Site icon Vistara News

Nayanthara | ಒಟಿಟಿಯಲ್ಲಿ ಬರುತ್ತಿದೆ ನಯನತಾರಾ-ವಿಘ್ನೇಶ್ ಶಿವನ್ ಮದುವೆಯ ಸಾಕ್ಷ್ಯಚಿತ್ರ

Nayantara

ಬೆಂಗಳೂರು: ಕಾಲಿವುಡ್​ ಲೇಡಿ ಸೂಪರ್​ ಸ್ಟಾರ್​ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯ ನೇರವೇರಿತ್ತು. ಈ ಇಬ್ಬರ ಕುರಿತು ಅಭಿಮಾನಿಗಳು ಕುತೂಹಲದಿಂದ ಮದುವೆ ಬಗ್ಗೆ ಸರ್ಚ್ ಮಾಡಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ ಅಭಿಮಾನಿಗಳ ಕುತೂಹಲಕ್ಕೆ ‘ಬಿಯಾಂಡ್ ದಿ ಫೇರಿ ಟೇಲ್‌’ (Beyond the Fairy Tale) ಎಂಬ ಟೀಸರ್‌ವೊಂದನ್ನು ಹರಿಬಿಟ್ಟಿದ್ದಾರೆ.

ಕೆಲವೇ ದಿನಗಳಲ್ಲಿ ನೂತನ ಜೋಡಿಯ ತೆರೆಮರೆಯ ಕೆಲವು ಕುತೂಹಕಾರಿ ವಿಚಾರಗಳನ್ನು ಈ ಡಾಕ್ಯುಮೆಂಟರಿಯಲ್ಲಿ ಅಭಿಮಾನಿಗಳು ನೋಡಬಹುದು. ಗೌತಮ್ ವಾಸುದೇವ್ ಮೆನನ್ ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಘ್ನೇಶ್ ಮತ್ತು ನಯನತಾರಾ ಅವರ ರೌಡಿ ಪಿಕ್ಚರ್ಸ್ ಬ್ಯಾನರ್‌ ಅಡಿ ಈ ಡಾಕ್ಯುಮೆಂಟರಿ ನಿರ್ಮಾಣವಾಗಿದೆ.

ಮಹಾಬಲಿಪುರಂನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಪಾಲ್ಗೊಂಡಿದ್ದರು. ಆರಂಭದಲ್ಲಿ ತಿರುಪತಿಯಲ್ಲಿ ವಿವಾಹವಾಗುವುದಾಗಿ ಈ ಜೋಡಿ ನಿರ್ಧಾರ ಮಾಡಿತ್ತು. ಈ ವಿವಾಹಕ್ಕೆ ಕೇವಲ ಆಪ್ತರು ಮತ್ತು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನಟ, ನಟಿಯರು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯಗಳನ್ನು ಕೋರಿದ್ದರು.

ಇದನ್ನೂ ಓದಿ | Nayanthara’s 75th Film | ಮೆಹೆಂದಿ ರಂಗಿನ ನಡುವೆಯೇ ಹೊಸ ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವ ನಯನತಾರಾ

ಸೂಪರ್‌ಸ್ಟಾರ್‌ ರಜನಿಕಾಂತ್‌ , ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌, ಕಲಾವಿದರಾದ ಕಾರ್ತಿ, ಶರತ್‌ ಕುಮಾರ್, ಅಟ್ಲಿ, ವಿಜಯ್ ಸೇತುಪತಿ, ಮಣಿರತ್ನಂ ಸೇರಿದಂತೆ ಹಲವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದ್ದರು.
ಇದನ್ನೂ ಓದಿ | Nayantara Marriage : ತಿಮ್ಮಪ್ಪನ ದೇಗುಲದಲ್ಲಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌

Exit mobile version