ಬೆಂಗಳೂರು: ಬಿಗ್ ಬಾಸ್ OTT 2 (Elvish Yadav ) ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ( snake venom) ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದಿದ್ದಾರೆ. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದಾರೆ. ಹೊರಗೆ ಬರುತ್ತಲೇ ರಿಲ್ಯಾಕ್ಸ್ ಮೂಡ್‌ನಲ್ಲಿ ಕುಟುಂಬಸ್ಥರ ಜತೆ ಕಾಲ ಕಳೆಯುತ್ತಿದ್ದಾರೆ ಎಲ್ವಿಶ್ ಯಾದವ್. ಇದೀಗ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ (Siddhivinayak temple) ಭೇಟಿ ನೀಡಿದ ಕ್ಷಣವನ್ನು ಹಂಚಿಕೊಳ್ಳುವುದರ ಜತೆಗೆ ಇನ್‌ಸ್ಟಾದಲ್ಲಿ ಹೃದಯಸ್ಪರ್ಶಿಯಾಗಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಎಲ್ವಿಶ್ ತನ್ನ ಇನ್‌ಸ್ಟಾದಲ್ಲಿ ಕುಟುಂಬದ ಜತೆ ಇರುವ ಫೋಟೊ ಶೇರ್ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ, ಅವರ ಪೋಷಕರು, ಅಜ್ಜಿ ಮತ್ತು ಇತರ ಕುಟುಂಬ ಸದಸ್ಯರು ಇದ್ದಾರೆ. “ನನ್ನ ಬೆನ್ನೆಲುಬು”ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.
ಏನಿದು ಪ್ರಕರಣ?
ಹಾವಿನ ವಿಷವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿತ್ತು. ನಂತರ ಎಲ್ವಿಶ್‌ಗೆ ಗೌತಮ್ ಬುದ್ ನಗರ ನ್ಯಾಯಾಲಯವು ಇತ್ತೀಚೆಗೆ ಜಾಮೀನು ನೀಡಿತು. ಮಾರ್ಚ್ 17 ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು. ಇದರ ಜತೆಗೆ ಎಲ್ವಿಶ್ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.ಆ ಬಳಿಕ ಗುರುಗ್ರಾಮ್ ನ್ಯಾಯಾಲಯದಿಂದ ಜಾಮೀನು ಪಡೆದರು. ಎರಡು ಜಾಮೀನು ಪಡೆದ ಬಳಿಕ ಇದೀಗ ರಿಲ್ಯಾಕ್ಸ್ ಆಗಿದ್ದಾರೆ ಎಲ್ವಿಶ್.
ಇದನ್ನೂ ಓದಿ: Elvish Yadav: ಹಾವಿನ ವಿಷ ಬಳಸಿದ ಪ್ರಕರಣ: ತಪ್ಪೊಪ್ಪಿಕೊಂಡ ʻಬಿಗ್ ಬಾಸ್ ಹಿಂದಿ ಒಟಿಟಿ 2ʼ ವಿನ್ನರ್?
ಜಾಮೀನು ಪಡೆದ ನಂತರ, ಎಲ್ವಿಶ್ ತಮ್ಮ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ, “ಒಂದು ವಾರ ನಿಸ್ಸಂದೇಹವಾಗಿ ಕಳೆದುಹೋಯಿತು. ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು. ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ. ನನ್ನನ್ನು ಬೆಂಬಲಿಸಿದವರೆಲ್ಲರೂ ನನ್ನನ್ನು ಬೆಂಬಲಿಸಲಿಲ್ಲ, ನನ್ನ ಬಗ್ಗೆ ಕೆಟ್ಟದಾಗಿ ಹಾಗೂ ಚೆನ್ನಾಗಿ ಮಾತನಾಡಿದವರೆಲ್ಲರಿಗೂ, ಧನ್ಯವಾದಗಳು. ನಾನು ಎಲ್ಲರಿಗೂ ಧನ್ಯವಾದ ಮಾತ್ರ ಹೇಳಬಲ್ಲೆ. ನಾನು ನನ್ನ ಕೆಲಸಕ್ಕೆ ಮತ್ತೆ ಮರಳಿದ್ದೇನೆʼʼ ಎಂದು ಹೇಳಿಕೊಂಡಿದ್ದಾರೆ.