ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ಎಂಬ ಕುತೂಹಲ ಮೂಡಿದೆ. ಇದಕ್ಕೆ ಕಾರಣವಾಗಿರುವುದು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಒಂದು ಫೋಟೊ.
ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಸೋನಾಕ್ಷಿ ಸಿನ್ಹಾ ಕೂಡ ಒಬ್ಬರು. ʼದಬಂಗ್ʼ ʼರೌಡಿ ರಾಥೋರ್ʼ ಮುಂತಾದ ಸೂಪರ್ ಡೂಪರ್ ಸಿನಿಮಾಗಳಲ್ಲಿ ಅಭಿನಯಿಸಿರುವ ಸೋನಾಕ್ಷಿ ಸಿನ್ಹಾ ಇಷ್ಟು ದಿನ ಸಿನಮಾ ಬಗ್ಗೇನೆ ಸುದ್ದಿ ಕೋಡ್ತೀರೋ ಗ್ಯಾಪ್‌ನಲ್ಲಿ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಕೈಬೆರಳಿಗೆ ಧರಿಸಿಕೊಂಡ ರಿಂಗ್, ಜೊತೆಗೆ ಗಂಡಸಿನ ಒಂದು ಕೈ- ತೋರಿಸುವ ತನ್ನ ಪೋಸ್ಟ್ ಹಂಚಿಕೊಂಡಿರುವ ನಟಿ, ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ರಿಂಗ್ ನೋಡಿದ ಕೂಡಲೇ ಸೋನಾಕ್ಷಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿದ್ದು ಸಹಜವೇ.
ಇದನ್ನೂ ಓದಿ : ʼದೇವರ ಪುತ್ರಿʼ ಬಾಲಿವುಡ್ ಎಂಟ್ರಿ?: ಸಾರಾ ತೆಂಡೂಲ್ಕರ್ ಸಿನಿಮಾ ಚರ್ಚೆ
ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸಾಕಷ್ಟು ಪೋಸ್ಟ್‌ಗಳನ್ನು ಈಗಾಗಲೇ ಅವರು ಹಂಚಿಕೊಂಡಿದ್ದು, ಅವರ ಎಡಗೈಯಲ್ಲಿ ವಜ್ರದುಂಗುರ ಕಣ್ಣಿಗೆ ಕುಕ್ಕುವಂತಿದೆ. ಅಷ್ಟೇ ಅಲ್ಲದೇ ಪೋಟೋದಲ್ಲಿ ಒಬ್ಬರ ತೋಳನ್ನು ಹಿಡಿದಿರುವಂತೆ ಪೋಸ್ ನೀಡಿದ್ದಾರೆ.
ಪೋಟೋ ಜೊತೆ ʼʼಬಿಗ್ ಡೇ ಫಾರ್ ಮೀ..! ನನ್ನ ಕನಸು ನನಸಾಗುವ ಸಮಯ ಬಂದಿದೆ. ನನಗೆ ಕಾಯಲು ಆಗುತ್ತಿಲ್ಲ. ಇದು ತುಂಬಾ ಸುಲಭ (SO EZI) ಎಂದು ಭಾವಿಸಿರಲಿಲ್ಲʼʼ ಎಂದು ಹಾರ್ಟ್ ಇಮೋಜಿ ಜತೆ ಕೂತೂಹಲ ಬರುವಂತೆ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಜಾಹೀರ್ ಇಖ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗಳು ಕೇಳಿಬಂದಿದ್ದವು. ಈ ಗಾಸಿಪ್ ಸೋನಾಕ್ಷಿ ಸಿನ್ಹಾ ಕಿವಿಗೆ ಬಿದ್ದಾಗ, ಜಾಹೀರ್ ನನ್ನ ಬೆಸ್ಟ್ ಫ್ರೆಂಡ್ ಅಂತಲೂ ಹೇಳಿಕೊಂಡಿದ್ದರು. ಆದರೆ ಅವರು ಯಾರು ಎಂಬುದನ್ನು ಇದುವರೆಗೂ ರಿವೀಲ್ ಮಾಡಿಲ್ಲ. ಸೋನಾಕ್ಷಿಯ ಇನ್ನಷ್ಟು ಸ್ಪಷ್ಟ ಪೋಸ್ಟ್‌ಗಳಿಗಾಗಿ ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ | Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು