ಹಾಲಿವುಡ್ ನಟ ಜಾನಿ ಡೆಪ್ ದಾಖಲಿಸಿರುವ ಮಾನನಷ್ಟ ಪ್ರಕರಣದ ವಿಚಾರಣೆ ಭಾರಿ ಸದ್ದು ಮಾಡುತ್ತಿದೆ. ಜಾನಿ ಡೆಪ್ ಮತ್ತು ಆತನ ಮಾಜಿ ಪತ್ನಿ ಆಂಬರ್ ಹರ್ಡ್ ನಡುವಿನ ಈ ಜಗಳದಲ್ಲಿ ಉದ್ಯಮಿ ಎಲಾನ್ ಮಸ್ಕ್ ಹೆಸರು ಕೂಡ ತಳುಕು ಹಾಕಿಕೊಂಡಿದೆ.
ಜಾನಿ ಡೆಪ್ ಹಾಗೂ ಆಂಬರ್ ಹರ್ಡ್ 2017ರಲ್ಲೇ ವಿಚ್ಛೇದನ ಮಾಡಿಕೊಂಡಿದ್ದಾರೆ. ಇವರಿಗೆ ಅದಕ್ಕೂ ಎರಡು ವರ್ಷ ಹಿಂದೆ (2015)ಮದುವೆಯಾಗಿತ್ತು. ಆದರೆ ಇವರ ದಾಂಪತ್ಯ ವಿಷಮಯವಾಗಿತ್ತು. ಇಬ್ಬರೂ ಪರಸ್ಪರ ದೌರ್ಜನ್ಯ ನಡೆಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಅಂದರೆ ಇಬ್ಬರೂ ಡ್ರಗ್ಸ್ ಸೇವಿಸುತ್ತಿದ್ದರು. ಪರಸ್ಪರ ಹೊಡೆಯುವುದು- ಬಡಿಯುವುದು- ಹಿಂಸಿಸುವುದು ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿ, ಜಾನಿ ಡೆಪ್ ಹಿಂಸಾತ್ಮಕವಾಗಿ ವರ್ತಿಸುವ ವಿಡಿಯೋವನ್ನು ಕೂಡ ಹರ್ಡ್ ಬಿಡುಗಡೆ ಮಾಡಿದ್ದಾಳೆ.
ಹೀಗಾಗಿ ಎರಡೇ ವರ್ಷದಲ್ಲಿ ಇವರು ಬೇರೆ ಆಗುವ ಮನಸ್ಸು ಮಾಡಿದರು. 2017ರಲ್ಲಿ ಡೈವೋರ್ಸ್ ಫೈಲ್ ಮಾಡಿದರು. ಅದೇ ವರ್ಷ ವಿಚ್ಛೇದನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಹರ್ಡ್ ಜೊತೆಗೆ ಎಲಾನ್ ಮಸ್ಕ್ ಓಡಾಡುವುದು ಕಂಡುಬಂದಿತ್ತು. ಪ್ಯಾಪರಾಜಿಗಳು ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದರು.
ಜಾನಿ ಡೆಪ್ ಆರೋಪಿಸುವಂತೆ, ಇನ್ನೂ ಡೈವೋರ್ಸ್ ಪಡೆಯುವ ಮೊದಲೇ ಹರ್ಡ್ ಜೊತೆಗೆ ಮಸ್ಕ್ ಡೇಟಿಂಗ್ ಇಟ್ಟುಕೊಂಡಿದ್ದರು. ನನ್ನ ಸಂಸಾರ ಹಾಳಾಗಲು ಮಸ್ಕ್ ಕೂಡ ಕಾರಣ ಎಂದಿದ್ದಾರೆ. ಅವರು ಇನ್ನೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ- ಹರ್ಡ್ ಮತ್ತು ಕಾರಾ ಡಿವಿಯೆನೆ ಎಂಬ ಇನ್ನೊಬ್ಬಳು ನಟಿಯ ಜೊತೆಗೂ ಮಸ್ಕ್ ʼತ್ರಿಕೋನ ರತಿʼ ನಡೆಸಿದ್ದರು- ತ್ರೀಸಮ್ ಹೊಂದಿದ್ದರು ಎಂಬ ಆರೋಪ.
ಆದರೆ ಈ ಆರೋಪಗಳೆಲ್ಲಾ ನಿಜವಲ್ಲ ಎಂದು ಮಸ್ಕ್ ಅಲ್ಲಗಳೆದಿದ್ದಾರೆ. ಹರ್ಡ್ ಜೊತೆಗೆ ನಾನು ಡೇಟಿಂಗ್ ನಡೆಸಿದ್ದು ನಿಜ, ಆದರೆ ಆ ಹೊತ್ತಿಗಾಗಲೇ ಡೆಪ್‌ನಿಂದ ಹರ್ಡ್ ಬೇರೆಯಾಗಿದ್ದಳು. ಇನ್ನು ಕಾರಾ ನನಗೆ ಸ್ನೇಹಿತೆ ಅಷ್ಟೇ. ಆಕೆ ಜೊತೆಗೆ ನನಗೆ ದೈಹಿಕ ಸಂಬಂಧವಿಲ್ಲ ಎಂದಿದ್ದಾರೆ.
ಸ್ವತಃ ಎಲಾನ್ ಮಸ್ಕ್ ಮೂರು ಬಾರಿ ಮದುವೆಯಾಗಿ, ನಾಲ್ಕು ಬಾರಿ ವಿಚ್ಛೇದನ ಪಡೆದವರು. ಮೂರು ಮದುವೆಯಲ್ಲಿ ನಾಲ್ಕು ವಿಚ್ಛೇದನ ಹೇಗೆ? ಒಬ್ಬಳನ್ನೇ ಎರಡು ಬಾರಿ ಮದುವೆಯಾಗಿ ಎರಡು ಬಾರಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಆಸ್ಟ್ರೇಲಿಯನ್ ನಟಿ ನತಾಶಾ ಎಂಬಾಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ದೀಪಿಕಾ Cannes ಚಿತ್ರೋತ್ಸವ ತೀರ್ಪುಗಾರ್ತಿ: 9 ವರ್ಷದ ನಂತರ ದೊರೆತ ಅವಕಾಶ