ಬೆಂಗಳೂರು : ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಬ್ಯಾಕ್-ಟು-ಬ್ಯಾಕ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್ ಅವರೊಂದಿಗೆ ಫಾರ್ ರೆಜಿಸ್ಟ್ರೇಷನ್ (FOR REGN) ಸಿನಿಮಾ ಇನ್ನೇನು ಚಿತ್ರೀಕರಣ ಪೂರ್ಣಗೊಳ್ಳುವ ಹಂತದಲ್ಲಿದೆ. ಶುಗರ್ ಲೆಸ್ ಸಿನಿಮಾ ಹಾಡು ಇತ್ತೀಚೆಗಷ್ಟೇ ರಿಲೀಸ್ ಆಗಿ ಸೌಂಡಾಗಿದೆ. ಇಂಥ ಹೊತ್ತಲ್ಲಿ ಹೊಸ ಸುದ್ದಿಯೊಂದು ಬಂದಿದೆ.
ಅವರೀಗ
`ದೂರದರ್ಶನ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ದೂರದರ್ಶನದಲ್ಲಿ ಏನು ಕೆಲಸ ಅಂತ ಯೋಚಿಸುತ್ತಿದ್ದೀರಾ? ದೂರದರ್ಶನ ಅಂದರೆ ಟಿವಿ ಚಾನೆಲ್ ಅಲ್ಲ. ಬದಲಾಗಿ `ದೂರದರ್ಶನ’ ಉತ್ತುಂಗ ಕಾಲದಲ್ಲಿದ್ದ 1980ರ ದಶಕವನ್ನು ಪ್ರತಿಬಿಂಬಿಸುವ ಹೊಸ ಸಿನಿಮಾ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳಿಗೆ ಟಿವಿ ಬಂದ ಮೇಲೆ ಅಗಿರುವ ಪ್ರಭಾವಗಳೇ ದೂರದರ್ಶನದ ಸಾರ. ಟ್ರಂಕ್ ಚಿತ್ರಕ್ಕೆ ಸಂಭಾಷಣೆ ಬರೆದ ಸುಕೇಶ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಸರಳ ಹಳ್ಳಿ ಹುಡುಗನಾಗಿ ನಟಿಸಿದ್ದಾರೆ. ಅಯಾನಾ ನಾಯಕಿ. ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್ , ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ | Trivikrama: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ಡೇಟ್ ಅನೌನ್ಸ್!
“ನನಗೆ ಸಾಕಷ್ಟು ವಿಶಿಷ್ಟವಾದ ಕಮರ್ಷಿಯಲ್ ಚಿತ್ರಗಳ ಆಫರ್‌ಗಳು ಬರುತ್ತಿವೆ ಮತ್ತು ದೂರದರ್ಶನದ ಭಾವಪೂರ್ಣ ಚಿತ್ರಕಥೆಯಿಂದಾಗಿ ನಾನು ಅದರತ್ತ ಆಕರ್ಷಿತನಾಗಿದ್ದೇನೆ. ದೂರದರ್ಶನ ಚಿತ್ರದಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ ಸಣ್ಣ ಹಳ್ಳಿಯ ಜೀವನವು ಹೇಗೆ ಟಿವಿ ಬಂದ ಮೇಲೆ ಬದಲಾಗುತ್ತದೆ ಎಂಬುದು ಕಥೆ” ಎಂದು ಅವರು ಹಂಚಿಕೊಂಡಿದ್ದಾರೆ.
ಅಡಿಕೆ ತೋಟಗಳಿಗೆ ಹೆಸರಾದ ದಕ್ಷಿಣ ಕನ್ನಡದ ಪುಟ್ಟ ಪಟ್ಟಣವಾದ ಪುತ್ತೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. “ಕರ್ನಾಟಕದ ಹೆಚ್ಚಿನ ಸ್ಥಳಗಳು ಈಗಾಗಲೇ ಆಧುನೀಕರಣಗೊಂಡಿವೆ ಮತ್ತು ಇನ್ನೂ ಕೆಲವು ಸ್ಥಳಗಳು ಹಳೆಯ ಪ್ರಪಂಚದ ವೈಬ್ ಅನ್ನು ಹೊರಹೊಮ್ಮಿಸುತ್ತವೆ. ಪುತ್ತೂರು ಅದನ್ನು ಉಳಿಸಿಕೊಂಡಿದೆ. ನಗರಗಳಲ್ಲಿ ನಾವು ನೋಡುವ ಮೊಬೈಲ್ ಟವರ್‌ಗಳು ಮತ್ತು ವೈರ್‌ಗಳ ಕ್ರಿಸ್-ಕ್ರಾಸಿಂಗ್‌ನಂತಹ ಆಧುನಿಕ ಅಂಶಗಳಿಂದ ಸ್ಪರ್ಶಿಸದ ಬಹಳಷ್ಟು ಸೆಪಿಯಾ-ಟೋನ್ ಮನೆಗಳು ಮತ್ತು ಸ್ಥಳಗಳನ್ನು ನೀವು ಕಾಣಬಹುದು. ಇಂದಿಗೂ ಸ್ಥಳೀಯರಿಂದ ಪ್ರೋತ್ಸಾಹಿಸಲ್ಪಡುವ ಸಣ್ಣ ಹೋಟೆಲ್‌ಗಳು ಮತ್ತು ಸಣ್ಣಪುಟ್ಟ ಅಂಗಡಿಗಳಿವೆ. ಅದು ನಮಗೆ ಬೇಕಾದ ವಾತಾವರಣ. ನಾವು 40 ದಿನಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಎಂದು ಪೃಥ್ವಿ ಹೇಳಿದ್ದಾರೆ.
ಇದನ್ನೂ ಓದಿ | ಸಕುಟುಂಬ ಸಮೇತ ಸಿನಿಮಾಗೆ ಬನ್ನಿ! ರಕ್ಷಿತ್ ಸಿನಿಮಾ ಮೇ 20ರಂದು ಬಿಡುಗಡೆ
ದೂರದರ್ಶನದಲ್ಲಿ ಉಗ್ರಂ ಮಂಜು ಪ್ರಮುಖ ಪಾತ್ರದಲ್ಲಿದ್ದಾರೆ ಮತ್ತು ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದು, ಪ್ರದೀಪ್ ಆರ್.ರಾವ್ ಸಂಕಲನ ಮಾಡಿದ್ದಾರೆ.