Site icon Vistara News

Dhruva Sarja: ಮಗ ಹುಟ್ಟಿದ ತಕ್ಷಣ ಚಿರುಗೆ ಕಾಲ್‌ ಮಾಡಲು ಹೋಗಿದ್ದೆ ಎಂದು ಭಾವುಕರಾದ ಧ್ರುವ ಸರ್ಜಾ!

Dhruva Sarja

ಬೆಂಗಳೂರು; ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅವರ ಮನೆಗೆ ಗೌರಿ ಗಣೇಶ ಹಬ್ಬದ ದಿನವೇ (Ganesh Chaturthi) ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್‌ (Prerana Shankar) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ಸರ್ಜಾ ಕುಟುಂಬ ಆಸ್ಪತ್ರೆ ಭೇಟಿ ಕೊಟ್ಟಿದೆ. ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ನಟ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದ ಜತೆ ಧ್ರುವ ಸರ್ಜಾ ಮಾತನಾಡಿ ʻʻತುಂಬಾ ಖುಷಿಯಾಗುತ್ತಿದೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲುʼʼ ಎಂದು ನಟ ಧ್ರುವ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್‌ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ʻʻಚಿರು ಮನೆ ದೇವರ ಆರ್ಶೀವಾದ ಇರುವ ಮನೆ. ಮಗಳಿಗೆ ಕಣ್ಮಣಿ ಎಂದು ಹೆಸರಿಟ್ಟಿದ್ದೆ. ಈ ಮಗುವಿಗೂ ಒಂದು ಪೆಟ್ ನೇಮ್ ಇಡುತ್ತೇನೆ. ತುಂಬ ಸಂತಸವಾಗುತ್ತಿದೆʼʼ ಎಂದರು.

ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾ ಹೆರಿಯಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಸರ್ಜಾ ಮಾಹಿತಿ ಹಂಚಿಕೊಂಡರು.

ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ಸ್ಮರಣೆ ಮಾಡಿಕೊಳ್ಳಲಾಗಿತ್ತು. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್​ ಹೌಸ್​ನಲ್ಲೇ ಸೀಮಂತ ನಡೆದಿತ್ತು. ಫಾರ್ಮ್​ ಹೌಸ್​ ಸಿಂಗಾರಗೊಂಡಿತ್ತು. ಬಂಧು ಬಳಗದವರು ಆಗಮಿಸಿ ಪ್ರೇರಣಾಗೆ ಆಶೀರ್ವಾದ ಮಾಡಿದ್ದರು.

ಇದನ್ನೂ ಓದಿ: Dhruva Sarja: ಗಂಡು ಮಗುವಿನ ತಂದೆಯಾದ ಧ್ರುವ ಸರ್ಜಾ; ಗೌರಿ ಗಣೇಶ ಹಬ್ಬದಂದೇ ಸಿಹಿ ಸುದ್ದಿ

ಇದನ್ನೂ ಓದಿ: Dhruva Sarja: ಗಂಡು ಮಗುವಿನ ತಂದೆಯಾದ ಧ್ರುವ ಸರ್ಜಾ; ಗೌರಿ ಗಣೇಶ ಹಬ್ಬದಂದೇ ಸಿಹಿ ಸುದ್ದಿ

ಧ್ರುವ ಸರ್ಜಾ ಜನುಮ ದಿನದಂದೇ ಚಿರಂಜೀವಿ ಸರ್ಜಾ ಸಿನಿಮಾ ರಿಲೀಸ್‌!

ಧ್ರುವ ಸರ್ಜಾ (Dhruva Sarja) ಅವರ ಜನುಮ ದಿನದ ನಿಮಿತ್ತ ರಿಲೀಸ್‌ ಆಗಲಿದೆ. ಅಕ್ಟೋಬರ್‌ 6ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದೀಗ ಚಿತ್ರತಂಡ ಪ್ರಚಾರ ಕಣಕ್ಕಿಳಿದಿದೆ. ಚಿರಂಜೀವಿ ಸರ್ಜಾ (chiranjeevi sarja) ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ (rangamarthanda). ಇದೀಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ವಿಶೇಷ ಏನೆಂದರೆ, ಧ್ರುವ ಸರ್ಜಾ (rajamarthanda release date) ಅವರ ಬರ್ತ್‌ಡೇ ದಿನವೇ ಈ ಸಿನಿಮಾ ರಿಲೀಸ್‌ ಆಗಲಿದೆ. ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್‌ ಆಗಿರಲಿಲ್ಲ. ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದರು. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Exit mobile version