Site icon Vistara News

Dhanush: ಧನುಷ್‌ ನಟನೆಯ ದ್ವಿಭಾಷಾ ಚಿತ್ರ ವಾತಿ ಟ್ರೈಲರ್‌ ಔಟ್‌

Dhanush Vaathi trailer out.

ಬೆಂಗಳೂರು: ಕಾಲಿವುಡ್‌ ನಟ ಧನುಷ್ (Dhanush) ಅಭಿನಯದ ತಮಿಳು-ತೆಲುಗು ದ್ವಿಭಾಷಾ ಚಿತ್ರ ʻವಾತಿʼ ಟ್ರೈಲರ್‌ ಬಿಡುಗಡೆಗೊಂಡಿದೆ. ಈ ಸಿನಿಮಾವನ್ನು ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೊ ವಾತಿ ಅಧಿಕೃತ ಟ್ರೈಲರ್‌ ಅನ್ನು ಅನಾವರಣಗೊಳಿಸಿದೆ. ಆ್ಯಕ್ಷನ್ ಸೀಕ್ವೆನ್ಸ್ ಜತೆ ಪಂಚ್ ಡೈಲಾಗ್‌ಗಳನ್ನು ಒಳಗೊಂಡಿದೆ. ಮಾಸ್ ಪ್ರೇಕ್ಷಕರಿಗೆ ಸಖತ್‌ ಎಂಟರ್ಟೈನ್ಮೆಂಟ್ ನೀಡುವಂತಿದೆ.

90ರ ದಶಕದಲ್ಲಿ ನಡೆಯುವ ಕಥೆ ಇದಾಗಿದೆ. ಚಿತ್ರದ ತೆಲುಗು ಆವೃತ್ತಿಗೆ ʻಸರ್ʼ ಎಂದು ಹೆಸರಿಡಲಾಗಿದೆ. ಪ್ರಮುಖ ನಿರ್ಮಾಣ ಸಂಸ್ಥೆಯಾದ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಒಟ್ಟಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಈ ಚಿತ್ರದಲ್ಲಿ ಧನುಷ್ ಪ್ರೊಫೆಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸಿಲಿದ್ದಾರೆ. ಫೆಬ್ರವರಿ 17 ರಂದು ವಾತಿ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಇದನ್ನೂ ಓದಿ: Raj B Shetty | ʻಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದ ರಾಜ್ ಬಿ ಶೆಟ್ಟಿ ಲುಕ್ ರಿವೀಲ್‌!

ಇದನ್ನೂ ಓದಿ: Actress Ramya | ʻಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾಗೆ ರಮ್ಯಾ ಬೈ? ಹೊಸ ನಟಿಯ ಹೆಸರು ರಿವೀಲ್‌!

ಸಿನಿಮಾಗೆ ದಿನೇಶ್ ಕೃಷ್ಣನ್ ಛಾಯಾಗ್ರಹಣ , ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನವಿದೆ. ಸಂಗೀತ ನಿರ್ದೇಶನ ಜಿವಿ ಪ್ರಕಾಶ್ ಕುಮಾರ್ ಮಾಡುತ್ತಿದ್ದಾರೆ. ಸಾಯಿ ಕುಮಾರ್, ತಣಿಕೆಲ್ಲ ಭರಣಿ ಮತ್ತು ನರ್ರಾ ಶ್ರೀನಿವಾಸ್ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ʻತಿರುಚಿತ್ರಂಬಲಂʼ ಸಿನಿಮಾ ಮೂಲಕ ಗಮನ ಸೆಳೆದಿದ್ದರು.

Exit mobile version