Site icon Vistara News

Actor Rajinikanth: ಚಡ್ಡಿ ಧರಿಸಿ, ಸ್ಟೈಲ್‌ ಆಗಿ ಕಂಡ ರಜನಿಕಾಂತ್‌; ಅಸಲಿ ವಿಷ್ಯಾನೇ ಬೇರೆ!

fake Rajinikanth sudhakar Prabhu

ಬೆಂಗಳೂರು: ಚಡ್ಡಿ ಧರಿಸಿ (Actor Rajinikanth), ಸ್ಟೈಲ್‌ ಆಗಿ ಕನ್ನಡಕವನ್ನು ಹಾಕಿಕೊಂಡು, ಪೋಸ್‌ ಕೊಡುತ್ತಿದ್ದ ವ್ಯಕ್ತಿಯನ್ನು ಕಂಡು ಜನ ಓಡೋಡಿ ಬರುತ್ತಾರೆ. ರಜನಿ ..ರಜನಿ ಎಂದು ಬಂದವರು ಆ ವ್ಯಕ್ತಿ ನೋಡಿ ತಬ್ಬಿಬ್ಬಾಗಿದ್ದಾರೆ. ತಲೈವಾ ರೀತಿಯಲ್ಲೇ ಗಡ್ಡ.. ತಲೆ ಕೂದಲು.. ಸಣಕಲು ದೇಹ. ಕನ್ನಡಕ.. ದೂರದಿಂದ ನೋಡಿದರೆ ರಜನಿಕಾಂತ್ ಅಂತಲೇ ಹೇಳಬೇಕು. ಆದರೆ ಇವರು ಸೂಪರ್‌ ಸ್ಟಾರ್‌ ರಜನಿ ಅಲ್ಲ. ಕೇರಳದ ವ್ಯಕ್ತಿಯೊಬ್ಬರು ಥೇಟ್ ರಜನಿಕಾಂತ್ ರೀತಿಯೇ ಇದ್ದಾರೆ. ಇದೀಗ ಈ ವಿಡಿಯೊ ವ್ಯಾಪಕವಾಗಿ ವೈರಲ್‌ ಆಗುತ್ತಿದೆ.

ಈ ಡುಪ್ಲಿಕೇಟ್ ರಜನಿಕಾಂತ್‌ ಹೆಸರು ಸುಧಾಕರ್ ಪ್ರಭು. ಕೇರಳದ ಕೊಚ್ಚಿನ ಈ ವ್ಯಕ್ತಿ ಎಲ್ಲರ ಗಮನ ಸೆಳೆಯುತ್ತಾರೆ. ಕೊಚ್ಚಿನ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಮಲಯಾಳಂ ಸಿನಿಮಾ ನಿರ್ದೇಶಕ ನಾದಿರ್ಷಾ ಇತ್ತೀಚೆಗೆ ರಜನಿ ರೀತಿ ಕಾಣುವ ಸುಧಾಕರ್ ಪ್ರಭು ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದರು. ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಜೂಮ್‌ ಮಾಡಿ ರಜನಿಕಾಂತ್‌ ಹೌದೋ ಅಲ್ಲವೋ ಎಂದು ನೋಡಿದ್ದಾರೆ ನೆಟ್ಟಿಗರು.

ಅಷ್ಟೇ ಅಲ್ಲದೇ ನೆಟ್ಟಿಗರು ಕಮೆಂಟ್‌ ಮೂಲಕ ಅಭಿಪ್ರಾಯ ಹೊರಹಾಕಿದ್ದಾರೆ. ಯೂಟ್ಯೂಬ್‌ ಚಾನಲ್‌ ಒಂದು, ಸುಧಾಕರ್ ಪ್ರಭು ಅವರನ್ನು ಸಂದರ್ಶನ ಮಾಡಿದೆ. ಸ್ವಲ್ಪ ರಜನಿಕಾಂತ್ ರೀತಿ ಕಾಣುತ್ತಿದ್ದ ಸುಧಾಕರ್ ಅವರನ್ನು ಸಲೂನ್‌ಗೆ ಕರೆದುಕೊಂಡು ಮೇಕ್‌ ಓವರ್ ಮಾಡಿಸಿದ್ದಾರೆ. ಬಳಿಕ ಮೂವರು ಬಾಡಿಗಾರ್ಡ್‌ಗಳ ಜತೆ ಸುಧಾಕರ್ ಅವರನ್ನು ಕೊಚ್ಚಿಯಲ್ಲಿ ಸುತ್ತಾಡಿಸಿದ್ದಾರೆ.

ಇದನ್ನೂ ಓದಿ: Actor Rajinikanth: ರಜನಿಕಾಂತ್ ಅಭಿನಯದ ʻತಲೈವರ್ 170ʼ ಫಸ್ಟ್‌ ಲುಕ್‌ ಔಟ್‌!

ಸಿನಿಮಾಗಳಲ್ಲಿ ಬ್ಯುಸಿಯಾದ ರಜನಿಕಾಂತ್‌

ರಜನಿಕಾಂತ್ (Actor Rajinikanth) ಮುಂಬರುವ ಸಿನಿಮಾ ತಲೈವರ್ 170 ಈಗಾಗಲೇ (Thalaivar 170 ) ಪಾತ್ರವರ್ಗವನ್ನು ಬಹಿರಂಗಪಡಿಸಿದೆ. ಇದೀಗ ಲೈಕಾ ಪ್ರೊಡಕ್ಷನ್ಸ್ ಹೊಸ ಪೋಸ್ಟರ್‌ ಹಂಚಿಕೊಂಡಿದೆ. ರಜನಿಕಾಂತ್ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಂಡಿದೆ.

ತಲೈವರ್ 170 ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್ 32 ವರ್ಷಗಳ ನಂತರ ನಟ ರಜನಿಕಾಂತ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಿತಿಕಾ ಸಿಂಗ್, ಮಂಜು ವಾರಿಯರ್, ತುಷಾರ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹಾದ್ ಫಾಸಿಲ್ ಸಹ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. .ಚಿತ್ರದಲ್ಲಿ ನಟ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಚಿತ್ರ ಫೇಕ್‌ ಎನ್‌ಕೌಂಟರ್‌ನ ಬಗ್ಗೆ ಇರಲಿದೆ ಎಂದು ಹೇಳಲಾಗಿದೆ. ಪೇಟ್ಟಾ, ದರ್ಬಾರ್, ಜೈಲರ್ ನಂತರ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ರಜನಿಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸಾಮಾಜಿಕ ಸಂದೇಶವುಳ್ಳ ಮನರಂಜನೆಯ ಚಿತ್ರವಾಗಿರುವ ಈ ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಲಾಲ್ ಸಲಾಮ್‌ʼ 2024ಕ್ಕೆ ತೆರೆಗೆ!

ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ (Aishwarya Rajinikanth) ನಿರ್ದೇಶನದ ಲಾಲ್ ಸಲಾಮ್‌ (Lal Salaam Poster) ಚಿತ್ರದ ಚಿತ್ರೀಕರಣ ಜುಲೈನಲ್ಲಿ ಪೂರ್ಣಗೊಂಡಿದ್ದು, ಇದೀಗ,‌ ಚಿತ್ರದ ಬಿಡುಗಡೆಯನ್ನು ಹೊಸ ಪೋಸ್ಟರ್‌ನೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ರಜನಿಕಾಂತ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ 2024ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಪಿಲ್ ದೇವ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಮುಂದಿನ ವರ್ಷ ಜನವರಿಯಲ್ಲಿ ಹಲವು ತಮಿಳು ಸಿನಿಮಾಗಳು ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ. ಶಿವಕಾರ್ತಿಕೇಯನ್ ಅಭಿನಯದ ʻಅಯಾಲನ್ ಪೊಂಗಲ್ʼ, ಸುಂದರ್ ಸಿ ಅವರ ಅರಣ್ಮನೈ 4, ಅರುಣ್ ವಿಜಯ್ ಅವರ ʻವನಂಗಾನ್ʼ ಮತ್ತು ಜಯಂ ರವಿ ಅವರ ʻಸೈರನ್ ಪೊಂಗಲ್ʼ ಬಿಡುಗಡೆಗೆ ಸಜ್ಜಾಗುತ್ತಿರುವ ಸಿನಿಮಾಗಳು. ಇವೆಲ್ಲ ಸಿನಿಮಾಗಳ ಜತೆ ʻಲಾಲ್ ಸಲಾಮ್ ʼ ಪೈಪೋಟಿ ನಡೆಸಲಿದೆ.

ಲಾಲ್ ಸಲಾಮ್ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಎ ಸುಬಾಸ್ಕರನ್ ಪ್ರಸ್ತುತಪಡಿಸಿದ್ದಾರೆ. ಲಾಲ್ ಸಲಾಮ್ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ʻಮೊಯ್ದೀನ್ ಭಾಯ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯ, ವಿಷ್ಣು ಮತ್ತು ವಿಕ್ರಾಂತ್ ಅವರ ಮೊದಲ ಸಹಯೋಗದಲ್ಲಿ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ.

Exit mobile version