ಬೆಂಗಳೂರು : ಪತಿ ಅರ್ನವ್ ಅಲಿಯಾಸ್ ಅಮ್ಜಾದ್ ಖಾನ್ ವಿರುದ್ಧ ದಿವ್ಯಾ ಶ್ರೀಧರ್ (Divya Shridhar) ಚೆನ್ನೈ ಪೊಲೀಸರ ಬಳಿ ಹಲ್ಲೆ ಹಾಗೂ ವಂಚನೆ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸಮನ್ಸ್ ನೀಡಿದ್ದ ಚೆನ್ನೈ ಪೊಲೀಸರು ಅಂತಿಮವಾಗಿ ಶುಕ್ರವಾರ (ಅ.14) ಅಮ್ಜಾದ್ ಖಾನ್‌ರನ್ನು ಬಂಧಿಸಿದ್ದಾರೆ.
ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಲವ್ ಜಿಹಾದ್ ಆರೋಪವನ್ನೂ ಪತಿಯ ಮೇಲೆ ಹೊರೆಸಿ, ದಿವ್ಯಾ ದೂರು ನೀಡಿದ್ದರು. ಈ ದೂರಿನಲ್ಲಿ ಪತಿಯು ತಮ್ಮ ಮೇಲೆ ಮಾಡಿದ ಹಲ್ಲೆಯಿಂದಾಗಿ ಗರ್ಭಪಾತದ ಭಯವೂ ಕಾಡುತ್ತಿದೆ ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ. ದೂರು ಸ್ವೀಕರಿಸಿದ್ದ ಪೊಲೀಸರು ಅಮ್ಜಾದ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದರು. ಆದರೆ ಪೊಲೀಸರ ವಿಚಾರಣೆಗೆ ಅಮ್ಜಾದ್ ಖಾನ್ ಹಾಜರಾಗದ ಹಿನ್ನೆಲ್ಲೆಯಲ್ಲಿ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | ಮಹಿಳಾ ಪೊಲೀಸ್‌ಗೆ ಕಚ್ಚಿ ಹಲ್ಲೆ ಮಾಡಿದ ಕರ್ನಾಟಕ ಮೂಲದ ನಟಿ ಪುಣೆಯಲ್ಲಿ ಅರೆಸ್ಟ್!
ಸೆಟ್‌ನಲ್ಲಿಯೇ ಬಂಧಿಸಿದ ಪೊಲೀಸರು!
ಅಕ್ಟೋಬರ್ 14ರಂದು ತಮಿಳುನಾಡಿನ ಕೂಟಂಬಾಕಂನಲ್ಲಿ ಧಾರಾವಾಹಿಯೊಂದರ ಚಿತ್ರೀಕರಣದಲ್ಲಿ ಅಮ್ಜಾದ್ ಖಾನ್ ಇದ್ದಾಗ ಅಲ್ಲಿಗೆ ತೆರಳಿದ ಪೊಲೀಸ್ ಸಿಬ್ಬಂದಿ ಸೆಟ್‌ನಲ್ಲಿಯೇ ಅಮ್ಜಾದ್ ಖಾನ್ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಕರ್ನಾಟಕ ಮಹಿಳಾ ಆಯೋಗ ಸಾಥ್
ದಿವ್ಯಾ ಶ್ರೀಧರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಹಿಳಾ ಆಯೋಗ ಕೂಡ ಪ್ರವೇಶ ಮಾಡಿತ್ತು ಎನ್ನಲಾಗಿದೆ. ಕರ್ನಾಟಕದ ನಟಿ ದಿವ್ಯಾ ಶ್ರೀಧರ್‌ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿ, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜತೆ ದೂರವಾಣಿ ಮೂಲಕವೂ ಮಾತನಾಡಿದ್ದರು ಎನ್ನಲಾಗಿದೆ. ತಮಿಳುನಾಡು ಮಹಿಳಾ ಆಯೋಗದ ಜತೆ ದೂರವಾಣಿಯಲ್ಲಿ ಮಾತನಾಡುವುದರ ಜತೆಗೆ ಲಿಖಿತ ರೂಪದಲ್ಲೂ ಆಯೋಗಕ್ಕೆ ಪತ್ರ ಬರೆದು, ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರಂತೆ.
ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ದಿವ್ಯಾ ಶ್ರೀಧರ್ ಹಾಗೂ ಅಮ್ಜಾದ್ ಖಾನ್ 2015ರಲ್ಲಿ ‘ಕೆಳದಿ ಕಣ್ಮನಿ’ ತಮಿಳು ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು.
ಇದನ್ನೂ ಓದಿ | ಗುಪ್ತ ಸಂಬಂಧ ಶಂಕಿಸಿ ಗಂಡನ ಗುಪ್ತಾಂಗಕ್ಕೆ ಕುದಿಯುವ ನೀರು ಸುರಿದ ಪತ್ನಿ