ಬೆಂಗಳೂರು : ನಿರ್ಮಾಪಕ ಜಾಕ್ ಮಂಜು ಆರೋಗ್ಯದಲ್ಲಿ ಏರುಪೇರಾಗಿ ಬನ್ನೇರುಘಟ್ಟ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಯಕ್ರಮ ಒಂದರಲ್ಲಿ ಜಾಕ್ ಮಂಜು ಬಿದ್ದು ಕಾಲು ಮುರಿದುಕೊಂಡಿದ್ದರು. ಕಳೆದ 20 ದಿನದ ಹಿಂದೆ ಘಟನೆ ಸಂಭವಿಸಿತ್ತು. ಕಾಲು ಪೆಟ್ಟಾಗಿದ್ದರೂ ಕುಂಟುತಲೇ ಫಿಲ್ಮ್ ಛೇಂಬರ್ ಚುನಾವಣೆಗೆ ಮತದಾನ ಮಾಡಲು ಜಾಕ್ ಮಂಜು ಬಂದಿದ್ದರು. ಅಂದಿನಿಂದಲೂ ಕಾಲಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಊತ ಬಂದಿರುವ ಸೂಕ್ಷ್ಮತೆ ಇತ್ತೀಚೆಗೆ ತಿಳಿದು ಬಂದಿತ್ತು. ಹೀಗಾಗಿ ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಆಪರೇಷನ್ ಮಾಡಿಸಿಕೊಂಡಿದ್ದರು.
ಇದನ್ನೂ ಓದಿ | Vikrant Rona Movie: ‘ರಾ ರಾ ರಕ್ಕಮ್ಮ’ ಸಾಂಗ್ ರಿಲೀಸ್
ಜಾಕ್ ಮಂಜು ನಿರ್ಮಾಣದ ‘ವಿಕ್ರಾಂತ್ ರೋಣ’, ‘ವಿಂಡೋ ಸೀಟ್’ ಸಿನಿಮಾ ತೆರೆಗೆ ಬರಲಿರುವ ಸಿನಿಮಾ ಆಗಿದ್ದು, ಜುಲೈ 1ಕ್ಕೆ ‘ವಿಂಡೋ ಸೀಟ್’ ಸಿನಿಮಾ ತೆರೆಗೆ ಬರುತ್ತಿದೆ. ಇದರ ಜತೆಗೆ ಜುಲೈ 28ಕ್ಕೆ ‘ವಿಕ್ರಾಂತ್ ರೋಣ’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ | Vikrant Rona Film: ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ ನಟ ಸಲ್ಮಾನ್ ಖಾನ್