Site icon Vistara News

Swami Nityananda: ನಿತ್ಯಾನಂದನ ದೇಶಕ್ಕೆ ರಂಜಿತಾ ಪ್ರಧಾನಿ? ನಟಿ ಈಗ ‘ನಿತ್ಯಾನಂದಮಯಿ’!

Former Actress RanjithaPM of Kailasa Nityananda

ಬೆಂಗಳೂರು: ಕೆಲವು ದಿನಗಳ ಹಿಂದೆ ನಟ ಅಶೋಕ್‌ ಕುಮಾರ್ (Actor Ashok Kumar) ಸಂದರ್ಶನವೊಂದರಲ್ಲಿ, ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ (Swami Nityananda) ಬಳಿ ಇದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ ಬಳಿಕ ರಂಜಿತಾ ಹಾಗೂ ನಿತ್ಯಾನಂದ ಲವ್‌ ಸ್ಟೋರಿ ಸಖತ್‌ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ನಟಿ ರಂಜಿತಾ ಸುದ್ದಿಯಲ್ಲಿದ್ದಾರೆ. ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ದೇಶವನ್ನು ನಿರ್ಮಾಣ ಮಾಡಿಕೊಂಡಿರುವ ನಿತ್ಯಾನಂದ ದೇಶಕ್ಕೆ ನಟಿ ರಂಜಿತಾಳನ್ನು ಪ್ರಧಾನಿ ಆಗಿ ಘೋಷಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜತೆ ವಾಸಿಸುತ್ತಿದ್ದಾನೆ.

ಈ ಹಿಂದೆ ನಿತ್ಯಾನಂದ ಹಾಗೂ ರಂಜಿತಾ ಸ್ಟೋರಿ ಸುದ್ದಿಯಲ್ಲಿತ್ತು. ನಿತ್ಯಾನಂದ 10ನೇ ತರಗತಿಯಲ್ಲಿ ಇದ್ದಾಲೇ ರಂಜಿತಾಗೆ ಮನಸೋತಿರುವ ಸುದ್ದಿ ವೈರಲ್‌ ಆಗಿತ್ತು. ನಟ ಅಶೋಕ್ ಕುಮಾರ್ ಅವರ ಎರಡನೇ ಪುತ್ರಿ ರಂಜಿತಾ ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ ‘ನಾಡೋಡಿ ತೆಂಡ್ರಲ್’ನಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಸಿನಿಮಾ ನಿತ್ಯಾನಂದನನ್ನು ಹುಚ್ಚನನ್ನಾಗಿ ಮಾಡಿದ್ದಂತೆ. ಅಲ್ಲಿಂದ ಆಕೆಯ ಮೇಲೆ ನಿತ್ಯಾನಂದ ಮನಸೋತಿದ್ದ. ಅಕ್ಕ ನಿತ್ಯಾನಂದನ ಭಕ್ತೆಯಾಗಿದ್ದರು. ಅಕ್ಕನೊಂದಿಗೆ ನಿತ್ಯಾನಂದನ ಆಶ್ರಮಕ್ಕೆ ಹೋಗಿದ್ದರು. ಅಲ್ಲಿವರೆಗೂ ಆಧ್ಯಾತ್ಮದ ಬಗ್ಗೆ ನಂಬಿಕೆಯೇ ಇರದ ರಂಜಿತಾಗೆ ಒಲವು ಮೂಡುವುದಕ್ಕೆ ಶುರುವಾಗಿತ್ತು. ರಂಜಿತಾ ಹಾಗೂ ಅವರ ಅಕ್ಕ ನಿರ್ಮಲಾ ಇಬ್ಬರೂ ವಿಚ್ಛೇದನ ಪಡೆದು ನಿತ್ಯಾನಂದನ ಭಕ್ತೆಯಾದರು. ಇದನ್ನು ಸ್ವತಃ ಅಶೋಕ್ ಕುಮಾರ್ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿ ನೀಡಿದ್ದರು.

ಇದೀಗ ರಂಜಿತಾ ನಿತ್ಯಾನಂದ ದೇಶಕ್ಕೆ ಪ್ರಧಾನಿ!

ನಿತ್ಯಾನಂದ ತನ್ನ ಸ್ವಘೋಷಿತ ದೇಶಕ್ಕೆ ಯುನೈಟೆಟ್ ಸ್ಟೇಟ್ಸ್ ಆಫ್ ಕೈಲಾಸ (ಕೈಲಾಸ ದೇಶ) ಎಂದು ನಾಮಕರಣ ಮಾಡಿಕೊಂಡಿದ್ದಾನೆ. ಅಲ್ಲಿ ಪ್ರತ್ಯೇಕ ಕರೆನ್ಸಿ, ಪ್ರತ್ಯೇಕ ಆಡಳಿತವನ್ನು ಸ್ಥಾಪಿಸಿಕೊಂಡಿರುವುದಾಗಿ ವರದಿ ಆಗಿತ್ತು. ಇದೀಗ ಕೈಲಾಸ ದೇಶ ಮತ್ತೆ ಸುದ್ದಿಯಲ್ಲಿದೆ. ಆ ದೇಶಕ್ಕೆ ತನ್ನ ಪ್ರಿಯ ಶಿಷ್ಯೆ ಮಾಜಿ ನಟಿ ರಂಜಿತಾಳನ್ನು ಪ್ರಧಾನಿಯಾಗಿ ಘೋಷಿಸಿಸಿರುವುದಾಗಿ ತಮಿಳು ಪತ್ರಿಕೆಗಳಲ್ಲಿ ವರದಿಯಾಗಿದೆ. ನಿತ್ಯಾನಂದ ವೆಬ್‌ಸೈಟ್‌ನಲ್ಲಿ ಇದನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಇ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ನಿತ್ಯಾನಂದ ವೆಬ್‌ಸೈಟ್‌ನಲ್ಲಿ ರಂಜಿತಾ ಫೋಟೊ ಕೆಳಗೆ ‘ನಿತ್ಯಾನಂದಮಯಿ’ ಎಂಬ ಹೆಸರಿದೆ. ಅದರ ಕೆಳಭಾಗದಲ್ಲಿ ಹಿಂದುಗಳಿಗಾಗಿ ಸ್ವಾಮಿ ನಿರ್ಮಿಸಿದ ಕೈಲಾಸ ದೇಶದ ಪ್ರಧಾನಿಯಾಗಿ ಘೋಷಿಸಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ: Actor Ashok Kumar: 10ನೇ ತರಗತಿಯಲ್ಲೇ ನಟಿ ರಂಜಿತಾ ಮೇಲೆ ಪ್ರೀತಿ; ನಿತ್ಯಾನಂದ ಮನಸೋತಿದ್ದು ಯಾತಕ್ಕೆ?

ಕೈಲಾಸ ದೇಶದ ಜನಸಂಖ್ಯೆ ಎಷ್ಟು?

ನಿತ್ಯಾನಂದನ ದೇಶದ ಲೊಕೇಷನ್‌, ಜನಸಂಖ್ಯೆ ಕುರಿತ ಕೇಳಿದ ಪ್ರಶ್ನೆಗೆ ಕಾರ್ಯದರ್ಶಿ ಉತ್ತರಿಸಿದ್ದರು. “ನಾವು ಪುರಾತನ ಹಿಂದು ನಾಗರಿಕತೆಯ ಪುನರುಜ್ಜೀವನದ ಕಾರ್ಯದಲ್ಲಿ ತೊಡಗಿದ್ದೇವೆ. ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಹಲವಾರು ಎನ್‌ಜಿಒಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಜಗತ್ತಿನ ಎನ್‌ಜಿಒಗಳು ನಮ್ಮ ದೇಶದ ಭಾಗವಾಗಿವೆ. ಹಾಗಾಗಿ, ನಮ್ಮ ದೇಶಕ್ಕೆ ಗಡಿಯೇ ಇಲ್ಲ” ಎಂದು ಹೇಳಿಕೊಂಡಿದ್ದರು.

Exit mobile version