Site icon Vistara News

Viral Video | ಪರಸ್ತ್ರೀಯೊಂದಿಗೆ ಹೊರಟಿದ್ದ ಚಿತ್ರ ನಿರ್ಮಾಪಕ; ತಡೆಯಲು ಬಂದ ಪತ್ನಿಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿ

Filmmaker Kamal Kishor Mishra hits wife with car in Mumbai

ಮುಂಬಯಿ: ಚಲನಚಿತ್ರ ನಿರ್ಮಾಪಕ ಕಮಲ್​ ಕಿಶೋರ್​ ಮಿಶ್ರಾ ತಮ್ಮ ಪತ್ನಿಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಕಮಲ್​ ಕಿಶೋರ್​ ಇನ್ನೊಬ್ಬಳು ಮಹಿಳೆಯೊಂದಿಗೆ ಕಾರಲ್ಲಿ ಹೊರಟಿದ್ದರು. ಅದನ್ನು ನೋಡಿದ ಅವರ ಪತ್ನಿ ತಡೆಯಲು ಮುಂದಾಗಿದ್ದಾರೆ. ಆದರೆ ಅವರು ಪತ್ನಿಗೆ ಕಾರಿನಿಂದ ಗುದ್ದಿದ್ದಾರೆ. ಆಕೆ ನೆಲದ ಮೇಲೆ ಬಿದ್ದರೂ ಅವಳ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾರೆ ಹೊರತು, ಅವರು ನಿಲ್ಲಲಿಲ್ಲ.

ಅಕ್ಟೋಬರ್​ 19ರಂದು ನಡೆದ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಪತಿಯ ಕಾರು ಗುದ್ದಿ, ಗಾಯಗೊಂಡು ನೆಲದ ಮೇಲೆ ಬಿದ್ದ ಮಹಿಳೆಯನ್ನು ಎತ್ತಲು ಆ ಪಾರ್ಕಿಂಗ್​ ಏರಿಯಾದಲ್ಲಿದ್ದ ಸೆಕ್ಯೂರಿಟಿ ಓಡಿ ಬಂದಿದ್ದಾರೆ. ಆದರೆ ಕಮಲ್​ ಕಿಶೋರ್​ ಒಮ್ಮೆ ಕಾರು ನಿಲ್ಲಿಸಿದ ಹಾಗೇ ಮಾಡಿ, ಮುಂದೋಡಿಸಿದ್ದಾರೆ. ಅವರು ಕಾರಿನಿಂದ ಇಳಿಯಲೂ ಇಲ್ಲ. ಅತ್ತ ಕಾರು ಹೋಗುತ್ತಿದ್ದಂತೆ, ಇತ್ತ ಮೂರ್ನಾಲ್ಕು ಜನ ಬಂದು ಮಹಿಳೆಯ ಬಳಿ ನಿಂತಿದ್ದಾರೆ. ದೆಹತಿ ಡಿಸ್ಕೋ, ಭೂತಿಯಾಪಾ ಸೇರಿ ಹಲವು ಚಲನಚಿತ್ರಗಳನ್ನು ನಿರ್ಮಾಣ ಮಾಡಿರುವ ಕಮಲ್​ ಕಿಶೋರ್​ ಮಿಶ್ರಾಗೆ ಬಾಲಿವುಡ್​​ನಲ್ಲಿ ತಕ್ಕಮಟ್ಟಿಗೆ ಹೆಸರಿದೆ.

ಮಿಶ್ರಾ ವಿರುದ್ಧ ಅವರ ಪತ್ನಿ ಅಂಬೋಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ನಾನು ಮನೆಯ ಒಳಗೆ ಇದ್ದೆ. ಪತಿ ಬಂದಿದ್ದು ಗೊತ್ತಾಗಿ ಕಾರು ಪಾರ್ಕಿಂಗ್​ ಏರಿಯಾಕ್ಕೆ ಬಂದೆ. ಅಲ್ಲಿ ನೋಡಿದರೆ ಕಾರಿನಲ್ಲಿ ಇನ್ನೊಬ್ಬಳು ಮಹಿಳೆಯೂ ಇದ್ದಳು. ತಡೆಯಲು ಹೋದೆ. ಆದರೆ ನನಗೆ ಕಾರು ಡಿಕ್ಕಿ ಹೊಡೆಸಿ ಹೋಗಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಕೆಯ ಕಾಲು, ಕೈಗಳಿಗೆಲ್ಲ ಗಾಯಗಳಾಗಿವೆ. ಸಿಸಿಟಿವಿ ಫೂಟೇಜ್​​ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಿಶ್ರಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ: Viral Video | ರಾಜ್ಯದ ಒಳಿತಿಗಾಗಿ ಚಾಟಿ ಏಟು ಪಡೆದ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಾಘೆಲ್​

Exit mobile version