ಮುಂಬೈ: ಫಿಲ್ಮ್‌ಫೇರ್ ಒಟಿಟಿ ಪ್ರಶಸ್ತಿಗಳನ್ನು (Filmfare OTT Awards 2023) ಭಾನುವಾರ ಪ್ರದಾನ ಮಾಡಲಾಯಿತು. ಒಟಿಟಿ ಸೀರೀಸ್‌ಗಳ (Web Series) ನಟರು, ನಿರ್ದೇಶಕರು ಮತ್ತು ತಂತ್ರಜ್ಞರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾರ್ಲಿಂಗ್ಸ್ (Darlings) ವೆಬ್ ಒರಿಜಿನಲ್ ಚಿತ್ರದ ನಟನೆಗಾಗಿ ಆಲಿಯಾ ಭಟ್ (Alia Bhatt) ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರೆ, ರಾಜ್‌ಕುಮಾರ್ ರಾವ್ (Rajkumar Rao) ಅವರು ತಮ್ಮ ನೆಟ್‌ಫ್ಲಿಕ್ಸ್ ಚಲನಚಿತ್ರ ಮೋನಿಕಾ ಓ ಮೈ ಡಾರ್ಲಿಂಗ್‌ಗಾಗಿ (Monica O my Darling) ವಿಮರ್ಶಕರ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ವೆಬ್ ಒರಿಜಿನಲ್ ಫಿಲ್ಮ್ ವಿಭಾಗದಲ್ಲಿ ಮನೋಜ್ ಬಾಜಪೇಯಿ (Manoj Bajpayee) ಅವರು ಸಿರ್ಫ್ ಏಕ್ ಬಂದಾ ಕಾಫೀ ಹೈ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದರು.
Indian actress #RajshriDeshpande dedicated her #FilmfareAward to the people of #Gaza and #Palestine.#IsraelPalestineWar #FreePalestine #IndiaWithPalestine #FilmfareOTTAwards2023 pic.twitter.com/CqQMVu4uzy
— Hate Detector 🔍 (@HateDetectors) November 27, 2023
ಕರಿಷ್ಮಾ ತನ್ನಾ ಮತ್ತು ಸೋನಾಕ್ಷಿ ಸಿನ್ಹಾ ಅವರಿಗೆ ಕ್ರಮವಾಗಿ ಸ್ಕೂಪ್ ಮತ್ತು ದಹಾದ್‌ಗಾಗಿ ವಿಮರ್ಶಕರ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ದೊರೆಯಿತು. ದಹಾದ್‌ಗಾಗಿ ಸರಣಿಗಾಗಿ ವಿಜಯ್ ವರ್ಮಾ ಪುರುಷ ವಿಭಾಗದಲ್ಲಿ ಅದೇ ಪ್ರಶಸ್ತಿಯನ್ನು ಪಡೆದರು.
Gotta appreciate when actors in this country use their platform well ! @konkonas , so much respect for you for saying this !!👸🏻👸🏻👸🏻👏🏻👏🏻👏🏻 #FilmfareOTTAwards2023 #Queen #CeasefireForGaza pic.twitter.com/KfvspfYUQd
— N (@namitha995) November 27, 2023
ಅತ್ಯುತ್ತಮ ವೆಬ್ ಸೀರೀಸ್ ಸ್ಕೂಪ್ ಪಾಲಾಯಿತು. ಟ್ರಯಲ್ ಬೈ ಫೈರ್ ಕ್ರಿಟಿಕ್ಸ್ ವಿಭಾಗದಲ್ಲಿ ಅತ್ಯುತ್ತಮ ವೆಬ್ ಸೀರೀಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಹಾಗೆಯೇ, ಗುಲ್ಮೋಹರ್ ಸರಣಿಯ ನಟಿ ಶರ್ಮಿಳಾ ಟಾಗೋರ್ ಹಾಗೂ ಕಥಾಲ್ ಅಭಿನಯಕ್ಕಾಗಿ ಸಾನ್ಯಾ ಮಲ್ಹೋತ್ರಾ ಅವರು ವಿಮರ್ಶಕ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಜ್ಯೂಬಿಲಿ ಸೀರೀಸ್ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನಿ ಬೆಸ್ಟ್ ಡೈರೆಕ್ಟರ್ ಮತ್ತು ವಿಮರ್ಶಕರ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಯನ್ನು ಕೋಹ್ರಾ ಸರಣಿಯ ರಣದೀಪ್ ಝಾ ಅವರು ಪಡೆದುಕೊಂಡರು.
ಟ್ರಯಲ್ ಬೈ ಫೈರ್ ನಟಿ ರಾಜಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅದೇ ರೀತಿ, ವೆಬ್‌ಸೀರೀಸ್‌ನ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ವಿಮರ್ಶಕರ ವಿಭಾಗದಲ್ಲಿ ಕರಿಷ್ಮಾ ತಾನ್ನಾ ಪಾಲಾಯಿತು. ಕೋಹ್ರಾ ಅಭಿನಯಕ್ಕಾಗಿ ಬೆಸ್ಟ್ ಸಪೋರ್ಟಿಂಗ್ ನಟ ಪ್ರಶಸ್ತಿಯನ್ನು ಪಡೆದುಕೊಂಡರು.
ದಿಲ್ಲಿ ಕ್ರೈಮ್ ಸೀಸನ್ 2ರ ಅಭಿನಯಕ್ಕಾಗಿ ನಟಿ ತಿಲೋತ್ತಮ ಶೋಮೆ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ದಿ ಗ್ರೇಟ್ ವೆಡ್ಡಿಂಗ್ ಆಫ್ ಮುನ್ನೇಸ್ ಸರಣಿಯ ಅಭಿನಯಕ್ಕಾಗಿ ಅಭಿಷೇಕ್ ಬ್ಯಾನರ್ಜಿ ಅವರು ಸ್ವೀಕರಿಸಿದರು. ಅತ್ಯುತ್ತಮ ಹಾಸ್ಯ ನಟಿ ಪ್ರಶಸ್ತಿಯನ್ನು ಟಿವಿಎಫ್ ಟ್ರಿಪ್ಲಿಂಗ್ ಸರಣಿಯ ಅಭಿನಯಕ್ಕಾಗಿ ಮಾನ್ವಿ ಗಾರ್ಗೋ ಅವರು ಪಡೆದುಕೊಂಡರು.
ಈ ಸುದ್ದಿಯನ್ನೂ ಓದಿ: ಈ ವಾರಾಂತ್ಯಕ್ಕೆ OTTಯಲ್ಲಿ ಏನು ನೋಡುವುದು ಎಂಬ ಗೊಂದಲವೇ? ಈ ಶೋಗಳು ನಿಮ್ಮ ಆಯ್ಕೆಯಾಗಲಿ