Site icon Vistara News

Dhanush: ʻವಾತಿʼ ಪ್ರಚಾರದ ವೇಳೆ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಧನುಷ್‌ ಹೇಳಿದ್ದೇನು?

Dhanush asks fans to take education seriously

ಬೆಂಗಳೂರು: ಫೆಬ್ರವರಿ 17 ರಂದು ಧುನುಷ್‌ (Dhanush) ಅಭಿನಯದ ದ್ವಿಭಾಷಾ ಚಿತ್ರ ʻವಾತಿʼ / ಸರ್ ಬಿಡುಗಡೆಗೊಳ್ಳಲಿದೆ. ಹೈದರಾಬಾದ್‌ನಲ್ಲಿ ನಡೆದ ತೆಲುಗು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಧನುಷ್‌ ಮಾತನಾಡಿದರು. ವೆಂಕಿ ಅಟ್ಲೂರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

90ರ ದಶಕದಲ್ಲಿ ನಡೆಯುವ ಕಥೆ ಇದಾಗಿದೆ. ಚಿತ್ರದಲ್ಲಿ ಧನುಷ್ ಪ್ರೊಫೆಸರ್ ಆಗಿ ನಟಿಸಿದ್ದಾರೆ. ಮಾಧ್ಯಮದವರ ಮುಂದೆ ಚಿತ್ರದ ಕುರಿತು ಧನುಷ್‌ ಮಾತನಾಡಿ ʻʻಮಕ್ಕಳು ಮಾಡಬೇಕಾಗಿರುವುದು ಅಧ್ಯಯನ ಮತ್ತು ಪರೀಕ್ಷೆಯಲ್ಲಿ ಯಶಸ್ವಿಯಾಗುವುದು. ಪೋಷಕರು ತಮ್ಮ ಮಕ್ಕಳನ್ನು ಸಮಾಜದಲ್ಲಿ ಮೌಲ್ಯಗಳೊಂದಿಗೆ ಜವಾಬ್ದಾರಿಯುತ ವಯಸ್ಕರನ್ನಾಗಿ ಬೆಳೆಸಬೇಕು. ಇದು ಹೆಚ್ಚು ಕಷ್ಟಕರವಾದ ಕೆಲಸವಾಗಿದೆ. ವಾತಿ ಎಂಬುದು ಶಿಕ್ಷಣದ ಖಾಸಗೀಕರಣದ ವಿರುದ್ಧ ಹೋರಾಡುವ ಸಾಮಾಜಿಕ ಚಿತ್ರ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಉತ್ತಮ ಅಧ್ಯಯನ ಮಾಡಬೇಕುʼʼ ಎಂದು ಹೇಳಿದರು.

ಇದನ್ನೂ ಓದಿ: Dhanush: ಧನುಷ್‌ ನಟನೆಯ ದ್ವಿಭಾಷಾ ಚಿತ್ರ ವಾತಿ ಟ್ರೈಲರ್‌ ಔಟ್‌

ಚಿತ್ರದ ತೆಲುಗು ಆವೃತ್ತಿಗೆ ʻಸರ್ʼ ಎಂದು ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ಪ್ರಮುಖ ನಿರ್ಮಾಣ ಸಂಸ್ಥೆಯಾದ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಒಟ್ಟಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಈ ಚಿತ್ರದಲ್ಲಿ ಧನುಷ್ ಪ್ರೊಫೆಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸಿಲಿದ್ದಾರೆ.

ಇದನ್ನೂ ಓದಿ: Actor Dhanush | `ಕೊಟ್ಲಲ್ಲಪೋ ಕೈ’ ಸಿನಿಮಾ ಖ್ಯಾತಿಯ ನಟ ಧನುಷ್‌ ಇನ್ನಿಲ್ಲ

ಸಿನಿಮಾಗೆ ದಿನೇಶ್ ಕೃಷ್ಣನ್ ಛಾಯಾಗ್ರಹಣ , ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನವಿದೆ. ಸಂಗೀತ ನಿರ್ದೇಶನ ಜಿವಿ ಪ್ರಕಾಶ್ ಕುಮಾರ್ ಮಾಡುತ್ತಿದ್ದಾರೆ. ಸಾಯಿ ಕುಮಾರ್, ತಣಿಕೆಲ್ಲ ಭರಣಿ ಮತ್ತು ನರ್ರಾ ಶ್ರೀನಿವಾಸ್ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ʻತಿರುಚಿತ್ರಂಬಲಂʼ ಸಿನಿಮಾ ಮೂಲಕ ಗಮನ ಸೆಳೆದಿದ್ದರು.

Exit mobile version