Site icon Vistara News

Dune Part Two premiere: ರೋಬೋಟ್ ಸೂಟ್‌ನಲ್ಲಿ ಹೇಗೆ ಕಾಣಿಸ್ತಾಳೆ ನೋಡಿ ಹಾಲಿವುಡ್‌ ಸುಂದರಿ!

ಡ್ಯೂನ್: ಪಾರ್ಟ್‌ 2 ಚಿತ್ರದ ವರ್ಲ್ಡ್ ಪ್ರೀಮಿಯರ್‌ (Dune Part Two premiere) ಲಂಡನ್‌ನ ಲೀಸೆಸ್ಟರ್ ಸ್ಕ್ವೇರ್‌ನಲ್ಲಿ (Leicester Square) ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ನಟಿ ಜೆಂಡಾಯಾ (Zendaya) ಹೊಸ ಅವತಾರದಲ್ಲಿ ಕಂಡು ಬಂದರು. ಇವರು ರೆಡ್ ಕಾರ್ಪೆಟ್ ಮೇಲೆ ಸಿಲ್ವರ್ ರೋಬೋಟ್ ಸೂಟ್‌ನಲ್ಲಿ ಪೋಸ್ ನೀಡಿದ್ದಾರೆ.

ನಟಿ ಜೆಂಡಾಯಾ ಜತೆ ಅಮೆರಿಕನ್‌ ನಟ ತಿಮೋತಿ ಚಾಲಮೆಟ್ (Timothee Chalamet) ಪೋಸ್ ನೀಡಿದರು.

ಸ್ವೀಡಿಷ್ ನಟಿ ರೆಬೆಕಾ ಫರ್ಗುಸನ್ (Swedish actress Rebecca Ferguson) ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಿದ್ದಾರೆ. ಡ್ಯೂನ್: ಭಾಗ ಎರಡು ಫ್ರ್ಯಾಂಚೈಸ್ ಲೇಖಕ ಫ್ರಾಂಕ್ ಹರ್ಬರ್ಟ್ ಅವರ ಅದೇ ಹೆಸರಿನ ಮೆಚ್ಚುಗೆ ಪಡೆದ ಕಾದಂಬರಿಯನ್ನು ಆಧರಿಸಿದೆ.

ಈ ವೇಳೆ ಬ್ರಿಟಿಷ್ ನಟಿ ಫ್ಲಾರೆನ್ಸ್ (British actress Florence Pugh poses) ಪಗ್ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಿದ್ದು ಹೀಗೆ.

ನಟಿ ಜೆಂಡಾಯಾ, ನಿರ್ದೇಶಕ ಡೆನಿಸ್ ವಿಲ್ಲೆನ್ಯೂವ್ ಮತ್ತು ತಿಮೋತಿ ಚಾಲಮೆಟ್ (Zendaya, director Denis Villeneuve and Timothee Chalamet) ಒಟ್ಟಿಗೆ ಕಂಡು ಬಂದರು.

ಇದನ್ನೂ ಓದಿ: Challenging Star Darshan: `ಸಿಂಧೂರ ಲಕ್ಷ್ಮಣ’ನಾಗಿ ಮಿಂಚಲಿದ್ದಾರೆ ದರ್ಶನ್‌; ಸಾಲು ಸಾಲು ಸಿನಿಮಾಗಳು ಅನೌನ್ಸ್‌!

ಪ್ರೀಮಿಯರ್‌ನಲ್ಲಿ ನಟ ಡೆನಿಸ್ ವಿಲ್ಲೆನ್ಯೂವ್ , ನಟ ಅನ್ಯಾ ಟೇಲರ್-ಜಾಯ್ (Anya Taylor-Joy ) ರೆಡ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಸಿನಿಮಾ ಈ ಮುಂಚೆಯೇ ರಿಲೀಸ್‌ ಆಗಬೇಕಿತ್ತು. ಹಾಲಿವುಡ್ ನಟರ ಮುಷ್ಕರದಿಂದ ತಡವಾಗಿ ಬಿಡುಗಡೆ ಕಾಣುತ್ತಿದೆ. ಫೆಬ್ರವರಿ 28ರಿಂದ ವಿಶ್ವಾದ್ಯಂತ ತೆರೆ ಕಾಣಲಿದೆ.

Exit mobile version