Site icon Vistara News

New Film Release: ಸಿನಿ ಪ್ರಿಯರೇ, ಏಪ್ರಿಲ್‌ನಲ್ಲಿ ನಿಮಗಾಗಿ ಕಾದಿವೆ ಈ 4 ಚಿತ್ರಗಳು

film release

ಬೆಂಗಳೂರು: ಬಡೆ ಮಿಯಾ, ಚೋಟೆ ಮಿಯಾ, ಮೈದಾನ್‌, ಅಮರ್ ಸಿಂಗ್ ಚಮ್ಕಿಲಾ, ಫ್ಯಾಮಿಲಿ ಸ್ಟಾರ್, ಮಿಸ್ಟರ್ ಆ್ಯಂಡ್ ಮಿಸಸ್ ಮಹಿ ಮುಂತಾದ ಸಿನಿಮಾಗಳು ಏಪ್ರಿಲ್ ನಲ್ಲಿ ತೆರೆಕಾಣಲು (Film Release) ಸಜ್ಜಾಗಿವೆ. ಅಭಿಮಾನಿಗಳು ಕೂಡ ಈ ಸಿನಿಮಾಗಳನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅಂದ ಹಾಗೆ ಆ ಸಿನಿಮಾಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ ನೋಡಿ.

1. ಬಡೇ ಮಿಯಾ ಚೋಟೆ ಮಿಯಾ

ಅಕ್ಷಯ್ ಕುಮಾರ್, ಅವರ ಕೊನೆಯ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ (Box office) ಅಷ್ಟೇನೂ ಸದ್ದು ಮಾಡಲಿಲ್ಲ! ಈಗ ಅಲಿ ಅಬ್ಬಾಸ್ ಜಾಫರ್ ಚಿತ್ರದ ಮೇಲೆ ಸಾಕಷ್ಟು ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ. ಅಕ್ಷಯ್ ಕುಮಾರ್ (akshay kumar), ಟೈಗರ್ ಶ್ರಾಫ್ ಈ ಸಿನಿಮಾದಲ್ಲಿ ಆರ್ಮಿ ಆಫೀಸರ್ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. AAZ ಸಹಯೋಗದೊಂದಿಗೆ ಪೂಜಾ ಎಂಟರ್‌ ಟೈನ್‌ಮೆಂಟ್ ನಿರ್ಮಿಸಿದ ಬಡೇ ಮಿಯಾ ಚೋಟೆ ಮಿಯಾ ಏಪ್ರಿಲ್ 10 ರಂದು ಈದ್ ಸಂದರ್ಭದಲ್ಲಿ ತೆರೆ ಕಾಣಲಿದೆ. ಇನ್ನು ಮಾನುಷಿ ಚಿಲ್ಲರ್ ಮತ್ತು ಅಲಿಯಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

2. ಮೈದಾನ್

ನಟ ಅಜಯ್ ದೇವಗನ್ ಅವರು ತಮ್ಮ ಮುಂಬುರುವ “ಮೈದಾನ್ʼ ಸಿನಿಮಾದಲ್ಲಿ ಫುಟ್ಬಾಲ್ ಕೋಚ್ ಆಗಿ ಬಣ್ಣ ಹಚ್ಚಿದ್ದಾರೆ. ಬೋನಿ ಕಪೂರ್ ಅವರ ಮೈದಾನ್ ಸಿನಿಮಾವು ಫುಟ್ಬಾಲ್ ಮೂಲಕ ಭಾರತಕ್ಕೆ ಹೆಮ್ಮೆ ತಂದ ಸೈಯದ್ ಅಬ್ದುಲ್ ರಹೀಮ್ ಅವರ ಜೀವನದ ಸುತ್ತ ಸುತ್ತುವ ಕತೆಯಾಗಿದೆ.ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ ಮೈದಾನ್ ಚಿತ್ರದಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಚಿತ್ರವು ಏಪ್ರಿಲ್ 10 ರಂದು ಥಿಯೇಟರ್‌ ಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಇದನ್ನೂ ಓದಿ:OTT Releases: ಈ ತಿಂಗಳು ನಿಮ್ಮ ಮನ ತಣಿಸಲಿರುವ ಕುತೂಹಲಕರ ಹೊಸ ವೆಬ್‌ ಸಿರೀಸ್‌ಗಳಿವು…

3. ಅಮರ್ ಸಿಂಗ್ ಚಮ್ಕಿಲಾ

ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶನದ ಅಮರ್ ಸಿಂಗ್ ಚಮ್ಕಿಲಾ ನೆಟ್‌ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನಟಿ ಪರಿಣಿತಿ ಚೋಪ್ರಾ ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿಲ್ಜಿತ್ ದೋಸಾಂಜ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು 80ರ ದಶಕದ ಜನಪ್ರಿಯ ಪಂಜಾಬಿ ಗಾಯಕ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನದ ಕುರಿತು ತಿಳಿಸುತ್ತದೆ. ಅವರು 1988ರಲ್ಲಿ ಅವರ ಗಾಯಕ-ಪತ್ನಿ ಅಮರಜೋತ್ ಅವರೊಂದಿಗೆ ಗುಂಡಿಕ್ಕಿ ಕೊಲ್ಲಲ್ಪಟ್ಟರು. ಏಪ್ರಿಲ್ 12 ರಿಂದ ನೆಟ್‌ ಫ್ಲಿಕ್ಸ್‌ನಲ್ಲಿ ಅಮರ್ ಸಿಂಗ್ ಚಮ್ಕಿಲಾ ಸ್ಟ್ರೀಮಿಂಗ್ ಶುರುವಾಗಲಿದೆ.

4. ಫ್ಯಾಮಿಲಿ ಸ್ಟಾರ್

ನಟ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪರಶುರಾಮ್ ಪೆಟ್ಲಾ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಅಭಿನಯ, ವಾಸುಕಿ, ರೋಹಿಣಿ ಹಟ್ಟಂಗಡಿ ಮತ್ತು ರವಿಬಾಬು ನಟಿಸಿದ್ದಾರೆ.ಇನ್ನು ರಶ್ಮಿಕಾ ಮಂದಣ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಲ್ ರಾಜು ನಿರ್ಮಿಸಿರುವ ಈ ಬಹುಭಾಷಾ ಸಿನಿಮಾ (ತೆಲುಗು, ತಮಿಳು ಮತ್ತು ಹಿಂದಿ) ಏಪ್ರಿಲ್ 5, 2024ರಂದು ಬಿಡುಗಡೆಯಾಗಲಿದೆ.

Exit mobile version