ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ, ʻಕಾವಾಲಾʼ ಹಾಡು (Kaavaalaa Song) ಸಖತ್ ಸೆನ್ಷೆಷನ್ ಕ್ರಿಯೇಟ್ ಮಾಡಿದೆ. ಈ ಚಿತ್ರದ ಈ ಹಾಡಿನಿಂದಾಗಿ ತಮನ್ನಾ ಭಾಟಿಯಾ ಮತ್ತೊಮ್ಮೆ ಸಿನಿರಸಿಕರನ್ನು ಆಕರ್ಷಿಸಿದ್ದಾರೆ. ಇದೀಗ ʻಕಾವಾಲಾʼ ಹಾಡಿನ ಸಣ್ಣ ಸಣ್ಣ ವಿಡಿಯೊ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಷ್ಟೇ ಅಲ್ಲದೇ ತಮನ್ನಾ ಸ್ಟೆಪ್ಸ್ ಖ್ಯಾತ ಪಾಪ್ ಗಾಯಕಿ ಶಕೀರಾ ಅವರ ‘ವಾಕಾ ವಾಕಾ’ ಹಾಡಿಗೆ ನೆಟ್ಟಿಗರು ಹೋಲಿಸಲು ಶುರು ಮಾಡಿದ್ದಾರೆ. ‘ವಾಕಾ ವಾಕಾ’ ಹಾಡಿಗೆ ತಮನ್ನಾ ಸ್ಟೆಪ್ಸ್ ಸಿಂಕ್ ಆಗಿದ್ದು, ಇದೀಗ ಮತ್ತೆ ʻಕಾವಾಲಾʼ ಟ್ರೆಂಡ್ ಆಗಲು ಶುರುವಾಗಿದೆ.
ತಮನ್ನಾ ಭಾಟಿಯಾ ಕೂಡ ಪೋಸ್ಟ್ ರಿಟ್ವೀಟ್ ಮಾಡಿದ್ದಾರೆ, “ಸಿಂಕ್ ಅನ್ನು ಒಪ್ಪಿಕೊಳ್ಳಬೇಕು” ಎಂಬ ಶೀರ್ಷಿಕೆಯೊಂದಿಗೆ, ಅಭಿಮಾನಿಗಳು ಕ್ಲಿಪ್ ಹಂಚಿಕೊಂಡಿದ್ದಾರೆ. “ನೀವು ನಮ್ಮ ಭಾರತೀಯ ಶಕೀರಾ” ಎಂದು ಅವರ ಫ್ಯಾನ್ಸ್‌ಗಳು ಕಮೆಂಟ್ ಮಾಡಿದ್ದಾರೆ. ನಟಿಯನ್ನು ಹಲವರು “ಬಬ್ಲಿ” ಎಂದು ಕರೆಯಲು ಶುರು ಮಾಡಿದ್ದಾರೆ. ಈ ಹಿಂದೆ ತಮನ್ನಾ ಅವರ ಕರ್ಲಿ ಹೇರ್ ಲುಕ್ ಕಂಡು ಶಕೀರಾ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎನ್ನಲಾಗುತ್ತಿತ್ತು. ಜೈಲರ್ ಸಿನಿಮಾದ ʻಕಾವಾಲಾʼ ಹಾಡನ್ನು ಶಿಲ್ಪಾ ರಾವ್ ಹಾಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಜಾನಿ ಮಾಸ್ಟರ್ ಈ ಮ್ಯೂಸಿಕ್ ವಿಡಿಯೊಗೆ ಕೊರಿಯೋಗ್ರಫಿ ಮಾಡಿದ್ದಾರೆ.
ಇದನ್ನೂ ಓದಿ: Jailer Film: ಮೈ ಚಳಿ ಬಿಟ್ಟು ಸಖತ್ ಸ್ಟೆಪ್ಸ್ ಹಾಕಿದ ತಮನ್ನಾ; ನಟಿಯ ಮೈಮಾಟಕ್ಕೆ ಫ್ಯಾನ್ಸ್ ಸುಸ್ತು!
Have to admit the sync is pretty good 😉 https://t.co/3hogKqrLuz
— Tamannaah Bhatia (@tamannaahspeaks) July 9, 2023
ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ ‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ. ʻಜೈಲರ್ ಮುತ್ತುವೇಲ್ ಪಾಂಡಿಯನ್ʼ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದಾರೆ.
ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಕೂಡ ‘ಜೈಲರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ಜಾಫರ್ ಸಾದಿಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.