ಪ್ರೀತಿಸಿ ಮದುವೆಯಾದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಗಾಯಕ ನಿಕ್ ಜೋನಾಸ್ (Nick Jonas) ಜೋಡಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇವರಿಬ್ಬರೂ ಸಾರ್ವಜನಿಕವಾಗಿ ಹಲವು ಸಮಾರಂಭ, ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಾರೆ. ಈಗಂತೂ ಒಂದು ಮುದ್ದಾದ ಹೆಣ್ಣು ಮಗುವಿಗೆ ಅಪ್ಪ-ಅಮ್ಮ (ಬಾಡಿಗೆ ತಾಯ್ತನ) ಆಗಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿ ಮುಖವನ್ನು ಬಹಿರಂಗಪಡಿಸಿದ್ದರು. ಈಗ ಈ ಜೋಡಿಯ ಒಂದು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2019ರಲ್ಲಿ ನಿಕ್ ಜೋನಾಸ್ ಮತ್ತು ಅವರ ಸಹೋದರರು ಒಂದು ಲೈವ್ ಕಾನ್ಸರ್ಟ್ ಏರ್ಪಡಿಸಿದ್ದರು. ಆಗ ನಡೆದ ಘಟನೆಯ ವಿಡಿಯೊ ಇದಾಗಿದ್ದು, ಮತ್ತೀಗ ವೈರಲ್ ಆಗುತ್ತಿದೆ.
ಇದು ಅಟ್ಲಾಂಟಾದಲ್ಲಿ ನಡೆದ ಮ್ಯೂಸಿಕ್ ಲೈವ್ ಕಾನ್ಸರ್ಟ್ ಆಗಿತ್ತು. ಪತಿಯೊಂದಿಗೆ ಸಮಾರಂಭಕ್ಕೆ ಪ್ರಿಯಾಂಕಾ ಚೋಪ್ರಾ ಕೂಡ ಹೋಗಿದ್ದರು. ಅಲ್ಲೆಲ್ಲ ಜೋನಾಸ್ ಅಭಿಮಾನಿಗಳು ತುಂಬಿ-ತುಳುಕುತ್ತಿದ್ದರು. ಸಾವಿರಾರು ಜನರ ಮಧ್ಯೆ ಯಶಸ್ವಿಯಾಗಿ ಲೈವ್ ಕಾನ್ಸರ್ಟ್ ನಡೆದು, ಮುಕ್ತಾಯಗೊಂಡಿತು. ಹೀಗೆ ಸಮಾರಂಭ ನಡೆಯುತ್ತಿದ್ದಾಗಲೇ ನಿಕ್ ಜೋನಾಸ್ ಅಭಿಮಾನಿಯೊಬ್ಬಳು ವೇದಿಕೆಯತ್ತ ತನ್ನ ಬ್ರಾ ಎಸೆದಿದ್ದಾಳೆ. ಕಾನ್ಸರ್ಟ್ ಮುಕ್ತಾಯವಾದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿಯ ಸಹೋದರ ಕೆವಿನ್ ಜೋನಾಸ್ ಜತೆ ಹೋಗುತ್ತಿದ್ದಾಗ ನೆಲದ ಬಿದ್ದಿದ್ದ ಬ್ರಾವನ್ನು ನೋಡಿ ಎತ್ತಿಕೊಂಡು, ಅದನ್ನು ಮೇಲೆತ್ತಿ ಪ್ರದರ್ಶಿಸುತ್ತ ಅಲ್ಲಿಂದ ತೆರಳಿದ್ದಾರೆ. ಬ್ರಾ ಹಿಡಿದ ಪ್ರಿಯಾಂಕಾ ಚೋಪ್ರಾ, ಅದನ್ನು ತಿರುಗಿಸಿ, ತಿರುಗಿಸಿ ಕ್ಯಾಮೆರಾಕ್ಕೆ ತೋರಿಸಿದ್ದಾರೆ. ಈ ವೇಳೆ ಅವರು ನಗುತ್ತಿದ್ದರು. ಅದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಮೊದಲು ಭೇಟಿಯಾಗಿದ್ದು ಮೆಟ್ ಗಾಲಾದಲ್ಲಿ 2017ರಲ್ಲಿ. ಪ್ರಿಯಾಂಕಾ ಚೋಪ್ರಾ ವಯಸ್ಸಿನಲ್ಲಿ ನಿಕ್ ಜೋನಾಸ್ಗಿಂತಲೂ ದೊಡ್ಡವರು. ಅದು ಅವರಿಗೆ ಮುಖ್ಯವಾಗಲಿಲ್ಲ, 2018ರಲ್ಲಿ ಜೋಧ್ಪುರದಲ್ಲಿ ವಿವಾಹವಾದರು. ಸದ್ಯ ಪ್ರಿಯಾಂಕಾ ಚೋಪ್ರಾ ತನ್ನ ಪತಿಯೊಂದಿಗೆ ಅಮೆರಿಕದಲ್ಲಿ ವಾಸವಾಗಿದ್ದಾರೆ. 2022ರಲ್ಲಿ ಅವರು ಬಾಡಿಗೆತಾಯಿ ಮೂಲಕ ಹೆಣ್ಣುಮಗುವನ್ನು ಪಡೆದಿದ್ದಾರೆ.