Site icon Vistara News

Actor Rajinikanth | ನಿರ್ದೇಶನದತ್ತ ಐಶ್ವರ್ಯಾ ರಜನಿಕಾಂತ್‌: ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ ಸೂಪರ್‌ ಸ್ಟಾರ್‌!

Actor Rajinikanth

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ (Actor Rajinikanth ) ಪುತ್ರಿ ಐಶ್ವರ್ಯಾ ಅವರು ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ʻಲಾಲ್‌ ಸಲಾಮ್‌ʼ ಹೆಸರಿನಲ್ಲಿ ಇವರು ಚಿತ್ರ ಮಾಡುತ್ತಿದ್ದು, ಸೂಪರ್‌ ಸ್ಟಾರ್‌ ರಜನಿಕಾಂತ್‌ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸಿನಿಮಾದ ನಿರ್ಮಾಪಕರೇ ಘೋಷಿಸಿದ್ದಾರೆ.

ಲೈಕಾ ಪ್ರೊಡಕ್ಷನ್‌ ನಿರ್ಮಾಣ ಮಾಡುತ್ತಿದ್ದು, ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶ್ರೀಧರ್ ಪಿಲ್ಲೈ ಅವರು ಚಿತ್ರಕ್ಕೆ ಹಣ ಹೂಡಿದ್ದಾರೆ.

ಇದನ್ನೂ ಓದಿ | ಕಾಲಿವುಡ್​ ನಿರ್ಮಾಪಕರಿಗೆ ಸೇರಿದ ಸ್ಥಳಗಳಲ್ಲಿ ಐಟಿ ರೇಡ್​; 200 ಕೋಟಿ ರೂ ಅಕ್ರಮ ಆದಾಯ ಪತ್ತೆ

ಚಿತ್ರ ಕ್ರಿಕೆಟ್‌ ಹಿನ್ನೆಲೆಯ ಆಧರಿಸಿದ ಸಿನಿಮಾ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ವಿಕ್ರಾಂತ್‌ ಮತ್ತು ವಿಷ್ಣು ವಿಶಾಲ್‌ ಇಬ್ಬರೂ ಕ್ರಿಕೆಟ್‌ ಪಟುಗಳಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹೇಳುವುದಾಗಿಯೂ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್‌, ಜ್ಯೂ.ಎನ್‌ಟಿಆರ್‌ ಭಾಗಿ

Exit mobile version