Site icon Vistara News

Satish Kaushik: ಸ್ನೇಹಿತ ಸತೀಶ್ ಕೌಶಿಕ್ ನೆನೆದು ಭಾವುಕರಾದ ಅನಿಲ್‌ ಕಪೂರ್‌, ಅನುಪಮ್ ಖೇರ್; ವಿಡಿಯೊ ವೈರಲ್‌!

Emotional Anil Kapoor at Satish Kaushik's memorial

ಬೆಂಗಳೂರು: ಅನುಪಮ್ ಖೇರ್ ಅವರು ತಮ್ಮ ದಿವಂಗತ ಸ್ನೇಹಿತ ಸತೀಶ್ ಕೌಶಿಕ್ (Satish Kaushik) ಅವರ ಜನ್ಮದಿನದ ವಾರ್ಷಿಕೋತ್ಸವದಂದು ಅವರ ನೆನಪಿಗಾಗಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅನಿಲ್ ಕಪೂರ್ ಸೇರಿದಂತೆ ಹಲವಾರು ತಾರೆಗಳು ಮತ್ತು ಸಿನಿಮಾದ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಈವೆಂಟ್‌ನ ವಿಡಿಯೊವನ್ನು ಅನುಪಮ್ ಖೇರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅನುಪಮ್‌ ಖೇರ್‌ ವಿಡಿಯೊ ಶೇರ್‌ ಮಾಡಿಕೊಂಡಿದ್ದು, ಕೊನೆಯ ದಿನಗಳಲ್ಲಿ ತಮ್ಮ ಸ್ನೇಹಿತ ಸತೀಶ್ ಕೌಶಿಕ್ ಅವರೊಂದಿಗೆ ಸಂಭಾಷಣೆ ಕುರಿತು ವೇದಿಕೆಯಲ್ಲಿ ಮಾತನಾಡಿದರು. ಈ ವೇಳೆ ವೇದಿಕೆಗೆ ಅನಿಲ್‌ ಕಪೂರ್‌ ಅವರನ್ನು ಅನುಪಮ್‌ ಖೇರ್‌ ಕರೆಯುತ್ತಿದ್ದಂತೆ ಅನಿಲ್‌ ಕಪೂರ್‌ ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ. ವೇದಿಕೆಗೆ ಬರಲು ನಿರಾಕರಿಸಿದ್ದಾರೆ. ಅವರನ್ನು ನೋಡಿ ಅನುಪಮ್ ಕೂಡ ಭಾವುಕರಾದರು.

ಅನಿಲ್‌ ಕಪೂರ್‌ ಅಳುತ್ತಿದ್ದಂತೆ ಅನಪಮ್‌ ಖೇರ್‌ ವೇದಿಕೆ ಮೇಲಿಂದ ʻʻಬಾ ಅನಿಲ್‌. ಹಿರೋಗಳು ಯಾವಾಗಲೂ ಅಳುತ್ತಾರೆ, ಸ್ನೇಹಿತರೂ ಕೂಡʼʼ ಎಂದು ಅನುಪಮ್ ಅವರಿಗೆ ವೇದಿಕೆಗೆ ಬರುವಂತೆ ಹೇಳಿದರು.

ಸತೀಶ್ ಕೌಶಿಕ್ ಅವರ ಅದ್ಭುತ ಜೀವನವನ್ನು ಆಚರಿಸಲು ಅವರ ನೆನಪಿಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈವೆಂಟ್‌ನಲ್ಲಿ ಅನುಪಮ್ ಖೇರ್ ಅವರು ಸಹ ಸ್ನೇಹಿತನ ಮೊದಲ ಅನಿಸಿಕೆ ಮತ್ತು ನಂತರ ಅವರನ್ನು ಮುಂಬೈನಲ್ಲಿ ಭೇಟಿಯಾದ ಬಗ್ಗೆ ಪ್ರಸ್ತಾಪಿಸಿದರು. ನಟನೊಂದಿಗಿನ ಬಾಂಧವ್ಯ, ಇಬ್ಬರೂ 48 ವರ್ಷಗಳನ್ನು ಒಟ್ಟಿಗೆ ಕಳೆದರ ಬಗ್ಗೆ ವಿವರಿಸಿದರು.

ಇದನ್ನೂ ಓದಿ: Satish Kaushik: ಸತೀಶ್ ಕೌಶಿಕ್ ನಿಧನದ ಮುಂಚೆ ಫಾರ್ಮ್‌ ಹೌಸ್‌ನಲ್ಲಿ ಔಷಧ ಪತ್ತೆ: ತನಿಖೆ ಕೈಗೊಂಡ ಪೊಲೀಸರು

ಅನಿಲ್‌ ಕಪೂರ್‌ ಭಾವುಕರಾದ ಕ್ಷಣ

ಮಾಧ್ಯಮದೊಂದಿಗೆ ಮಾತನಾಡಿದ ಅನುಪಮ್ ಖೇರ್, “ಯಾರೊಬ್ಬರ ಸಾವಿನ ಬಗ್ಗೆ ಶೋಕಿಸುವುದಕ್ಕಿಂತ, ನಾವು ಅವರ ಜೀವನವನ್ನು ಆಚರಿಸಬೇಕು. ಸುಮಾರು 11 ವರ್ಷಗಳ ಹಿಂದೆ, ನನ್ನ ತಂದೆ ನಿಧನರಾದರು. ನನ್ನ ತಂದೆ ತಾಯಿಗೆ ಮದುವೆಯಾಗಿ 59 ವರ್ಷಗಳಾಗಿವೆ. ನಂತರ ನಾನು ನನ್ನ ತಂದೆಯ ಜೀವನವನ್ನು ಆಚರಿಸಲು ಶುರು ಮಾಡಿದೆ. ಇದರಿಂದ ನನ್ನ ತಾಯಿ ತನ್ನ ಉಳಿದ ಜೀವನವನ್ನು ಸಂತೋಷದಿಂದ ಕಳೆಯಬಹುದು. ಅದರಂತೆ ಇದು ಕೂಡ. ಸತೀಶ್ ಮತ್ತು ನಾನು ಸುಮಾರು 48 ವರ್ಷಗಳಿಂದ ಸ್ನೇಹಿತರಾಗಿದ್ದೇವೆ ಮತ್ತು ಮುಂದೆಯೂ ಇರುತ್ತೇವೆʼʼಎಂದು ಹೇಳಿಕೊಂಡರು. ಸತೀಶ್ ಕೌಶಿಕ್ ಮಾರ್ಚ್ 8ರಂದು ನವದೆಹಲಿಯಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅನುಪಮ್ ಖೇರ್ ಅವರ ನಿಧನದ ಸುದ್ದಿಯನ್ನು ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದರು.

1965ರ ಏಪ್ರಿಲ್‌ 13ರಂದು ಹರ್ಯಾಣದಲ್ಲಿ ಜನಿಸಿದ ಸತೀಶ್‌ ಕೌಶಿಕ್‌, ಬಾಲಿವುಡ್‌ನ ಖ್ಯಾತ ನಟ, ಕಾಮೆಡಿಯನ್‌, ನಿರ್ದೇಶಕ ಹಾಗೂ ನಿರ್ಮಾಪಕ ಕೂಡ. ಬಾಲಿವುಡ್‌ಗೆ ಆಗಮಿಸುವ ಮುನ್ನ ಅವರು ಹಲವಾರು ನಾಟಕಗಳಲ್ಲಿ ನಟಿಸಿದ್ದರು. ಮಿ.ಇಂಡಿಯಾ ಫಿಲಂನ ಕಲಂದರ್‌, ದೀವಾನಾ ಮಸ್ತಾನಾದ ಪಪ್ಪು ಪೇಗರ್‌, ಬ್ರಿಕ್‌ ಲೇನ್‌ನ ಚಾನು ಅಹ್ಮದ್‌ ಮುಂತಾದ ಪಾತ್ರಗಳಲ್ಲಿ ಅವರು ನಟಿಸಿದ್ದರು. 1990ರ ರಾಮ್‌ ಲಖನ್‌ ಹಾಗೂ 1997ರ ಸಾಜನ್‌ ಚಲೇ ಸಸುರಾಲ್‌ ಸಿನಿಮಾಗಳಲ್ಲಿನ ನಟನೆಗಳಿಗೆ ಫಿಲಂಫೇರ್‌ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನೂ ಪಡೆದಿದ್ದರು. ಅವರಿಗೆ ಪತ್ನಿ ಹಾಗೂ ಮಗಳು ಇದ್ದಾರೆ.

Exit mobile version