ಬೆಂಗಳೂರು; ಕಾಲಿವುಡ್ ನಟ ಧನುಷ್ (Dhanush Movies) ನಟನೆಯ 2013ರಲ್ಲಿ ರಿಲೀಸ್ ಆದ ‘ಮರಿಯಾನ್’ ಚಿತ್ರಕ್ಕೆ 10 ವರ್ಷಗಳ ಸಂಭ್ರಮವಾಗಿದ್ದು, ಈ ಖುಷಿಯನ್ನು ಲೈವ್ ಮೂಲಕ ಹಂಚಿಕೊಂಡಿದ್ದಾರೆ. ಈ ವೇಳೆ ಧನುಷ್, “ನನಗೆ 40 ವರ್ಷ, ಆದ್ದರಿಂದ ನಾನು ಇನ್ನು ಮುಂದೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ʼʼಎಂದು ಹೇಳಿಕೊಂಡಿದ್ದಾರೆ. ಕಾಲಿವುಡ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾದ ಧನುಷ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಹಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಧನುಷ್ ಅವರು ಸದ್ಯ 50ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಡಿ50 ಸಿನಿಮಾ ದೊಡ್ಡ ಬಜೆಟ್ ಚಿತ್ರವಾಗಿದ್ದು, ಧನುಷ್ ನಿರ್ದೇಶಿಸಲಿದ್ದಾರೆ. ಹಾಗೇ ಅವರೇ ನಾಯಕರಾಗಿಯೂ ನಟಿಸುತ್ತಿದ್ದಾರೆ. ಮರಿಯಾನ್’ ಚಿತ್ರಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದರು. ರೊಮ್ಯಾಂಟಿಕ್ ಸಿನಿಮಾವಾಗಿ ತೆರೆಕಂಡಿದ್ದ ಮರಿಯನ್ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂತೆಯೇ, ಎಆರ್ ರೆಹಮಾನ್ ಅವರ ಸಂಗೀತದಲ್ಲಿರುವ ಎಲ್ಲಾ ಮರಿಯನ್ ಹಾಡುಗಳು ಅಭಿಮಾನಿಗಳ ನೆಚ್ಚಿನ ಹಿಟ್ ಪಟ್ಟಿಗೆ ಸೇರಿಕೊಂಡವು. ಧನುಷ್, ಎಆರ್ ರೆಹಮಾನ್ ಮತ್ತು ನಿರ್ದೇಶಕ ಭರತ್ ಲೈವ್‌ನಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: Dhanushree Bigg Boss: ಬಾತ್ ಟಬ್‌ನಲ್ಲಿ ಚಿಲ್ ಮಾಡಿದ ಟಿಕ್ ಟಾಕ್ ಸ್ಟಾರ್, ಮಾಜಿ ಬಿಗ್ ಬಾಸ್ ಸ್ಪರ್ಧಿ ಧನುಶ್ರೀ!
1 மணி நேரத்தில் வாலி AR ரகுமானுக்கு எழுதிய நேற்று அவள் பாடல்! #netruaval #arrahman #maryan #vaali @arrahman | #lyricistvaali | #vaalilyrics #tamilsongs #tamilcinema #dhanush #tamilandaramesh pic.twitter.com/cT9C56Vtpo
— Tamilanda Ramesh | தமிழன்டா ரமேஷ் (@tamilandaramesh) July 21, 2023
@dhanushkraja 😉
— Actor Dhanush Fanclub (@dhanushtejaa) July 21, 2023
📜 Details
➜Dhanush (VenkateshPrabhuKasthuriRaja) Born On 28 July 1983
➜Father-KasthuriRaja
➜Mother-Vijayalakshmi
➜He is a Indian Actor,Producer,Director, Lyricist & Playback Singer#Dhanush #Maryan #CaptainMiller #D50 #D40 #DD2 #10YearsOfMaryan #Tweets pic.twitter.com/3832h93aMy
ಹುಡುಗರು ಅಂತಹ ಸಿನಿಮಾಗಳಲ್ಲಿ ನಟಿಸಲಿ
ಮರಿಯಾನ್ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಿರುವುದು ಮರೆಯಲಾಗದ ಅನುಭವ ಎಂದು ಧನುಷ್ ಹೇಳಿದರು. ನಿರ್ದೇಶಕ ಭರತ್ ಬಾಲಾ ಅವರಿಗೆ ಧನ್ಯವಾದ ಅರ್ಪಿಸಿದರು. ಮೊನ್ನೆಯಷ್ಟೇ ನಿರ್ದೇಶಕ ಭರತ್ ಬಾಲಾ ಅವರು ಧನುಷ್ ಅವರಿಗೆ ಮನವಿ ಮಾಡಿದ್ದರು. ‘ಮರಿಯಾನ್’ ಸೇರಿದಂತೆ ಸಾಕಷ್ಟು ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಿರುವ ಧನುಷ್ ಅವರಿಗೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುವಂತೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ನಗುತ್ತಲೇ ಉತ್ತರ ನೀಡಿದ ಧನುಷ್ ‘ನನಗೆ ವರ್ಷವಾಗಿದೆ, ಇನ್ನು ಮುಂದೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಾನು ನಟಿಸುವುದಿಲ್ಲ, ಈಗಿನ ಹುಡುಗರು ಅಂತಹ ಸಿನಿಮಾಗಳಲ್ಲಿ ನಟಿಸಲಿʼʼ ಎಂದು ಅವರು ಹೇಳಿದ್ದಾರೆ
ಧನುಷ್ ನಿರ್ಧಾರವನ್ನು ನೋಡಿದ ಅವರ ಅಭಿಮಾನಿಗಳು ಗ್ಯಾಂಗ್‌ಸ್ಟರ್ ಮತ್ತು ಆ್ಯಕ್ಷನ್ ಚಿತ್ರಗಳಲ್ಲಿ ನಟಿಸಲು ಸಿದ್ಧರಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ನೆಟ್ಟಿಗರು ಧನುಷ್ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.