Site icon Vistara News

Dil Pasand Movie | ಡಾರ್ಲಿಂಗ್‌ ಕೃಷ್ಣಾ ಅಭಿನಯದ ಬಹುನಿರೀಕ್ಷಿತ ಚಿತ್ರ ದಿಲ್ ಪಸಂದ್ ರಿಲೀಸ್‌ ಡೇಟ್‌ ಫಿಕ್ಸ್‌!

Dil Pasand Movie

ಬೆಂಗಳೂರು: ʻಲಕ್ಕಿ ಮ್ಯಾನ್‌’ ಸಿನಿಮಾದ ಯಶಸ್ಸಿನ ಬೆನ್ನಲ್ಲೆ ಡಾರ್ಲಿಂಗ್ ಕೃಷ್ಣ ನಟಿಸಿರುವ ಬಹು ನಿರೀಕ್ಷಿತ ಚಿತ್ರ ʻದಿಲ್ ಪಸಂದ್ʼ (Dil Pasand Movie) ಹೊಸ ಸುದ್ದಿಯೊಂದನ್ನು ನೀಡಿದೆ. ಇದೀಗ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಇದೇ ನವೆಂಬರ್ 11ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರಶ್ಮಿ ಫಿಲ್ಮ್ಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ನಿರ್ಮಿಸಿರುವ ಈ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ. ಪ್ರೇಮಕಥೆಯೊಂದಿಗೆ, ಕೌಟುಂಬಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಚಿತ್ರೀಕರಣ ನಂತರದ ಚಟುವಟಿಕೆ‌ ಬಿರುಸಿನಿಂದ ಸಾಗುತ್ತಿದ್ದು, ಮಾಸಾಂತ್ಯದಲ್ಲಿ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ | Kannada New Film | K ಕರಟಕ D ದಮನಕ; ಇದು ಶಿವಣ್ಣ-ಪ್ರಭುದೇವ-ಭಟ್ಟರ ಹೊಸ ಸಿನಿಮಾ ಜಾತಕ!

ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು, ಶೇಖರ್‌ ಚಂದ್ರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್‌ ಸಂಕಲನವಿದ್ದು, ನಾಯಕಿಯಾಗಿ ನಿಶ್ವಿತಾ ನಾಯ್ಡು ನಟಿಸಿದ್ದಾರೆ.

ಉಳಿದಂತೆ ಮೇಘಾ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಹರೀಶ್‌ ದೇವಿತಂದ್ರೆ, ಚಿತ್ಕಲಾ ಬಿರಾದಾರ್‌, ಅರುಣಾ ಬಾಲರಾಜ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Lucky Man Movie | ಇಂದು ರಾಜ್ಯಾದ್ಯಂತ ಲಕ್ಕಿಮ್ಯಾನ್ ರಿಲೀಸ್ : ಥಿಯೇಟರ್ ಅಂಗಳದಲ್ಲಿ ಸಂಭ್ರಮಿಸಿದ ಅಪ್ಪು ಫ್ಯಾನ್ಸ್!

Exit mobile version