್ಲ. ನೀವು (ಅರ್ಜಿದಾರರು) ಅನುಮಾನ ವ್ಯಕ್ತಪಡಿಸಿದಿರಿ ಎಂಬ ಮಾತ್ರಕ್ಕೆ ನಾವು ಯಾವುದೇ ಆದೇಶ ಹೊರಡಿಸಲು ಆಗುವುದಿಲ್ಲ. ಹಾಗೆಯೇ, ನಾವು ನಿಮ್ಮ ಯೋಚನಾ ಲಹರಿಯನ್ನೂ ಬದಲಿಸಲ್ಲ” ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತಾ ನೇತೃತ್ವದ ನ್ಯಾಯಪೀಠ ತಿಳಿಸಿತು.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, “ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳು ಆಗಬೇಕು. ಇವಿಎಂ ಮತಗಳನ್ನು ವಿವಿಪ್ಯಾಟ್‌ ಜತೆ ಶೇ.100ಕ್ಕೆ 100ರಷ್ಟು ತಾಳೆ ಮಾಡಬೇಕು” ಎಂಬುದಾಗಿ ತಿಳಿಸಿದರು. ಆಗ ನ್ಯಾಯಾಲಯವು, “ಚುನಾವಣೆ ಆಯೋಗದ ಪ್ರಕ್ರಿಯೆಗಳನ್ನು ಬದಲಿಸಲು, ಅದರ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ತಿಳಿಸಿತು.

ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಮತಯಂತ್ರಗಳ ಜತೆಗೆ ವಿವಿಪ್ಯಾಟ್‌ಗಳನ್ನೂ (ವೋಟರ್‌ ವೇರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್)‌ ಇರಿಸುತ್ತದೆ. ಮತಎಣಿಕೆ ಮಾಡುವಾಗ ಇವಿಎಂನಲ್ಲಿ ದಾಖಲಾದ ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಐದು ಇವಿಎಂಗಳನ್ನು ಆಯ್ಕೆ ಮಾಡಿಕೊಂಡು, ನಂತರ ಇವಿಎಂಗಳ ಜತೆ ತಾಳೆ ಮಾಡುವ ವಿಧಾನ ಇದೆ. ಆದರೆ, ಎಲ್ಲ ಇವಿಎಂಗಳ ಜತೆ ತಾಳೆ ಹಾಕಬೇಕು ಎಂಬುದು ಅರ್ಜಿದಾರರ ವಾದವಾಗಿದೆ.

ಇದನ್ನು ಓದಿ: ವಿಸ್ತಾರ explainer: VVPAT Verification: ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

Continue Reading

ದೇಶ

Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

Sunita Williams: ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

VISTARANEWS.COM


on

Sunita Williams
Koo

ನ್ಯೂಯಾರ್ಕ್‌: ಭಾರತೀಯ ಮೂಲದ ವಿಖ್ಯಾತ ಗಗನಯಾತ್ರಿ (Astronaut) ಸುನೀತಾ ಎಲ್. ವಿಲಿಯಮ್ಸ್ (Sunita Williams), ತಮ್ಮ ಮೂರನೇ ಬಾಹ್ಯಾಕಾಶ ಯಾತ್ರೆಯನ್ನು (Space mission) ನಡೆಸಲು ಸಜ್ಜಾಗಿದ್ದಾರೆ. ಅಮೆರಿಕದ ನಾಸಾ (NASA) ಸಂಸ್ಥೆಯ ಗಗನಯಾತ್ರಿಯಾದ ಸುನೀತಾ, ಪ್ರಸ್ತುತ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ. ಇದು ಆ ವಾಹನದ ಮೊದಲ ಸಿಬ್ಬಂದಿ ವಿಮಾನ. ಮತ್ತು ಸುನೀತಾಗೆ ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಮೂರನೇ ಕಾರ್ಯಾಚರಣೆಯಾಗಿದೆ.

“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏಜೆನ್ಸಿಯ ಬೋಯಿಂಗ್ ಕ್ರೂ ಫ್ಲೈಟ್ ಪರೀಕ್ಷೆಯ ತಯಾರಿಗಾಗಿ NASA ಎರಡು ಉಡಾವಣೆಗಳನ್ನು ಆಯೋಜಿಸಿದೆ. ಏಪ್ರಿಲ್ 25ರಂದು EDTನಲ್ಲಿ ಹಾಗೂ ಮೇ 6ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಲ್ಲಿ ಬಾಹ್ಯಾಕಾಶ ಉಡಾವಣಾ ಸಂಕೀರ್ಣ-41ರಿಂದ.”

ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ಭಾಗವಾಗಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ವಿಮಾನದ ಉಡಾವಣೆ, ಡಾಕಿಂಗ್ ಮತ್ತು ಭೂಮಿಗೆ ಹಿಂತಿರುಗುವುದು ಸೇರಿದಂತೆ ಸ್ಟಾರ್‌ಲೈನರ್ ಸಿಸ್ಟಮ್‌ನ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗಿದೆ.

ಸುನಿತಾ ವಿಲಿಯಮ್ಸ್ ಅವರ ಪರಿಣತಿ

ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಹಾರಾಟದ ಮೊದಲ ಅನುಭವವು ಡಿಸೆಂಬರ್ 9, 2006ರಿಂದ ಜೂನ್ 22, 2007ರವರೆಗೆ ನಡೆಯಿತು. ʼಎಕ್ಸ್‌ಪೆಡಿಶನ್ 14/15ʼನೊಂದಿಗೆ ಪ್ರಾರಂಭವಾಯಿತು. ಅವರು STS-116ನ ಸಿಬ್ಬಂದಿಯೊಂದಿಗೆ ಸಾಗಿ ಫ್ಲೈಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಅವರು ಒಟ್ಟು 29 ಗಂಟೆ 17 ನಿಮಿಷಗಳ ನಾಲ್ಕು ಬಾಹ್ಯಾಕಾಶ ನಡಿಗೆಯೊಂದಿಗೆ ಮಹಿಳೆಯರ ದಾಖಲೆಯನ್ನು ಸ್ಥಾಪಿಸಿದರು. ಜೂನ್ 2007ರಲ್ಲಿ ಯಾನ ಮುಗಿಸಿ STS-117 ಸಿಬ್ಬಂದಿಯೊಂದಿಗೆ ಭೂಮಿಗೆ ಮರಳಿದರು.

ಜುಲೈ 14ರಿಂದ ನವೆಂಬರ್ 18, 2012ರವರೆಗೆ ಅವರ ಎರಡನೇ ಬಾಹ್ಯಾಕಾಶ ಯಾನ, ಎಕ್ಸ್‌ಪೆಡಿಶನ್ 32/33. ಅವರು ರಷ್ಯಾದ ಸೋಯುಜ್ ಕಮಾಂಡರ್ ಯೂರಿ ಮಾಲೆನ್‌ಚೆಂಕೊ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಫ್ಲೈಟ್ ಇಂಜಿನಿಯರ್ ಅಕಿಹಿಕೊ ಹೊಶೈಡ್ ಅವರೊಂದಿಗೆ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಜುಲೈ 2012ರಂದು ಹೋದರು. ಕಕ್ಷೆಯ ಪ್ರಯೋಗಾಲಯದಲ್ಲಿ ಸಂಶೋಧನೆ ಮತ್ತು ಪರಿಶೋಧನೆ ನಡೆಸುತ್ತ ನಾಲ್ಕು ತಿಂಗಳು ಕಳೆದಳು.

ಈ ಕಾರ್ಯಾಚರಣೆಗಳ ಸಮಯದಲ್ಲಿ ಅವರು ಹಲವು ಸಂಶೋಧನೆ ನಡೆಸಿದರು. ಬಾಹ್ಯಾಕಾಶ ನಡಿಗೆಗಳನ್ನು ನಡೆಸಿದರು ಮತ್ತು ಬಾಹ್ಯಾಕಾಶದ ಪರಿಶೋಧನೆಗೆ ಗಮನಾರ್ಹವಾಗಿ ಕೊಡುಗೆ ನೀಡಿದರು. ಸುನೀತಾ ವಿಲಿಯಮ್ಸ್ 50 ಗಂಟೆಗಳು ಮತ್ತು 40 ನಿಮಿಷಗಳ ಸಮಯದೊಂದಿಗೆ ದಾಖಲೆ ಸಮಯದ ಬಾಹ್ಯಾಕಾಶ ನಡಿಗೆ ದಾಖಲೆ ಮಾಡಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವ ಸಂದಿವೆ. ಅವರು US ನೌಕಾಪಡೆಯ ನಿವೃತ್ತ ಕ್ಯಾಪ್ಟನ್. ಅವರಿಗೆ ಎರಡು ಬಾರಿ ರಕ್ಷಣಾ ಉನ್ನತ ಸೇವಾ ಪದಕ, ಲೀಜನ್ ಆಫ್ ಮೆರಿಟ್, ನೌಕಾಪಡೆಯ ಪ್ರಶಂಸಾ ಪದಕ ಎರಡು ಬಾರಿ, ನೌಕಾಪಡೆ ಮತ್ತು ಮೆರೈನ್ ಕಾರ್ಪ್ಸ್ ಸಾಧನೆ ಪದಕ ಮತ್ತು ಮಾನವೀಯ ಸೇವಾ ಪದಕ ನೀಡಲಾಗಿದೆ. ಪ್ರಸ್ತುತ ವಿಲಿಯಮ್ಸ್ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಭಾರತೀಯನನ್ನು ಇಳಿಸುವ ತನಕ ಬಿಡಲ್ಲ; ಇಸ್ರೋ ಅಧ್ಯಕ್ಷ ಮಹತ್ವದ ಘೋಷಣೆ

Continue Reading

ಪ್ರಮುಖ ಸುದ್ದಿ

PM Narendra Modi: “ಅಮೆರಿಕಕ್ಕೆ ಮೋದಿಯಂಥ ನಾಯಕ ಬೇಕು” ಜೆಪಿ ಮೋರ್ಗನ್‌ ಸಂಸ್ಥೆ ಸಿಇಒ ಜೇಮಿ ಶ್ಲಾಘನೆ

“ನರೇಂದ್ರ ಮೋದಿ (PM Narendra Modi) 40.0 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದಾರೆ. ಅಲ್ಲಿ ಶೌಚಾಲಯಗಳಿಲ್ಲದ 40 ಕೋಟಿ ಜನರು ಇದ್ದಾರೆ. ನಾವಿಲ್ಲಿ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಮೋದಿಯವರಿಗೆ ಈ ಬಗ್ಗೆ ಉಪನ್ಯಾಸ ನೀಡುತ್ತೇವೆ” ಎಂದು ಜೇಮಿ ಡೀಮನ್ ಹೇಳಿದ್ದಾರೆ.

VISTARANEWS.COM


on

pm narendra modi jp morgan jamie dimon
Koo

ಹೊಸದಿಲ್ಲಿ: ಅಮೆರಿಕಕ್ಕೆ (US) ನರೇಂದ್ರ ಮೋದಿ (PM Narendra Modi) ಅವರಂಥ ದೃಢ ನಾಯಕತ್ವದ (Leadership) ಅಗತ್ಯವಿದೆ. ಅವರು ಭಾರತದಲ್ಲಿ (India) ನಾವು ಊಹಿಸಲಸಾಧ್ಯವಾದಷ್ಟು ಕೆಲಸಗಳನ್ನು ಮಾಡಿದ್ದಾರೆ” ಎಂದು ಖ್ಯಾತ ಬಹುರಾಷ್ಟ್ರೀಯ ಸಂಸ್ಥೆ ಜೆಪಿ ಮೋರ್ಗನ್‌ನ ಸಿಇಒ ಜೇಮಿ ಡೀಮನ್‌ (JPMorgan CEO Jamie Dimon) ಹೇಳಿದ್ದಾರೆ.

ಐಜೆಪಿ ಮೋರ್ಗಾನ್ ಚೇಸ್ ಸಿಇಒ ಜೇಮಿ ಡಿಮೊನ್ ಅವರು ಮಂಗಳವಾರ ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಮೋದಿ 40.0 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದಾರೆ. ಅಲ್ಲಿ ಶೌಚಾಲಯಗಳಿಲ್ಲದ 40 ಕೋಟಿ ಜನರು ಇದ್ದಾರೆ. ನಾವಿಲ್ಲಿ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಮೋದಿಯವರಿಗೆ ಈ ಬಗ್ಗೆ ಉಪನ್ಯಾಸ ನೀಡುತ್ತೇವೆ” ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯಕ್ಷಮತೆಯನ್ನು ಜೇಮಿ ಶ್ಲಾಘಿಸಿದ್ದಾರೆ. “ಮೋದಿಯವರು ಭಾರತದಲ್ಲಿ ನಂಬಲಾಗದಂಥ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ. “ಭಾರತದಲ್ಲಿ 70 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಅವರಿಗೆ ಪಾವತಿ ವರ್ಗಾವಣೆಗಳು ನಡೆಯುತ್ತಿವೆ. ಅವರು ಭಾರತದಲ್ಲಿ ಊಹಾತೀತ ಶಿಕ್ಷಣ ವ್ಯವಸ್ಥೆ, ಮೂಲಸೌಕರ್ಯಗಳನ್ನು ಮಾಡಿದ್ದಾರೆ. ಪಿಎಂ ಮೋದಿ ಕಠಿಣ ವ್ಯಕ್ತಿತ್ವದರಾಗಿರುವುದರಿಂದ ಹಳೆಯ ಅಧಿಕಾರಶಾಹಿ ವ್ಯವಸ್ಥೆಯನ್ನು ಮುರಿದು ಅವರು ತಮ್ಮ ಇಡೀ ದೇಶವನ್ನು ಮೇಲೆತ್ತುತ್ತಿದ್ದಾರೆ. ಅಮೆರಿಕದಲ್ಲಿ ಅಂಥವರು ಸ್ವಲ್ಪ ಬೇಕಿದೆ,” ಎಂದಿದ್ದಾರೆ ಜೇಮಿ.

“ಅಲ್ಲಿ ಪ್ರತಿಯೊಬ್ಬ ನಾಗರಿಕನನ್ನು ಬೆರಳಚ್ಚು ಅಥವಾ ಕಣ್ಣುಗುಡ್ಡೆಯಿಂದ ಗುರುತಿಸಲಾಗುತ್ತದೆ” ಎಂದು 18 ವರ್ಷಗಳಿಂದ ಯುಎಸ್‌ನ ಅತಿ ದೊಡ್ಡ ಸಾಲದಾತ ಸಂಸ್ಥೆಯ ಮುಖ್ಯಸ್ಥ ಡಿಮನ್ ಹೇಳಿದರು. ಯುಎಸ್‌ನಲ್ಲಿ ರಾಷ್ಟ್ರೀಯ ಸಾಲ, ಹಣದುಬ್ಬರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಭೌಗೋಳಿಕ ರಾಜಕೀಯ ಸಂಘರ್ಷಗಳ ಬಗ್ಗೆ ಡಿಮನ್‌ ಎಚ್ಚರಿಕೆ ನೀಡಿದರು. ಹಣದುಬ್ಬರ ಮತ್ತು ಅದರ ಜೊತೆಗೆ ಹೆಚ್ಚಿನ ಬಡ್ಡಿದರಗಳು ನಿರೀಕ್ಷೆಗಿಂತ ಹೆಚ್ಚು ಕಾಲ ಉಳಿಯಬಹುದು ಎಂದು ತಿಳಿಸಿದರು.

ಸಾಲದಾತರು ಮತ್ತು ನಿಯಂತ್ರಕರ ನಡುವೆ ಹೆಚ್ಚು ಸಾಮರಸ್ಯದ ಸಂಬಂಧಕ್ಕೆ ಅವರು ಕರೆ ನೀಡಿದ್ದು, ಹೆಚ್ಚು ಅಂತರ್ಗತ ಆರ್ಥಿಕ ಬೆಳವಣಿಗೆಯ ಅವಶ್ಯಕತೆಯಿದೆ ಎಂದರು. ಇತರ ದೇಶಗಳಿಗೆ ಹೋಲಿಸಿದರೆ US ಮಿಲಿಟರಿ ಶಕ್ತಿ, ರಾಜಕೀಯ ಧ್ರುವೀಕರಣ ಮತ್ತು ರಾಷ್ಟ್ರದ ಆರ್ಥಿಕ ಕಾರ್ಯಕ್ಷಮತೆ ಉತ್ತಮವಾಗಿವೆ ಎಂದಿದ್ದಾರೆ.

ಇದನ್ನೂ ಓದಿ: PM Narendra Modi: ಮಕ್ಕಳಾಗಿ ವಿಶ್ವನಾಯಕರು! ಎಐ ಮೋಡಿಯಲ್ಲಿ ನರೇಂದ್ರ ಮೋದಿ ನೋಡಿ

Continue Reading
Advertisement
Sachin Tendulkar
ಕ್ರಿಕೆಟ್2 mins ago

Sachin Birthday: ಬದುಕಿನಲ್ಲಿ ಸಚಿನ್‌ ಅರ್ಧ ಶತಕ; ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Viral News
ವೈರಲ್ ನ್ಯೂಸ್23 mins ago

Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Rajkumar Birth Anniversary ​​Jaggesh said that Rajkumar blessed him when he was admitted due to suicide attempt
ಸ್ಯಾಂಡಲ್ ವುಡ್27 mins ago

Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

World Chess Championship
ಕ್ರೀಡೆ30 mins ago

World Chess Championship: ಡಿ.ಗುಕೇಶ್‌-ಲಿರೆನ್‌ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಮುಹೂರ್ತ ಫಿಕ್ಸ್​

VVPAT Verification
ದೇಶ46 mins ago

VVPAT Verification: ವಿವಿಪ್ಯಾಟ್‌ ಕೇಸ್; ಚುನಾವಣೆಯನ್ನು ನಾವು ನಿಯಂತ್ರಿಸಲಾಗದು ಎಂದ ಸುಪ್ರೀಂಕೋರ್ಟ್; ಮತಯಂತ್ರ ವಿರೋಧಿಗಳಿಗೆ ಹಿನ್ನಡೆ

Sunita Williams
ದೇಶ47 mins ago

Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

Marcus Stoinis
ಕ್ರಿಕೆಟ್57 mins ago

IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

Areca Price
ಪರಿಸರ58 mins ago

Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

Veteran journalist Arjun Deva passes away
ಶ್ರದ್ಧಾಂಜಲಿ1 hour ago

Arjun Deva: ಹಿರಿಯ ಪತ್ರಕರ್ತ ಅರ್ಜುನ್ ದೇವ ನಿಧನ; ಗಣ್ಯರ ಕಂಬನಿ

pm narendra modi jp morgan jamie dimon
ಪ್ರಮುಖ ಸುದ್ದಿ1 hour ago

PM Narendra Modi: “ಅಮೆರಿಕಕ್ಕೆ ಮೋದಿಯಂಥ ನಾಯಕ ಬೇಕು” ಜೆಪಿ ಮೋರ್ಗನ್‌ ಸಂಸ್ಥೆ ಸಿಇಒ ಜೇಮಿ ಶ್ಲಾಘನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌