ಬೆಂಗಳೂರು: ಕೆಲವು ನಿರ್ದೇಶಕರು ಸಾರ್ವಜನಿಕವಾಗಿ ನಟಿಯರ ಜತೆ ಅಸಭ್ಯವಾಗಿ ವರ್ತಿಸಿರುವ ಅದೆಷ್ಟೋ ಘಟನೆಗಳು ನಡೆದಿವೆ. ಇದೀಗ ಪ್ರಿಯಾಂಕಾ ಚೋಪ್ರಾ (priyanka chopra sister) ಕುಟುಂಬದ ಮನ್ನಾರಾ ಚೋಪ್ರಾಗೆ (Mannara Chopra) ಇದೇ ರೀತಿಯ ಅನುಭವ ಆಗಿದೆ. ನಿರ್ದೇಶಕ ಎಎಸ್ ರವಿ ಕುಮಾರ್ ಚೌಧರಿ ಅವರು ನಟಿಯ ಕೆನ್ನೆಗೆ ಕಿಸ್ ಮಾಡಿದ್ದಾರೆ. ರವಿ ಕುಮಾರ್ (Ravi Kumar) ಅವರಿಂದ ಮನ್ನಾರಾ ಇದನ್ನು ನಿರೀಕ್ಷಿಸಿರಲಿಲ್ಲ. ಈ ವೇಳೆ ನಿರ್ದೇಶಕ ಆಕೆಯ ಭುಜದ ಸುತ್ತ ಕೈ ಹಾಕಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನಿರ್ದೇಶಕನಿಗೆ ಹಲವರು ತರಾಟೆ ತೆಗೆದುಕೊಂಡಿದ್ದಾರೆ.
ಆಗಸ್ಟ್ 29ರಂದು ಈ ಈ ಘಟನೆ ನಡೆದಿದೆ. ಮನ್ನಾರಾ ನಟಿಸುತ್ತಿರುವ ‘ತಿರಗಬದರ ಸಾಮಿ’ (Thiragabadara Saami) ಚಿತ್ರಕ್ಕೆ ರವಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಭಾಗಿ ಆಗಿತ್ತು. ಎಲ್ಲರೂ ಬಂದು ನಟಿಯ ಜತೆ ಪೋಸ್ ಕೊಡುತ್ತಿದ್ದರು. ಅದೇ ರೀತಿ ರವಿ ಕೂಡ ಆಗಮಿಸಿ ಮನ್ನಾರಾ ಹೆಗಲಮೇಲೆ ಕೈ ಹಾಕಿ ನಿಂತಿದ್ದಾರೆ. ನಂತರ ಏಕಾಏಕಿ ನಟಿಯ ಕೆನ್ನೆಗೆ ಕಿಸ್ ಮಾಡಿದ್ದಾರೆ. ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ನಟಿ ಮನ್ನಾರ ಆಶ್ಚರ್ಯದಿಂದ ನಿಂತಿದ್ದರು.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ʻʻಪಾಪ ನಟಿಗೆ ಎಷ್ಟು ಮುಜುಗರವಾಯ್ತೋʼʼ ಎಂದು ಕಮೆಂಟ್ ಮಾಡಿದ್ದಾರೆ. “ಏನು ತೆವಲು ಇದು?ʼʼಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ‘ಇದು ಲೈಂಗಿಕ ಕಿರುಕುಳ. ಅವರು ನಗುತ್ತಿರಬಹುದು. ಆದರೆ, ಮನ್ನಾರಾ ಮನಸ್ಸಲ್ಲಿ ಬೇಸರ ಇದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಚಿತ್ರೋದ್ಯಮವು ಮೊಳಕೆಯೊಡೆಯುತ್ತಿರುವ MeToo ಘಟನೆಗಳನ್ನು ಗುರುತಿಸಬೇಕು. ಅವುಗಳನ್ನು ಬೆಳೆಯಲು ಬಿಡಬಾರದುʼʼ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.
ವೈರಲ್ ವಿಡಿಯೊ
ಇಂತಹ ಘಟನೆ ನಡೆದು ಸುದ್ದಿಯಾಗುತ್ತಿರುವುದು ಇದೇನು ಮೊದಲಲ್ಲ. ಈ ಹಿಂದೆ ಕಾಜಲ್ ಅಗರ್ವಾಲ್ ಕೂಡ ಇದೇ ರೀತಿಯ ವರ್ತನೆಗೆ ಗುರಿಯಾಗಿದ್ದರು. . ಛಾಯಾಗ್ರಾಹಕ ಚೋಟಾ ಕೆ ನಾಯ್ಡು ವೇದಿಕೆಯಲ್ಲಿ ಕಾಜಲ್‌ಗೆ ಮುತ್ತಿಟ್ಟ ಫೋಟೊಗಳು ವೈರಲ್ ಆಗಿತ್ತು.
ವೈರಲ್ ವಿಡಿಯೊಗೆ ಮನ್ನಾರಾ ಇನ್ನೂ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗಷ್ಟೇ ದಿಲ್ ರಾಜು ಅವರ ಟೀಸರ್ ಬಿಡುಗಡೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಚಿತ್ರದಲ್ಲಿ ಮಕರಂದ್ ದೇಶಪಾಂಡೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಾಜ್ ತರುಣ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Indrajit Lankesh: ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾಗೆ ʻಗೌರಿʼ ಟೈಟಲ್ ಫಿಕ್ಸ್;ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ
ಮನ್ನಾರಾ 2014ರಲ್ಲಿ ತೆಲುಗಿನಲ್ಲಿ ಪ್ರೇʻಮ ಗೀಮಾ ಜಂತ ನೈʼ(Prema Geema Jantha Nai ) ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಜಿದ್ (2014), ಸಂದಮಾರುತಮ್ (2015) ಮತ್ತು ಜಕ್ಕಣ್ಣ (2019) ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಕೊನೆಯ ಬಾರಿಗೆ ಸೀತಾ (2019) ಚಿತ್ರದಲ್ಲಿ ಕಾಣಿಸಿಕೊಂಡರು.