Site icon Vistara News

Vijay Deverakonda | ಇ.ಡಿ ವಿಚಾರಣೆಗೆ ಹಾಜರಾದ ನಟ ವಿಜಯ್‌ ದೇವರಕೊಂಡ, ಕಾರಣ ಏನು?

Vijay Deverakonda ED

ಹೈದರಾಬಾದ್:‌ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್‌ ನಟ ವಿಜಯ್‌ ದೇವರಕೊಂಡ (Vijay Deverakonda) ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್‌ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಪೋರ್ಟ್ಸ್‌ ಆ್ಯಕ್ಷನ್‌ ಸಿನಿಮಾ ‘ಲೈಗರ್’ಗೆ ಹೂಡಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ನಟನನ್ನು ವಿಚಾರಣೆ ನಡೆಸಿದ್ದಾರೆ. ಸಿನಿಮಾದಲ್ಲಿ ಎಫ್‌ಇಎಂಎ ನಿಯಮ ಉಲ್ಲಂಘಿಸಿ, ವಿದೇಶದಿಂದ ಹಣ ಹೂಡಿಕೆ ಮಾಡಲಾಗಿದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ಮಾಪಕರಾದ ಪುರಿ ಜಗನ್ನಾಥ್‌ ಹಾಗೂ ಚಾರ್ಮಿ ಕೌರ್‌ ಅವರಿಗೂ ಇ.ಡಿ ಸಮನ್ಸ್‌ ಜಾರಿಗೊಳಿಸಿತ್ತು.

ವಿಜಯ್‌ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ ಬಹುನಿರೀಕ್ಷಿತ ಸಿನಿಮಾ ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುವಲ್ಲಿ ಸಿನಿಮಾ ವಿಫಲವಾಯಿತು. ೧೦೦ ಕೋಟಿ ರೂ.ಗಿಂತ ಅಧಿಕ ಹಣ ವ್ಯಯಿಸಿ ಸಿನಿಮಾ ನಿರ್ಮಿಸಲಾಗಿತ್ತು. ಆದರೆ, ಸಿನಿಮಾವು ೬೦ ಕೋಟಿ ರೂ. ಮಾತ್ರ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ | Vijay Deverakonda | ಒಂದು ಮಹತ್ವದ ಸಂಕಲ್ಪ ಮಾಡಿ, ನೋಂದಣಿ ಮಾಡಿಸಿದ ವಿಜಯ ದೇವರಕೊಂಡ; ಅಮ್ಮನ ಸಾಥ್​

Exit mobile version