Site icon Vistara News

Divya Vasantha: ʻರಾಜ್ಯವೇ ಖುಷಿ ಪಡೋ ಸುದ್ದಿʼ ನೀಡಿ ನೆರೆಯ ರಾಜ್ಯದಲ್ಲಿ ಅಡಗಿ ಕುಳಿತಿದ್ದ ನಿರೂಪಕಿ ದಿವ್ಯಾ ವಸಂತ ಅರೆಸ್ಟ್‌

Divya Vasantha anchor arrest

ಬೆಂಗಳೂರು: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ (Divya Vasantha) ಜು.11 ಅರೆಸ್ಟ್‌ ಆಗಿದ್ದಾರೆ.ʻ ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು’ ಎಂದು ಹೇಳಿ ವೈರಲ್‌ ಆಗಿ , ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಬೆನ್ನಲ್ಲೇ ಕಾಣೆಯಾಗಿದ್ದರು ದಿವ್ಯಾ ವಸಂತ. ತಲೆಮರೆಸಿಕೊಂಡಿದ್ದ ದಿವ್ಯಾ ಅವರನ್ನು ಅರೆಸ್ಟ್ ಮಾಡಿದ್ದು, ಜೀವನ್ ಭೀಮಾನಗರ  ಪೊಲೀಸರು.

ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದಿವ್ಯಾ ಅವರನ್ನು ಕೊನೆಗೂ ಬಂದನ ಮಾಡಿದ್ದಾರೆ ಪೊಲೀಸರು. ತಮಿಳುನಾಡಿನಿಂದ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದರು ದಿವ್ಯಾ. ಕೇರಳದಿಂದ ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಸದ್ಯ ಇದೀಗ ಕೇಸ್‌ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಜೆ. ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಈ ಮುಂಚೆ ಪೊಲೀಸರು ಮೂವರನ್ನು ಬಂಧಿಸಿದ್ದರು. ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ಎನ್ನಲಾಗುತ್ತಿದ್ದ ವೆಂಕಟೇಶ್ ಹಾಗೂ ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿತ್ತು. ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್‌ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: Shiva Rajkumar: ನಾಳೆ ಶಿವ ರಾಜ್​ಕುಮಾರ್​​ ಬರ್ತ್​ಡೇ: ‘45’ ಸಿನಿಮಾದಿಂದ ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್

ಶ್ರೀಮಂತರು, ಮಸಾಜ್ ಪಾರ್ಲರ್‌ಗಳು ಹಾಗೂ ವೈದ್ಯರೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದ್ದರು. ಹನಿಟ್ರ್ಯಾಪ್ ರೀತಿ ಹಣವುಳ್ಳವರನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿತ್ತು.ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾ ವಸಂತ ಮನೆ ಮೇಲೆ ದಾಳಿ ನಡೆಸಿ ಕ್ಯಾಮೆರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದರು ಪೊಲೀಸರು.

ಆರೋಪಿಗಳಿಗೂ ರಾಜ್‌ ನ್ಯೂಸ್‌ ಗೂ ಯಾವುದೇ ಸಂಬಂಧವಿಲ್ಲ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ಎನ್ನಲಾಗುತ್ತಿದ್ದ ವೆಂಕಟೇಶ್ ಹಾಗೂ ರಾಜ್‌ ನ್ಯೂಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್‌ ನ್ಯೂಸ್‌ ಸ್ಪಷ್ಟೀಕರಣ ನೀಡಿದೆ. ʻʻಬ್ಲಾಕ್‌ ಮೇಲ್‌ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಿಗೂ ರಾಜ್‌ನ್ಯೂಸ್‌ಗೂ
ಯಾವುದೇ ಸಂಬಂಧವಿಲ್ಲ. ರಾಜ್‌ ನ್ಯೂಸ್‌ನಲ್ಲಿ ನಾವು ಯಾವುದೇ ಸಿಇಓ ಹುದ್ದೆಯನ್ನು ಸೃಷ್ಠಿಸಿಲ್ಲ. ರಾಜಾನುಕುಂಟೆ ವೆಂಕಟೇಶ್‌ ಎಂಬವರು 3 ತಿಂಗಳಿನಿಂದ ನಮ್ಮಸಂಸ್ಥೆಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಹೊರಗುತ್ತಿಗೆ
ಆಧಾರದಲ್ಲಿ ಕೆಲಸ ಮಾಡುತಿದ್ದರು. ನಮ್ಮ ಸಂಸ್ಥೆಯ ಸಿಇಓ ಹಾಗೂ ಉದ್ಯೋಗಿ ಅಲ್ಲ. ಅವರು ಸಿಇಓ ಎಂದು ಹೇಳಿಕೊಂಡಿರುವುದಕ್ಕೆ ಕಾನೂನು ಕ್ರಮ ಕೈಗೊಳ್ಳುತಿದ್ದೇವೆ. ಉಳಿದಂತೆ ಇತರ ಯಾವ ಆರೋಪಿಗಳು ನಮ್ಮ ಸಂಸ್ಥೆಯ ಉದ್ಯೋಗಿಗಳಲ್ಲ. ಆರೋಪಿಗಳು ರಾಜ್‌ ನ್ಯೂಸ್‌ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ದಯವಿಟ್ಟು ರಾಜ್‌ ನ್ಯೂಸ್‌ ಹೆಸರನ್ನು ಈ ಆರೋಪಿಗಳ ಜತೆ
ಸೇರಿಸಬಾರದೆಂದು ತಮಲ್ಲಿಕಳಕಳಿಯ ಮನವಿ ಮಾಡುತ್ತೇನೆʼʼಎಂದು ಹೇಳಿಕೊಂಡಿದೆ.

Exit mobile version