ಬೆಂಗಳೂರು : ಭಾರತದ ಮಾಜಿ ಪ್ರಧಾನ ಮಂತ್ರಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Film on Vajpayee) ಜೀವನ ಚರಿತ್ರೆ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಆಟಲ್ ಎಂಬ ಶೀರ್ಷಿಕೆಯ, ʼಮೈನ್ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇʼ (Atal- Main RahoonYa Na Rahoon, Yeh Desh Rehna Chahiye) ಎಂಬ ಟ್ಯಾಗ್‌ಲೈನ್ ಹೊಂದಿರುವ ಚಿತ್ರವು 2023ರಲ್ಲಿ ತೆರೆಗೆ ಬರಲಿದೆ.
ಉಲ್ಲೇಖ್ ಎನ್ ಪಿ ಅವರ ಪುಸ್ತಕ ʻದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಮತ್ತು ಪ್ಯಾರಡಾಕ್ಸ್ʼ (‘The Untold Vajpayee: Politician and Paradox’) ಅನ್ನು ಸಿನಿಮಾ ಮಾಡಲು ಚಿತ್ರತಂಡ ಸಜ್ಜಾಗಿದೆ.
ಈ ಚಿತ್ರವನ್ನು ಭಾನುಶಾಲಿ ಸ್ಟುಡಿಯೋಸ್ ಹಾಗೂ ಲೆಜೆಂಡ್ ಸ್ಟುಡಿಯೋಸ್ ಪ್ರಸ್ತುತ ಪಡಿಸಲಿವೆ. ಜನ್ಹಿತ್ ಮೇ ಜಾರಿ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪಿಎಂ ನರೇಂದ್ರ ಮೋದಿ (2019) ಚಿತ್ರವನ್ನು ನಿರ್ಮಿಸಿದ ಸಂದೀಪ್ ಸಿಂಗ್ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರದ ನಿರ್ದೇಶಕರು ಹಾಗೂ ಪಾತ್ರಗಳನ್ನು ಚಿತ್ರತಂಡ ಎಲ್ಲಿಯೂ ರಿವೀಲ್ ಮಾಡಿಲ್ಲ. ಮುಂದಿನ ವರ್ಷ ಕ್ರಿಸ್‌ಮಸ್ ದಿನದಂದು ಚಿತ್ರವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ | Queen 2 Web Series : ಶೂಟಿಂಗ್ ಫೋಟೊ ಹಂಚಿಕೊಂಡ ರಮ್ಯಾ ಕೃಷ್ಣನ್
ವಿನೋದ್ ಭಾನುಶಾಲಿ ಮಾತನಾಡಿ, ʻʻನಾನು ಅಟಲ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರು ಅಪ್ರತಿಮ ನಾಯಕ ಹಾಗೂ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಬೆಳ್ಳಿತೆರೆಗೆ ಅವರ ಕುರಿತು ಚಿತ್ರ ತರುವುದು ನಮ್ಮ ಗೌರವವಾಗಿದೆʼʼ ಎಂದರು.
ಸಂದೀಪ್ ಸಿಂಗ್ ಮಾತನಾಡಿ, ʻʻಭಾರತೀಯ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಅಟಲ್ ಕೂಡ ಒಬ್ಬರು. ಅವರು ತಮ್ಮ ಮಾತುಗಳಿಂದಲೇ ಶತ್ರುಗಳ ಹೃದಯವನ್ನು ಗೆದ್ದರು. ಅವರ ಜೀವನ ಕಥೆಗಳನ್ನು, ರಾಜಕೀಯ ಸಿದ್ಧಾಂತಗಳನ್ನು ಮಾತ್ರವಲ್ಲದೆ ಅವರ ಮಾನವೀಯ ಮತ್ತು ಕಾವ್ಯಾತ್ಮಕ ಅಂಶಗಳನ್ನು ತೋರಿಸಲು ಚಲನಚಿತ್ರ ಅತ್ಯುತ್ತಮ ಸಂವಹನ ಮಾಧ್ಯಮ ಎಂದು ನಾನು ಭಾವಿಸುತ್ತೇನೆʼʼ ಎಂದರು.
ನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್, ಕಮಲೇಶ್ ಭಾನುಶಾಲಿ ಮತ್ತು ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ, ಜೀಶನ್ ಅಹ್ಮದ್ ಮತ್ತು ಶಿವ್ ಶರ್ಮಾ ಸಹ-ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ | ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್ ಪಾರ್ಟಿ, ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ವಶಕ್ಕೆ