Site icon Vistara News

Film Chamber : ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಭಾಮಾ ಹರೀಶ್‌ ಸೋದರರಿಂದ ನಿಂದನೆ: ಪೊಲೀಸರಿಗೆ ಚಿತ್ರ ನಿರ್ಮಾಪಕ ದೂರು

Karnataka Film Chamber

ಬೆಂಗಳೂರು: ಕರ್ನಾಟಕ ಫಿಲ್ಮ್ ಚೇಂಬರ್ (Karnataka Film Chamber) ಅಧ್ಯಕ್ಷ ಭಾಮಾ ಹರೀಶ್ (Bhama Harish) ಅವರ ಸಹೋದರರ (Bhama Harish Brothers) ವಿರುದ್ಧ ನಿಂದನೆ ಆರೋಪ ಕೇಳಿಬಂದಿದೆ.

ಭಾಮಾ ಹರೀಶ್ ತಮ್ಮಂದಿರಾದ ಭಾಮಾ ಗಿರೀಶ್, ಭಾಮಾ ದಿವಾಕರ್ ಅವರು ಫಿಲ್ಮ್ ಚೇಂಬರ್‌ನ ಸದಸ್ಯರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಈಗ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ನೀಡಲಾಗಿದೆ. ಫಿಲ್ಮ್ ಚೇಂಬರ್ ಸದಸ್ಯ, ಚಿತ್ರ ನಿರ್ಮಾಪಕ ರವೀಂದ್ರ (Film producer Ravindra) ಅವರು ಭಾಮಾ ಗಿರೀಶ್‌ ಮತ್ತು ಭಾಮಾ ದಿವಾಕರ್‌ ಮೇಲೆ ದೂರು ನೀಡಿದ್ದಾರೆ.

ಇತ್ತೀಚೆಗೆ ನಡೆದ ಫಿಲಂ ಫೆಸ್ಟಿವಲ್‌ನಲ್ಲಿ ಫಿಲಂ ಚೇಂಬರ್‌ ಸದಸ್ಯರೇ ಆದ ಅಂಚೆಹಳ್ಳಿ ಶಿವಕುಮಾರ್‌ ಮತ್ತು ರವೀಂದ್ರ ಅವರ ನಡುವೆ ಗಲಾಟೆ ನಡೆದಿತ್ತು. ಈ ವಿಚಾರವನ್ನು ಬೆಳೆಸುವುದು ಬೇಡ, ಸಂಧಾನ ಮಾಡೋಣ ಎಂದು ಸಂಧಾನ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಎರಡೂ ಕಡೆಯವರು ತಮ್ಮ ವಾದವನ್ನು ಮಾಡಿದ್ದರು, ಆರೋಪಗಳನ್ನೂ ಮಾಡಿದ್ದರು. ಈ ಸಂಧಾನ ಸಭೆ ನಡೆಯುತ್ತಿದ್ದಾಗ ಭಾಮಾ ಹರೀಶ್‌ ಅವರ ಸಹೋದರರಾದ ಭಾಮಾ ಗಿರೀಶ್‌ ಮತ್ತು ಭಾಮಾ ದಿವಾಕರ್‌ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಹಳ ಹಳೆಯ ಪ್ರಕರಣ ಇದಾಗಿದೆ. ಫಿಲಂ ಚೇಂಬರ್‌ನಲ್ಲಿ ಸಂಧಾನ ಸಭೆ ನಡೆದಿದ್ದು 2023ರ ಮಾರ್ಚ್‌ 23ರಂದು. ರವೀಂದ್ರ ಅವರು ಚಿತ್ರ ನಿರ್ಮಾಪಕರಾಗಿದ್ದು, ಅಂದು ಸಂಧಾನ ಸಭೆಗೆ ಹೋಗಿದ್ದರು. ಆಗ ಅಲ್ಲಿ ಸಂಧಾನ ಸಭೆಯ ವೇಳೆ ಭಾಮಾ ಗಿರೀಶ್‌ ಮತ್ತು ಭಾಮಾ ದಿವಾಕರ್‌ ಎಂಬವರು ʻನಿನ್ನಮ್ಮನ್‌ʼ ಎಂದು ಅವಾಚ್ಯವಾಗಿ ಬೈದಿದ್ದಲ್ಲದೆ ಹಲ್ಲೆಗೂ ಮುಂದಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ : Nikhil Kumaraswamy : ಪ್ಯಾನ್‌ ಇಂಡಿಯಾ ಸಿನಿಮಾದೊಂದಿಗೆ ನಿಖಿಲ್‌ ಕುಮಾರಸ್ವಾಮಿ ರೀ ಎಂಟ್ರಿ; LYCA liked him!

ಅಂದು ನಡೆದ ಘಟನೆಗೆ ಸಂಬಂಧಿಸಿ ಆಗಸ್ಟ್‌ 20ರಂದು ದೂರು ನೀಡಿದ್ದೇಕೆ ಎನ್ನುವುದು ಸ್ಪಷ್ಟವಾಗಿಲ್ಲ. ಅವರ ನಡುವೆ ಇದೇ ವಿಷಯಕ್ಕೆ ಸಂಬಂಧಿ ಜಗಳ ಮುಂದುವರಿದ ಹಿನ್ನೆಲೆಯಲ್ಲಿ ಈ ರೀತಿ ಹಳೆ ವಿಚಾರಕ್ಕೆ ಸಂಬಂಧಿಸಿ ದೂರು ನೀಡಿದ್ದಾರೆ. ಹೈಗ್ರೌಂಡ್ಸ್‌ ಪೊಲೀಸರು ಎನ್‌ಸಿಆರ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version