Dune Part Two premiere: ರೋಬೋಟ್ ಸೂಟ್‌ನಲ್ಲಿ ಹೇಗೆ ಕಾಣಿಸ್ತಾಳೆ ನೋಡಿ ಹಾಲಿವುಡ್‌ ಸುಂದರಿ! - Vistara News

ಸಿನಿಮಾ

Dune Part Two premiere: ರೋಬೋಟ್ ಸೂಟ್‌ನಲ್ಲಿ ಹೇಗೆ ಕಾಣಿಸ್ತಾಳೆ ನೋಡಿ ಹಾಲಿವುಡ್‌ ಸುಂದರಿ!

ಸ್ವೀಡಿಷ್ ನಟಿ ರೆಬೆಕಾ ಫರ್ಗುಸನ್ (Swedish actress Rebecca Ferguson) ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಿದ್ದಾರೆ.

VISTARANEWS.COM


on

Dune Part Two premiere Zendaya, Timothee Chalamet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡ್ಯೂನ್: ಪಾರ್ಟ್‌ 2 ಚಿತ್ರದ ವರ್ಲ್ಡ್ ಪ್ರೀಮಿಯರ್‌ (Dune Part Two premiere) ಲಂಡನ್‌ನ ಲೀಸೆಸ್ಟರ್ ಸ್ಕ್ವೇರ್‌ನಲ್ಲಿ (Leicester Square) ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ನಟಿ ಜೆಂಡಾಯಾ (Zendaya) ಹೊಸ ಅವತಾರದಲ್ಲಿ ಕಂಡು ಬಂದರು. ಇವರು ರೆಡ್ ಕಾರ್ಪೆಟ್ ಮೇಲೆ ಸಿಲ್ವರ್ ರೋಬೋಟ್ ಸೂಟ್‌ನಲ್ಲಿ ಪೋಸ್ ನೀಡಿದ್ದಾರೆ.

ನಟಿ ಜೆಂಡಾಯಾ ಜತೆ ಅಮೆರಿಕನ್‌ ನಟ ತಿಮೋತಿ ಚಾಲಮೆಟ್ (Timothee Chalamet) ಪೋಸ್ ನೀಡಿದರು.

ಸ್ವೀಡಿಷ್ ನಟಿ ರೆಬೆಕಾ ಫರ್ಗುಸನ್ (Swedish actress Rebecca Ferguson) ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಿದ್ದಾರೆ. ಡ್ಯೂನ್: ಭಾಗ ಎರಡು ಫ್ರ್ಯಾಂಚೈಸ್ ಲೇಖಕ ಫ್ರಾಂಕ್ ಹರ್ಬರ್ಟ್ ಅವರ ಅದೇ ಹೆಸರಿನ ಮೆಚ್ಚುಗೆ ಪಡೆದ ಕಾದಂಬರಿಯನ್ನು ಆಧರಿಸಿದೆ.

ಈ ವೇಳೆ ಬ್ರಿಟಿಷ್ ನಟಿ ಫ್ಲಾರೆನ್ಸ್ (British actress Florence Pugh poses) ಪಗ್ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಿದ್ದು ಹೀಗೆ.

ನಟಿ ಜೆಂಡಾಯಾ, ನಿರ್ದೇಶಕ ಡೆನಿಸ್ ವಿಲ್ಲೆನ್ಯೂವ್ ಮತ್ತು ತಿಮೋತಿ ಚಾಲಮೆಟ್ (Zendaya, director Denis Villeneuve and Timothee Chalamet) ಒಟ್ಟಿಗೆ ಕಂಡು ಬಂದರು.

ಇದನ್ನೂ ಓದಿ: Challenging Star Darshan: `ಸಿಂಧೂರ ಲಕ್ಷ್ಮಣ’ನಾಗಿ ಮಿಂಚಲಿದ್ದಾರೆ ದರ್ಶನ್‌; ಸಾಲು ಸಾಲು ಸಿನಿಮಾಗಳು ಅನೌನ್ಸ್‌!

ಪ್ರೀಮಿಯರ್‌ನಲ್ಲಿ ನಟ ಡೆನಿಸ್ ವಿಲ್ಲೆನ್ಯೂವ್ , ನಟ ಅನ್ಯಾ ಟೇಲರ್-ಜಾಯ್ (Anya Taylor-Joy ) ರೆಡ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಸಿನಿಮಾ ಈ ಮುಂಚೆಯೇ ರಿಲೀಸ್‌ ಆಗಬೇಕಿತ್ತು. ಹಾಲಿವುಡ್ ನಟರ ಮುಷ್ಕರದಿಂದ ತಡವಾಗಿ ಬಿಡುಗಡೆ ಕಾಣುತ್ತಿದೆ. ಫೆಬ್ರವರಿ 28ರಿಂದ ವಿಶ್ವಾದ್ಯಂತ ತೆರೆ ಕಾಣಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

David Warner : ಬಾಹುಬಲಿ ರಾಜಮೌಳಿ ನಿರ್ದೇಶನದಲ್ಲಿ ಕ್ರಿಕೆಟಿಗ ಡೇವಿಡ್​ ವಾರ್ನರ್ ಆ್ಯಕ್ಟಿಂಗ್​; ಇಲ್ಲಿದೆ ವಿಡಿಯೊ

David Warner: ಡೇವಿಡ್ ವಾರ್ನರ್​ ಇದೀಗ ರಾಜಮೌಳಿ ಜತೆಗೊಂದು ಜಾಹೀರಾತಿನಲ್ಲಿ ನಟಿಸಿದ್ದಾರೆ. ಆ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಾರ್ನರ್​​ ಆ್ಯಕ್ಟಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಗೊಂಡಿದೆ. ವಾರ್ನರ್ ಅವರು ಜಾಹೀರಾತಿನ ವಿಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ

VISTARANEWS.COM


on

David Warner
Koo

ಬೆಂಗಳೂರು: ಡೇವಿಡ್ ವಾರ್ನರ್ (David Warner) ಕ್ರಿಕೆಟ್​ ಕ್ಷೇತ್ರದ ಮಹಾನ್​ ದಂತಕಥೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಜಾಗತಿಕ ಸೂಪರ್​ಸ್ಟಾರ್​. ಜತೆಗೆ ಅವರು ವಿನೋದ ಪ್ರಿಯ ಕೂಡ. ಎಲ್ಲದಕ್ಕಿಂತ ಹೆಚ್ಚಾಗಿ ಭಾರತದ ಬಗ್ಗೆ ಹೆಚ್ಚು ಅಭಿಮಾನ ಇಟ್ಟುಕೊಂಡವರು. ಅದರಲ್ಲೂ ಐಪಿಎಲ್​ನಲ್ಲಿ ತಾವು ಪ್ರತಿನಿಧಿಸಿರುವ ಸನ್ ರೈಸರ್ಸ್​ ಹೈದಾರಾಬಾದ್ ಬಗ್ಗೆ ಹೆಚ್ಚು ಒಲವು. ಇದೇ ಕಾರಣಕ್ಕೆ ಅವರು ತೆಲುಗು ಸಿನಿಮಾ ಕ್ಷೇತ್ರ ಅದರಲ್ಲೂ ಅಲ್ಲು ಅರ್ಜುನ್ ಅಪ್ಪಟ ಅಭಿಮಾನಿ. ಆಗಿದ್ದಾರೆ. ಅಲ್ಲು ನಟಿಸಿದ ಪುಷ್ಟ ಸಿನಿಮಾದ ಸ್ಟೈಲ್​ಗಳನ್ನು ಆಟದ ನಡುವೆ ಮೈದಾನದಲ್ಲಿ ತೋರಿಸುವುದುಂಟು.

ವಾರ್ನರ್ ಈಗ ಎಸ್​ಆರ್​​ಎಚ್​ ತಂಡದಲ್ಲಿ ಇಲ್ಲ. ಅವರೀಗ ಡೆಲ್ಲಿಯ ಆರಂಭಿಕ ಬ್ಯಾಟರ್​. ಆದಾಗ್ಯೂ ಅವರು ತೆಲುಗು ಸಿನಿಮಾದ ಕಾರಣಕ್ಕೆ ನಟನೆಯಲ್ಲೂ ಹೆಚ್ಚು ಆಸಕ್ತಿ ವಹಿಸಿಕೊಂಡಿದ್ದಾರೆ. ಇಂಥ ಆಟಗಾರ ಇದೀಗ ಬಾಹುಬಲಿ ನಿರ್ದೇಶಕ ಎಸ್​. ಎಸ್​ ರಾಜಮೌಳಿ ಜತೆಗೊಂದು ಜಾಹೀರಾತಿನಲ್ಲಿ ನಟಿಸಿದ್ದಾರೆ. ಆ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಾರ್ನರ್​​ ಆ್ಯಕ್ಟಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಗೊಂಡಿದೆ. ವಾರ್ನರ್ ಅವರು ಜಾಹೀರಾತಿನ ವಿಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ

CRED ಯುಪಿಐ ಜಾಹೀರಾತು

ವಾರ್ನರ್​ ಗೀ ಈಗ ತಮ್ಮ ನಟನಾ ಕೌಶಲವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ. CRED ಯುಪಿಐ ಜಾಹೀರಾತಿನಲ್ಲಿ ಎಸ್.ಎಸ್.ರಾಜಮೌಳಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಬ್ಲಾಕ್ಬಸ್ಟರ್ ಚಲನಚಿತ್ರ ಆರ್​ಆರ್​​ಆರ್​ ನಿರ್ದೇಶಿಸಿದ ಹಾಗೂ ಭಾರತದ ಅತ್ಯುತ್ತಮ ನಿರ್ದೇಶಕರಾದ ರಾಜಮೌಳಿ ಜತೆ ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲೂ ರಾಜಮೌಳಿ ಡೈರೆಕ್ಟರ್​ ಪಾತ್ರ ವಹಿಸಿದ್ದಾರೆ. ವಾರ್ನರ್ ಪೌರಾಣಿಕ ರೀತಿಯ ಪಾತ್ರವೊಂದನ್ನು ಮಾಡಿದ್ದಾರೆ. ಇದು ಸಂಪೂರ್ಣವಾಗಿ ವ್ಯಂಗ್ಯ ಭರಿತ ಜಾಹೀರಾತಾಗಿದೆ.

ಇದನ್ನೂ ಓದಿ: Sanju Samson : ರೋಹಿತ್​ ಶರ್ಮಾ ರೆಕಾರ್ಡ್​ ಬ್ರೇಕ್ ಮಾಡಿದ ಸಂಜು; ಏನಿದು ವಿಶೇಷ ದಾಖಲೆ?

ಭಾರತ ವಾರ್ನರ್​ಗೆ ಎರಡನೇ ಮನೆ

ವಾರ್ನರ್ ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಜನರು ಮತ್ತು ಚಲನಚಿತ್ರಗಳ ಮೇಲಿನ ಪ್ರೀತಿಯಿಂದ ಭಾರತವನ್ನು ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ವಾರ್ನರ್ ಸನ್ರೈಸರ್ಸ್ ಹೈದರಾಬಾದ್ ತಂಡದ ಅವಿಭಾಜ್ಯ ಅಂಗವಾಗಿದ್ದರು. 2016 ರಲ್ಲಿ ಐಪಿಎಲ್ ಪ್ರಶಸ್ತಿ ಗೆಲುವಿನ ವೇಳೆ ತಂಡವನ್ನು ಮುನ್ನಡೆಸಿದ್ದರು. ಇದು ಅವರನ್ನು ಭಾರತದ ದಕ್ಷಿಣ ಭಾಗದ ನೆಚ್ಚಿನ ವಿದೇಶಿ ಕ್ರಿಕೆಟಿಗರಲ್ಲಿ ಒಬ್ಬರನ್ನಾಗಿ ಮಾಡಿದೆ.

ಆಸೀಸ್ ಆಟಗಾರ ಪ್ರಸ್ತುತ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ಭಾಗವಾಗಿದ್ದಾರೆ. ಅಲ್ಲಿ ಅವರು ಅಗ್ರ ಕ್ರಮಾಂಕದಲ್ಲಿ ಅವರ ಆಟಗಾರರಲ್ಲಿ ಒಬ್ಬರು. ವಾರ್ನರ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ ಮತ್ತು ಐಪಿಎಲ್ ನಂತರ, ಅವರು ಟಿ 20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಪರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Continue Reading

ಟಾಲಿವುಡ್

Allu Arjun: ʻಪುಷ್ಪ 2ʼ ಸಿನಿಮಾಗೆ ಹೆದರಿತಾ ʻಸಿಂಗಂʼ? ಅಜಯ್ ದೇವಗನ್ ಸಿನಿಮಾ ಮುಂದೂಡಿಕೆ!

Allu Arjun: ಈಗಿನ ಮಾಹಿತಿ ಪ್ರಕಾರ, ‘ಸಿಂಗಂ ಅಗೇನ್​’ (Singham Again) ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ ಎಂದು ವರದಿಯಾಗಿದೆ. ದೊಡ್ಡ ತಾರಾ ಬಳಗವೇ ಇದ್ದರೂ ತೆಲುಗು ಚಿತ್ರಕ್ಕೆ ಪೈಪೋಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ‘ `ಸಿಂಗಂ ಅಗೇನ್​’ ಸಿನಿಮಾಗೆ ರೋಹಿತ್​ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

VISTARANEWS.COM


on

Allu Arjun Singam fears Pushpa release postponed
Koo

ಬೆಂಗಳೂರು: ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ 2 ಸಿನಿಮಾ 2024ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಪುಷ್ಪ 2 ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಅದೇ ದಿನ ರೋಹಿತ್ ಶೆಟ್ಟಿ ನಿರ್ದೇಶನ, ಅಜಯ್ ದೇವಗನ್ (Ajay Devgn) ನಾಯಕನಾಗಿ ನಟಿಸಿರುವ ʻಸಿಂಗಂ ಅಗೇನ್ʼ ಸಿನಿಮಾ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಈಗಿನ ಮಾಹಿತಿ ಪ್ರಕಾರ, ‘ಸಿಂಗಂ ಅಗೇನ್​’ (Singham Again) ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ ಎಂದು ವರದಿಯಾಗಿದೆ.

ಚಿತ್ರದಲ್ಲಿ ಅಜಯ್ ದೇವಗನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ಕರೀನಾ ಕಪೂರ್, ಟೈಗರ್ ಶ್ರಾಫ್ ಮತ್ತು ವಿಕ್ಕಿ ಕೌಶಲ್ ನಟಿಸಿದ್ದಾರೆ. ದೊಡ್ಡ ತಾರಾ ಬಳಗವೇ ಇದ್ದರೂ ತೆಲುಗು ಚಿತ್ರಕ್ಕೆ ಪೈಪೋಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ‘ಸಿಂಗಂ ಅಗೇನ್​’ ಚಿತ್ರ ದೀಪಾವಳಿ ಸಮಯದಲ್ಲಿ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಒಂದು ಮೂಲದ ಪ್ರಕಾರ ‘ಸಿಂಗಂ ಅಗೇನ್​’ ಸಿನಿಮಾದ ರಿಲೀಸ್ ಡೇಟ್​ ಮುಂದೂಡಿಕೆ ಆಗಲು ‘ಪುಷ್ಪ 2’ ತಂಡದ ಪೈಪೋಟಿ ಕಾರಣ ಅಲ್ಲ. ಅಂದುಕೊಂಡ ವೇಗದಲ್ಲಿ ಈ ಸಿನಿಮಾದ ಕೆಲಸಗಳು ಮುಗಿಯುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Allu Arjun: `ಪುಷ್ಪ 2′ ಸಿನಿಮಾದ ಈ ಒಂದು ದೃಶ್ಯಕ್ಕೆ 50 ಕೋಟಿ ರೂ. ಖರ್ಚು!

`ಸಿಂಗಂ ಅಗೇನ್​’ ಸಿನಿಮಾಗೆ ರೋಹಿತ್​ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಜಯ್​ ದೇವಗನ್​ ಮಾತ್ರವಲ್ಲದೇ ಅನೇಕ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರೀನಾ ಕಪೂರ್​ ಖಾನ್​, ದೀಪಿಕಾ ಪಡುಕೋಣೆ ಸಹ ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದೇ ಚಿತ್ರದಲ್ಲಿ ಟೈಗರ್​ ಶ್ರಾಫ್​ ಮತ್ತು ಅಕ್ಷಯ್​ ಕುಮಾರ್​ ಅವರು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹಾಗಾಗಿ ಹಿಂದಿ ಪ್ರೇಕ್ಷಕರ ವಲಯದಲ್ಲಿ ಈ ಚಿತ್ರದ ಬಗ್ಗೆ ಹೈಪ್​ ಹೆಚ್ಚುತ್ತಿದೆ.

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Continue Reading

ಕಿರುತೆರೆ

Skanda Ashok: ‘ರಾಧಾ ರಮಣ’ ಹೀರೊ ಇನ್‌ಸ್ಟಾಗ್ರಾಮ್‌ ಹ್ಯಾಕ್: ವಂಚನೆಗೆ ಯತ್ನ!

Skanda Ashok: ಸ್ಕಂದ ಅಶೋಕ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅವರ ಫಾಲೋವರ್ಸ್‌ಗಳಿಗೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಅಕೌಂಟ್ ಹ್ಯಾಕ್ ಆದ ಲೊಕೆಷನ್ ಪರಿಶೀಲಿಸಿದ್ದಾರೆ. ಈ ಸಂಬಂಧ ಅಶೋಕ್ ಮೈಕ್ರೋ ಲೇಔಟ್‌ ಪೊಲೀಸರಿಗೆ ದೂರು ನೀಡಿದ್ದಾರೆ.

VISTARANEWS.COM


on

Skanda Ashok Social Media Hack
Koo

ಬೆಂಗಳೂರು: ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅವರ ಫಾಲೋವರ್ಸ್‌ಗಳಿಗೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅದೇ ರೀತಿ ಧಾರಾವಾಹಿ ನಟ ಸ್ಕಂದ ಅಶೋಕ್ (Skanda Ashok) ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ (Social Media Hack) ಮಾಡಿ ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕ್ ಮೈಕ್ರೋ ಲೇಔಟ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಾಯಕ ರಮಣನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಪಡೆದ ಹೆಣ್ಣು ಮಕ್ಕಳ ಹೃದಯ ಕದ್ದ ಸ್ಕಂದ ಅಶೋಕ್‌ ಇದೀಗ ಸೈಬರ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಸ್ಕಂದ ಅಶೋಕ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ವಂಚನೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸ್ಕಂದ ಅಶೋಕ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅವರ ಫಾಲೋವರ್ಸ್‌ಗಳಿಗೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಅಕೌಂಟ್ ಹ್ಯಾಕ್ ಆದ ಲೊಕೆಷನ್ ಪರಿಶೀಲಿಸಿದ್ದಾರೆ. ಚೆನೈ ಹಾಗೂ ಬೆಂಗಳೂರು ಮತ್ತು ನೈಜೀರಿಯಾ ಸ್ಥಳ ಎಂಬುದು ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Honeybee Attack : ಹುಲಿ ‌ಸೆರೆ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ; ಬೆದರಿ ಓಡಿ‌ದ ಸಾಕಾನೆ ಭೀಮ

‘ಅವನು ಮತ್ತು ಶ್ರಾವಣಿ’ (Avanu Mathe Shravani)ಎನ್ನುವ ಹೆಸರಿನ ಹೊಸ ಧಾರಾವಾಹಿ ಮೂಲಕ ಸ್ಕಂದ ಅಶೋಕ್‌ ಕಿರುತೆರೆಗೆ ಮರಳಿದ್ದರು. ಮಲಯಾಳಂನ ‘ನೋಟ್ ಬುಕ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟನೆಗೆ ಕಾಲಿಟ್ಟ ಸ್ಕಂದ ಮೊದಲ ಸಿನಿಮಾಕ್ಕೆ ಏಷಿಯನೆಟ್ ಫಿಲಂ ನೀಡುವ ಹೊಸ ಮುಖ ಪ್ರಶಸ್ತಿ ಪಡೆದಿದ್ದರು. ಮಲಯಾಳಂನ ‘ಪಾಸಿಟಿವ್’, ತೆಲುಗಿನ ‘ಮಲ್ಲಿ ಮಲ್ಲಿ’, ಮಲಯಾಳಂನ ‘ಎಲೆಕ್ಟ್ರಾ’, ತಮಿಳಿನ ‘ಅಂಗುಸಂ’ ಹಾಗೂ ‘ಮುಪ್ಪರಿಮಾನಂ’ ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನ ಸೆಳೆದ ಸ್ಕಂದ ‘ಚಾರುಲತಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಸು’ ಧಾರಾವಾಹಿಯಲ್ಲಿ ನಾಯಕ ಅರವಿಂದ ಆಗಿ ನಟಿಸುವ ಮೂಲಕ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.

ಚಾರುಲತಾ’ ಸಿನಿಮಾದ ನಂತರ ‘ಯೂ ಟರ್ನ್’ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ ಇವರು ತದ ನಂತರ ‘ಕಾನೂರಾಯಣ’, ‘ಜಿಗ್ರಿ ದೋಸ್ತ್’, ‘ದೇವಯಾನಿ’, ‘ಭೈರಾದೇವಿ’ ಹಾಗೂ ‘ರಣಾಂಗಣ’ ‘ಫ್ಲಾಟ್ ನಂ 9’, ‘ಬರ್ಬರಿಕಾ’ ಸಿನಿಮಾದಲ್ಲಿ ಸ್ಕಂದ ಬಣ್ಣ ಹಚ್ಚಿದ್ದಾರೆ.

Continue Reading

ಕಿರುತೆರೆ

Kannada Serials TRP: ಟಿಆರ್‌ಪಿ ರೇಸ್‌ನಲ್ಲಿ ‘ಶ್ರಾವಣಿ ಸುಬ್ರಮಣ್ಯ’: ಟಾಪ್​ ಐದರಲ್ಲಿ ಇಲ್ಲ ʻರಾಮಾಚಾರಿʼ!

Kannada Serials TRP: ಇತ್ತೀಚೆಗೆ ಪ್ರಸಾರ ಆರಂಭಿಸಿದ ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu Serial) ಎರಡನೇ ಸ್ಥಾನದಲ್ಲಿದೆ.ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ನಾಲ್ಕನೇ ಸ್ಥಾನದಲ್ಲಿದೆ.

VISTARANEWS.COM


on

Kannada Serials TRP Lakshmi Nivasa Serial On Top
Koo

ಬೆಂಗಳೂರು: ಈ ವಾರ ಧಾರಾವಾಹಿಗಳ ಟಿಆರ್‌ಪಿ (Kannada Serials TRP) ಲಿಸ್ಟ್‌ ಹೊರಬಿದ್ದಿದೆ. ಕನ್ನಡ ಧಾರಾವಾಹಿಗಳ 14ನೇ ವಾರದ ಟಿಆರ್​ಪಿಯಲ್ಲಿ ಹೊಸ ಧಾರಾವಾಹಿ ಎಂಟ್ರಿ ಕೊಟ್ಟಿದೆ. ಇತ್ತೀಚೆಗೆ ಪ್ರಸಾರ ಆರಂಭಿಸಿದ ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu Serial) ಎರಡನೇ ಸ್ಥಾನದಲ್ಲಿದೆ.

‘ಲಕ್ಷ್ಮಿ ನಿವಾಸ’

13ನೇ ವಾರದ ಟಿಆರ್​ಪಿ ಪ್ರಕಾರ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇರಲಿದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ (Kannada Serials TRP) ತೋರಿಸಲಾಗಿದೆ. ಸದ್ಯ ಜಯಂತ್‌ನ ಅಸಲಿ ಮುಖ ಜಾಹ್ನವಿ ತಿಳಿಯಬೇಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅದ್ದೂರಿ ಬಜೆಟ್​ನಲ್ಲಿ ಈ ಧಾರಾವಾಹಿ ಸಿದ್ಧವಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಟಾಪ್‌ 4ನಲ್ಲಿ `ರಾಮಾಚಾರಿ’ ಧಾರಾವಾಹಿ; ರೇಸ್‌ನಲ್ಲಿ ಇಲ್ಲ ʻಸತ್ಯʼ, ʻಶ್ರೀರಸ್ತು ಶುಭಮಸ್ತುʼ!

‘ಪುಟ್ಟಕ್ಕನ ಮಕ್ಕಳು’

ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಮೊದಲ ಮಗಳು ಸಹನಾ ಜೀವನ ಈಗಾಗಲೇ ಬೀದಿಗೆ ಬಿದ್ದಿದೆ. ಹಾಗೇ ಪುಟ್ಟಕ್ಕನ ಎರಡನೇ ಮಗಳು ಅತ್ತೆ ಬಂಗಾರಮ್ಮಳನ್ನು ಜೈಲಿಗೆ ಕಳುಹಿಸಿದ್ದಾಳೆ. ಈಗ ಬಂಗಾರಮ್ಮ ಜೈಲಿನಲ್ಲಿ ನಿಂತು ಪುಟ್ಟಕ ಮುಂದೇನೆ ತನ್ನ ಮನೆಯಿಂದಲೇ ಸ್ನೇಹಾಳನ್ನು ಮನೆಯಿಂದ ಆಚೆ ಹಾಕುವುದಾಗಿ ಹೇಳಿದ್ದಾಳೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ಅಶೋಕ್ ಹಾಗೂ ಆಕೆಯ ಗೆಳೆತಿಯ ಜೊತೆ ಮದುವೆ ನಡೆಯುತ್ತಿದೆ. ಇದರಿಂದ ಟಿಆರ್​ಪಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

 ‘ಶ್ರಾವಣಿ ಸುಬ್ರಮಣ್ಯ’

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kannada Serials TRP: ಟಾಪ್‌ 5ರಲ್ಲಿ ʻರಾಮಾಚಾರಿʼ: ʻಲಕ್ಷ್ಮೀ ನಿವಾಸʼ ಹಿಂದಿಕ್ಕಿದ ‘ಪುಟ್ಟಕ್ಕನ ಮಕ್ಕಳು’!

ಅಮೃತಧಾರೆ

ಅಮೃತಧಾರೆ’ ಧಾರಾವಾಹಿ ಸಾಕಷ್ಟು (amrithadhare serial kannada) ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ. ಸದ್ಯ ಭೂಮಿಕಾಗೆ ಅತ್ತೆಯ ನಿಜ ಮುಖ ಗೊತ್ತಾಗಿದೆ. ಗೌತಮ್‌ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗಿದೆ.

Continue Reading
Advertisement
IPL 2024
ಪ್ರಮುಖ ಸುದ್ದಿ22 mins ago

IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

NIA Raid
ಕರ್ನಾಟಕ33 mins ago

NIA Raid: ಹುಬ್ಬಳ್ಳಿಯಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಎನ್‌ಐಎ

Khalistan Terrorist
ಪ್ರಮುಖ ಸುದ್ದಿ53 mins ago

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Lok Sabha Election 2024
ಕರ್ನಾಟಕ1 hour ago

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Pakistan
ಪ್ರಮುಖ ಸುದ್ದಿ1 hour ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ2 hours ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ2 hours ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ2 hours ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ2 hours ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Iran- israel War
ದೇಶ2 hours ago

Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ11 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ19 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20241 day ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌