South Cinema
Dhruva Sarja: ಮಗ ಹುಟ್ಟಿದ ತಕ್ಷಣ ಚಿರುಗೆ ಕಾಲ್ ಮಾಡಲು ಹೋಗಿದ್ದೆ ಎಂದು ಭಾವುಕರಾದ ಧ್ರುವ ಸರ್ಜಾ!
Dhruva Sarja: ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ (Prerana Shankar) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಬೆಂಗಳೂರು; ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರ ಮನೆಗೆ ಗೌರಿ ಗಣೇಶ ಹಬ್ಬದ ದಿನವೇ (Ganesh Chaturthi) ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ (Prerana Shankar) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ಸರ್ಜಾ ಕುಟುಂಬ ಆಸ್ಪತ್ರೆ ಭೇಟಿ ಕೊಟ್ಟಿದೆ. ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ನಟ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದ ಜತೆ ಧ್ರುವ ಸರ್ಜಾ ಮಾತನಾಡಿ ʻʻತುಂಬಾ ಖುಷಿಯಾಗುತ್ತಿದೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲುʼʼ ಎಂದು ನಟ ಧ್ರುವ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ʻʻಚಿರು ಮನೆ ದೇವರ ಆರ್ಶೀವಾದ ಇರುವ ಮನೆ. ಮಗಳಿಗೆ ಕಣ್ಮಣಿ ಎಂದು ಹೆಸರಿಟ್ಟಿದ್ದೆ. ಈ ಮಗುವಿಗೂ ಒಂದು ಪೆಟ್ ನೇಮ್ ಇಡುತ್ತೇನೆ. ತುಂಬ ಸಂತಸವಾಗುತ್ತಿದೆʼʼ ಎಂದರು.
ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾ ಹೆರಿಯಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಸರ್ಜಾ ಮಾಹಿತಿ ಹಂಚಿಕೊಂಡರು.
ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ಸ್ಮರಣೆ ಮಾಡಿಕೊಳ್ಳಲಾಗಿತ್ತು. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲೇ ಸೀಮಂತ ನಡೆದಿತ್ತು. ಫಾರ್ಮ್ ಹೌಸ್ ಸಿಂಗಾರಗೊಂಡಿತ್ತು. ಬಂಧು ಬಳಗದವರು ಆಗಮಿಸಿ ಪ್ರೇರಣಾಗೆ ಆಶೀರ್ವಾದ ಮಾಡಿದ್ದರು.
ಇದನ್ನೂ ಓದಿ: Dhruva Sarja: ಗಂಡು ಮಗುವಿನ ತಂದೆಯಾದ ಧ್ರುವ ಸರ್ಜಾ; ಗೌರಿ ಗಣೇಶ ಹಬ್ಬದಂದೇ ಸಿಹಿ ಸುದ್ದಿ
ಇದನ್ನೂ ಓದಿ: Dhruva Sarja: ಗಂಡು ಮಗುವಿನ ತಂದೆಯಾದ ಧ್ರುವ ಸರ್ಜಾ; ಗೌರಿ ಗಣೇಶ ಹಬ್ಬದಂದೇ ಸಿಹಿ ಸುದ್ದಿ
ಧ್ರುವ ಸರ್ಜಾ ಜನುಮ ದಿನದಂದೇ ಚಿರಂಜೀವಿ ಸರ್ಜಾ ಸಿನಿಮಾ ರಿಲೀಸ್!
ಧ್ರುವ ಸರ್ಜಾ (Dhruva Sarja) ಅವರ ಜನುಮ ದಿನದ ನಿಮಿತ್ತ ರಿಲೀಸ್ ಆಗಲಿದೆ. ಅಕ್ಟೋಬರ್ 6ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದೀಗ ಚಿತ್ರತಂಡ ಪ್ರಚಾರ ಕಣಕ್ಕಿಳಿದಿದೆ. ಚಿರಂಜೀವಿ ಸರ್ಜಾ (chiranjeevi sarja) ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ (rangamarthanda). ಇದೀಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.
ವಿಶೇಷ ಏನೆಂದರೆ, ಧ್ರುವ ಸರ್ಜಾ (rajamarthanda release date) ಅವರ ಬರ್ತ್‌ಡೇ ದಿನವೇ ಈ ಸಿನಿಮಾ ರಿಲೀಸ್ ಆಗಲಿದೆ. ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್ ಆಗಿರಲಿಲ್ಲ. ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದರು. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
South Cinema
Parineeti Chopra: ಮದುವೆಯಲ್ಲಿ ಫೋನ್, ಕ್ಯಾಮೆರಾಗಳಿಗೆ ಟೇಪ್, 100 ಭದ್ರತಾ ಸಿಬ್ಬಂದಿ!
Parineeti Chopra: ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.
ಬೆಂಗಳೂರು: ಸೆಪ್ಟೆಂಬರ್ 24ರಂದು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Raghav Chadha) ಅವರ ವಿವಾಹ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಈಗಾಗಲೇ ಜೋಡಿ ಉದಯಪುರಕ್ಕೆ (Parineeti Chopra wedding) ತಲುಪಿದೆ. ಸದ್ಯ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ. ವಿವಾಹದಲ್ಲಿ 100 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಮದುವೆಯಲ್ಲೂ ಕಟ್ಟುನಿಟ್ಟಿನ ಭದ್ರತಾ ನಿಯಮಗಳಿವೆ. ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.
ಹೋಟೆಲ್ ಮೂಲಗಳ ಪ್ರಕಾರ, ಮದುವೆಯ ಸಿದ್ಧತೆಗಳ ಜತೆಗೆ ಕಾರ್ಯಕ್ರಮದ ಫೋಟೊಗಳು ಮತ್ತು ವಿಡಿಯೊಗಳು ಲೀಕ್ ಆಗದ್ದಂತೆ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಹೋಟೆಲ್‌ಗೆ ಪ್ರವೇಶಿಸುವವರ ಮೊಬೈಲ್ ಕ್ಯಾಮೆರಾಗಳಿಗೆ ನೀಲಿ ಬಣ್ಣದ ಟೇಪ್ ಅನ್ನು ಅಂಟಿಸಲಾಗುತ್ತದೆ. ಇದರಿಂದ ಅವರು ಮದುವೆ ಸಮಾರಂಭದಲ್ಲಿ ಯಾವುದೇ ವೀಡಿಯೊ-ಫೋಟೋಗ್ರಾಫ್ ತೆಗೆದುಕೊಳ್ಳುವಂತಿಲ್ಲ. ಈ ನೀಲಿ ಟೇಪ್‌ನ ವಿಶೇಷತೆ ಏನೆಂದರೆ, ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಅಳವಡಿಸಿದ ನಂತರ ಯಾರಾದರೂ ಅದನ್ನು ತೆಗೆದರೆ, ಟೇಪ್‌ನಲ್ಲಿ ಬಾಣದ ಚಿಹ್ನೆ ಗೋಚರಿಸುತ್ತದೆ. ಸೆಕ್ಯೂರಿಟಿ ಅವರು ಪರಿಶೀಲಿಸಿದಾಗ ಕ್ಯಾಮೆರಾ ಬಳಸಲು ಟೇಪ್ ತೆಗೆದಿರುವುದು ಗೊತ್ತಾಗಿ ಬಿಡುತ್ತದೆ. ಈ ನಿರ್ಬಂಧವು ವಿಶೇಷವಾಗಿ ಹೋಟೆಲ್ ಸಿಬ್ಬಂದಿಗೆ, ಬಾಣಸಿಗರಿಗೆ ಅನ್ವಯಿಸುತ್ತದೆ. ಕರಣ್ ಜೋಹರ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಡಿಸೈನರ್ ಮನೀಶ್ ಮಲ್ಹೋತ್ರಾ ಅವರಂತಹ ಸೆಲೆಬ್ರಿಟಿಗಳು ಇಂದೇ (ಸೆ. 23) ಉದಯಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Parineeti Chopra; ನಾಳೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಅದ್ಧೂರಿ ಮದುವೆ; ಭರ್ಜರಿ ಸಿದ್ಧತೆ!
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷ ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ 20 ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.
ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ಚಮ್ಕೀಲಾ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.
South Cinema
Actress Nayanthara: ಯೂಟ್ಯೂಬರ್ ಸಿನಿಮಾಗೆ ನಯನತಾರಾ ನಾಯಕಿ; ಅಚ್ಚರಿಗೊಂಡ ಫ್ಯಾನ್ಸ್!
Actress Nayanthara : ಯೂಟ್ಯೂಬರ್ ಡ್ಯೂಡ್ ವಿಕ್ಕಿ ಅವರ ಜತೆ ಸಿನಿಮಾ ಮಾಡುತ್ತಿದ್ದಾರೆ. ಈಗ ನಟಿ ಯೂಟ್ಯೂಬರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಲು ತಯಾರಾಗಿದ್ದಾರೆ. ಇದು ಫ್ಯಾನ್ಸ್‌ಗೆ ಅಚ್ಚರಿ ತಂದಿದೆ.
ಬೆಂಗಳೂರು: ನಯನತಾರಾ (Actress Nayanthara: ) ಇನ್ನೂ ಜವಾನ್ (Jawan Movie)ಸಿನಿಮಾ ಸಕ್ಸೆಸ್ ಮೂಡ್‌ನಲ್ಲಿದ್ದಾರೆ. ಈ ಸಿನಿಮಾ ಮೂಲಕ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ಹಿಂದಿಗೂ ಪರಿಚಯವಾದರು. ನಯನತಾರಾ ಹೊಸಬರ ಜತೆ ಕೆಲಸ ಮಾಡುವುದಿಲ್ಲ ಎಂದು ಹಲವರ ವಾದವಾಗಿತ್ತು. ಜವಾನ್ ಯಶಸ್ಸಿನ ಉತ್ತಂಗದಲ್ಲಿರುವ ನಟಿ ಇನ್ನು ಹೊಸಬರ ಜತೆ ಕೆಲಸ ಮಾಡುವುದೇ ಇಲ್ಲ ಎಂಬ ಚರ್ಚೆಗಳು ಆಗಿತ್ತು. ಆದರೀಗ ನಟಿ ಈ ವದಂತಿಗಳನ್ನು ಸುಳ್ಳು ಮಾಡಿದ್ದಾರೆ. ಯೂಟ್ಯೂಬರ್ ಡ್ಯೂಡ್ ವಿಕ್ಕಿ ಅವರ ಜತೆ ಸಿನಿಮಾ ಮಾಡುತ್ತಿದ್ದಾರೆ. ಈಗ ನಟಿ ಯೂಟ್ಯೂಬರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಲು ತಯಾರಾಗಿದ್ದಾರೆ. ಇದು ಫ್ಯಾನ್ಸ್‌ಗೆ ಅಚ್ಚರಿ ತಂದಿದೆ.
ಯೂಟ್ಯೂಬರ್ ಡ್ಯೂಡ್ ವಿಕ್ಕಿ ನಿರ್ದೇಶನದದ ಈ ಸಿನಿಮಾಗೆ ನಯನತಾರಾ ನಾಯಕಿ. ಈಗಾಗಲೇ ಚಿತ್ರತಂಡ ಮೋಷನ್ ಪೋಸ್ಟರ್ ಹಂಚಿಕೊಂಡಿದೆ. ಈ ಯೋಜನೆಗೆ ‘ಮನ್ನಂಗಟ್ಟಿ’ ಎಂದು ಹೆಸರಿಡಲಾಗಿದೆ. ಮತ್ತು ಅದರ ಅಡಿಬರಹ, ‘1960 ರಿಂದ ಮನ್ನಂಗಟ್ಟಿ (Mannangatti)’. ಈ ಚಿತ್ರಕ್ಕೆ ‘ಸಿನ್ಸ್ 1960’ ಎನ್ನುವ ಅಡಿಬರಹ ಇದೆ. ಲಕ್ಷ್ಮಣ್ ಕುಮಾರ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ಬಾಬು, ಗೌರಿ ಕಿಶನ್ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ.
ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಆರ್‌ಡಿ ರಾಜಶೇಖರ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಸೀನ್ ರೋಲ್ಡನ್ ಸಂಗೀತ ಸಂಯೋಜಿಸಿದ್ದಾರೆ. ಡ್ಯೂಡ್ ವಿಕ್ಕಿ ಬರೆದು ನಿರ್ದೇಶಿಸಿದ ಈ ಚಿತ್ರವನ್ನು ಪ್ರಿನ್ಸ್ ಪಿಕ್ಚರ್ಸ್ ಬೆಂಬಲಿಸಿದೆ. ನಯನತಾರಾ ನಟನೆಯ ಮತ್ತೊಂದು ಸಿನಿಮಾ ‘ಉರೈವನ್’ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಇದರ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಜಯಂ ರವಿ ಹೀರೋ. ಈ ಸಿನಿಮಾಗೆ ಎ ಪ್ರಮಾಣಪತ್ರ ಸಿಕ್ಕಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೂಡ ಇದೇ ದಿನ ರಿಲೀಸ್ ಆಗುತ್ತಿದ್ದು, ಭರ್ಜರಿ ಪೈಪೋಟಿ ಉಂಟಾಗಲಿದೆ.
ಇದನ್ನೂ ಓದಿ: Actress Nayanthara: ನಿರ್ದೇಶಕ ಅಟ್ಲೀ ಜತೆ ಇರುವ ಫೋಟೊ ಹಂಚಿಕೊಂಡ ನಯನತಾರಾ; ಮುನಿಸಿಗೆ ತೆರೆ ಎಳೆದರೆ?
ಇದನ್ನೂ ಓದಿ: Actress Nayanthara: ನಿರ್ದೇಶಕ ಅಟ್ಲೀ ಜತೆ ಇರುವ ಫೋಟೊ ಹಂಚಿಕೊಂಡ ನಯನತಾರಾ; ಮುನಿಸಿಗೆ ತೆರೆ ಎಳೆದರೆ?
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲ್ವಾ ನಯನತಾರಾ?
ಶಾರುಖ್ ಖಾನ್ (Shah Rukh Khan) ಅವರ ಬ್ಲಾಕ್‌ಬಸ್ಟರ್ ಸಿನಿಮಾ ʻಜವಾನ್ʼನಲ್ಲಿ ನಟಿ ನಯನತಾರಾ(Nayanthara) ಏಜೆಂಟ್ ನರ್ಮದಾ ರಾಯ್ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾರುಖ್-ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ, ನಯನತಾರಾ ಅವರಿಗೆ ಅಟ್ಲೀ ಕುರಿತು ಅಸಮಾಧಾನ ಇದೆ ಎಂದು ವರದಿಯಾಗಿತ್ತು. ಚಿತ್ರದಲ್ಲಿ ತಮ್ಮ ಪಾತ್ರವನ್ನು ಹಲವು ಕಡೆ ಕತ್ತರಿಸಿದ್ದರಿಂದ ಅಟ್ಲಿಯೊಂದಿಗೆ ನಯನತಾರಾ ತುಂಬಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಅಲ್ಲದೆ, ದೀಪಿಕಾ ಅವರ ಪಾತ್ರವನ್ನು ಹೆಚ್ಚು ಹೈಲೈಟ್ ಮಾಡಿರುವ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದೂ ವರದಿಯಾಗಿತ್ತು.
ಚಿತ್ರದಲ್ಲಿ ವಿಕ್ರಮ್ ರಾಥೋಡ್ (ಶಾರುಖ್) ಪತ್ನಿಯಾಗಿ ದೀಪಿಕಾ ಪಡುಕೋಣೆ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಪ್ರಕಾರ ದೀಪಿಕಾ ಅವರದ್ದು ಅತಿಥಿ ಪಾತ್ರವಲ್ಲ. ಬದಲಿಗೆ ಜವಾನ್ ಅನ್ನು “ಶಾರುಖ್-ದೀಪಿಕಾ” ಚಿತ್ರದಂತೆ ಕಾಣುವಂತೆ ಮಾಡಲಾಗಿದೆ ಎಂದು ಹೇಳಿದೆ. ಇದು ಅತಿಥಿ ಪಾತ್ರವಾಗಿರಲಿಲ್ಲ. ಜವಾನ್ ಅನ್ನು ಬಹುತೇಕ ಶಾರುಖ್-ದೀಪಿಕಾ ಚಿತ್ರದಂತೆ ಕಾಣುವಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿತ್ತು.
South Cinema
Vijay Raghavendra: ವಿಜಯ್ ರಾಘವೇಂದ್ರ -ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್ ಔಟ್!
Vijay Raghavendra: ಪೊಲೀಸ್ ಖದರ್‌ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರು: ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಸೋನು ಗೌಡ (sonu gowda) ನಟನೆಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳ ಝಲಕ್ ಕುತೂಹಲ ಹೆಚ್ಚಿಸಿದೆ. ಪೊಲೀಸ್ ಖದರ್‌ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಹಾಗೂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ʻʻಮರೀಚಿ ಟೈಟಲ್ ಇಡುವ ಮೊದಲು 150 ಟೈಟಲ್ ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ಮರೀಚಿ ಆಯ್ಕೆ ಮಾಡಿದ್ದೇನೆ. ಮರೀಚಿ ಎಂದರೆ ಬ್ರಹ್ಮನ ಮಗ. ದೇವದಾಸ್ ಹಾಗೂ ಅಸುರರ ಗಾಡ್ ಫಾದರ್. ನಮ್ಮ ಚಿತ್ರದಲ್ಲಿ ಒಳ್ಳೆಯದು ಕೆಟ್ಟದಕ್ಕೆ ಮರೀಚಿ ಗಾಡ್ ಫಾದರ್ ಎಂದು ತೆಗೆದುಕೊಂಡಿದ್ದೇವೆ. ತುಂಬ ಅದ್ಭುತವಾಗಿ ಕಥೆ ಮೂಡಿ ಬಂದಿದೆ. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ಸ್ಕ್ರೀನ್ ಪ್ಲೇ, ಸ್ಟೋರಿ ಎಲ್ಲವೂ ಚೆನ್ನಾಗಿ ಬಂದಿದೆʼʼ ಎಂದರು.
ನಟ ವಿಜಯ್ ರಾಘವೇಂದ್ರ ಮಾತನಾಡಿ, ʻʻಮರೀಚಿ ಟೀಸರ್ ಲಾಂಚ್ ಆಗಿದೆ. ಟ್ಯಾಗ್ ಲೈನ್ ಹೇಳುವಂತೆ God father of good and bad ಎನ್ನುವಾಗೇ ಪ್ರತಿಯೊಬ್ಬರ ಮನಸ್ಸಿನಲ್ಲಿ ಕಥೆ ಎಣೆಯುವ ಮನಸ್ಸು ಆಗುತ್ತದೆ. ನಮಗೂ ಅದೇ ಬೇಕಿರುವುದು. ಮರೀಚಿ ಸಿನಿಮಾ ಒಂದು ಕ್ರೈಮ್ ಥ್ರಿಲ್ಲರ್ ಟೀಸರ್ ನೋಡಿದರೆ ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುವ ಅವಕಾಶವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಮರೀಚಿ ಸಿನಿಮಾದಲ್ಲಿ ತಾಂತ್ರಿಕ ವರ್ಗದವರನ್ನು ಎಷ್ಟು ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದರೋ ಅದೇ ರೀತಿ ತೆರೆಮೇಲೆ ಬರುವ ಕಲಾವಿದರನ್ನು ಅಷ್ಟೇ ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದಾರೆ. ಅದರಲ್ಲಿ ನಾನು ಒಬ್ಬ ಇದ್ದೇನೆ ಎಂದು ಹೇಳಲು ಖುಷಿಯಾಗುತ್ತದೆʼʼ ಎಂದರು.
ಇದನ್ನೂ ಓದಿ: Vijay Raghavendra: ವಿಜಯ್ ರಾಘವೇಂದ್ರರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್-ಪ್ರಿಯಾ ದಂಪತಿ
ನಟಿ ಸೋನುಗೌಡ ಮಾತನಾಡಿ, ʻʻಮರೀಚಿ ಸ್ಟೋರಿ ಲೈನ್ ನನಗೆ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ಪರ್‌ಫಾರ್ಮೆನ್ಸ್‌ಗೆ ತುಂಬ ಸ್ಕೋಪ್ ಇತ್ತು. ನನ್ನ ಪಾತ್ರ ತುಂಬ ಚೆನ್ನಾಗಿ ಬಂದಿದೆ. ಹ್ಯಾಪಿ ನ್ಯೂ ಇಯರ್‌ನಲ್ಲಿ ಗಂಡ ಹೆಂಡತಿಯಾಗಿ ನಾನು ವಿಜಯ್ ಸರ್ ನಟಿಸಿದ್ದೆವು. ಇಲ್ಲಿಯೂ ಗಂಡ ಹೆಂಡತಿಯಾಗಿ ನಟಿಸಿದ್ದೇವೆ. ಎಮೋಷನಲ್ ಆಗಿ ಮರೀಚಿ ಸಿನಿಮಾ ಮೂಡಿಬಂದಿದೆ. ಸ್ಕ್ರೀನ್ ನಲ್ಲಿ ನಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನೋಡಲು ನಾನು ಕೂಡ ಕಾತುರಳಾಗಿದ್ದೇನೆʼʼ ಎಂದರು.
ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ .
ವಿಜಯ ರಾಘವೇಂದ್ರ ಜೋಡಿಯಾಗಿ ನಟಿ ಸೋನು ಗೌಡ ನಟಿಸುತ್ತಿದ್ದು. ಅಭಿ ದಾಸ್, ಸ್ಪಂದನಾ ಸೋಮಣ್ಣ, ಆರ್ಯನ್, ಶ್ರುತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಎಸ್ ಎಸ್ ರೆಕ್ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
South Cinema
Sai Pallavi: ಮದುವೆ ವದಂತಿ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸಾಯಿ ಪಲ್ಲವಿ!
Sai Pallavi: ಆ ಚಿತ್ರ ನೋಡಿದವರೆಲ್ಲ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂದೇ ನಂಬಿಕೊಂಡು ಚಿತ್ರವನ್ನು ಇನ್ನಷ್ಟು ವೈರಲ್ ಮಾಡಿದ್ದರು. ಇದೀಗ ನಟಿ ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ಸಾಯಿ ಪಲ್ಲವಿ (Sai Pallavi) ಮದುವೆಯಾಗಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ನಟಿ ಖ್ಯಾತ ನಿರ್ದೇಶಕನ ಜತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎಂದು ಹೇಳಾಗುತ್ತಿತ್ತು. ಈ ಅನುಮಾನಕ್ಕೆ ಕಾರಣವಾಗಿದ್ದು ಒಂದು ಫೋಟೊ. ಸಾಯಿ ಪಲ್ಲವಿ ಹಾರ ಹಾಕಿಕೊಂಡು ವ್ಯಕ್ತಿಯೊಬ್ಬರ ಪಕ್ಕ ನಿಂತಿದ್ದರು. ಆ ಚಿತ್ರ ನೋಡಿದವರೆಲ್ಲ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂದೇ ನಂಬಿಕೊಂಡು ಚಿತ್ರವನ್ನು ಇನ್ನಷ್ಟು ವೈರಲ್ ಮಾಡಿದ್ದರು. ಇದೀಗ ನಟಿ ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ʻʻನಾನು ವದಂತಿಗಳಿಗೆ ಹೆದರುವುದಿಲ್ಲ. ಆದರೆ ಕುಟುಂಬ ಸ್ನೇಹಿತರ ವಿಚಾರಕ್ಕೆ ಬಂದಾಗ ಇಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕು. ಆ ಫೋಟೊ ನನ್ನ ಮದುವೆಯದ್ದಲ್ಲ. ಸಿನಿಮಾ ಮುಹೂರ್ತ ವೇಳೆ ತೆಗೆದ ಫೋಟೊ. ಸಮಾರಂಭದ ಫೋಟೊವನ್ನು ಈ ರೀತಿ ಉಪಯೋಗಿಸಿಕೊಂಡು ಕೆಟ್ಟ ಉದ್ದೇಶದಿಂದ ಆ ಚಿತ್ರವನ್ನು ವೈರಲ್ ಮಾಡಲಾಗಿದೆ. ನನ್ನ ಕೆಲಸದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದ ಸಮಯದಲ್ಲಿ, ಈ ರೀತಿಯ ಅನಾವಶ್ಯಕ ವಿಷಯಗಳ ಬಗ್ಗೆ ವಿವರಿಸುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಬೇಸರವಿದೆʼʼಎಂದು ಟ್ವೀಟ್ ಮಾಡಿದ್ದಾರೆ.
ಸಾಯಿ ಸಾಂಪ್ರದಾಯಿಕ ಅವತಾರದಲ್ಲಿ ಬಿಳಿ ಕುರ್ತಾ ಮತ್ತು ಗೋಲ್ಡನ್-ಕಂದು ಬಣ್ಣದ ದುಪಟ್ಟಾವನ್ನು ಧರಿಸಿರುವ ಚಿತ್ರವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ವದಂತಿ ಶುರುವಾಯಿತು. ಅವರ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ. ಚಿತ್ರದ ಕ್ಲ್ಯಾಪ್ ಬೋರ್ಡ್ ಹಿಡಿದು ನಿಂತಿದ್ದರು. ಈವೆಂಟ್‌ನ ಇತರ ಚಿತ್ರಗಳಲ್ಲಿ, SK21 ಚಿತ್ರದ ನಾಯಕ ನಟ ಶಿವಕಾರ್ತಿಕೇಯನ್ ಮತ್ತು ಹಿರಿಯ ನಟ ಕಮಲ್ ಹಾಸನ್ ಕೂಡ ನಿಂತಿದ್ದಾರೆ. ಇಬ್ಬರೂ ಮಹೂರ್ತ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿದ್ದರು. ಕಳೆದ ವರ್ಷ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಗಾರ್ಗಿ ಚಿತ್ರದಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.
ಇದನ್ನೂ ಓದಿ: Sai Pallavi: ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ; ಸಾಯಿ ಪಲ್ಲವಿ ಫ್ಯಾನ್ಸ್‌ಗೆ ಗುಡ್ ನ್ಯೂಸ್!
ಸಾಯಿ ಪಲ್ಲವಿ ಟ್ವೀಟ್
Honestly, I don’t care for Rumours but when it involves friends who are family, I have to speak up.
— Sai Pallavi (@Sai_Pallavi92) September 22, 2023
An image from my film’s pooja ceremony was intentionally cropped and circulated with paid bots & disgusting intentions.
When I have pleasant announcements to share on my work…
The picture that is circulating on social media platforms is from Saipallavi's new movie #SK21 POOJA OPENING CEREMONY PIC!#SaiPallavi @Sai_Pallavi92 pic.twitter.com/N8SWTiojCA
— Sai Pallavi FC™ (@SaipallaviFC) September 20, 2023
ಇದನ್ನೂ ಓದಿ: Sai Pallavi: ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ; ಸಾಯಿ ಪಲ್ಲವಿ ಫ್ಯಾನ್ಸ್‌ಗೆ ಗುಡ್ ನ್ಯೂಸ್!
ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ
ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ 23ನೇ ಸಿನಿಮಾಗೆ ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi:) ಆಯ್ಕೆಯಾಗಿದ್ದಾರೆ. ʻಲವ್ ಸ್ಟೋರಿʼ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಕಾರ್ತಿಕೇಯ-2ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ.ಮೀನುಗಾರರ ಸಮುದಾಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.
-
ಪ್ರಮುಖ ಸುದ್ದಿ19 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್22 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ20 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕರ್ನಾಟಕ15 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ18 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ20 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ18 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ