Site icon Vistara News

Indian 2 Film | ʻಇಂಡಿಯನ್‌ 2ʼ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಖ್ಯಾತ ಕ್ರಿಕೆಟರ್‌ ತಂದೆ, ಯಾರವರು?

Indian 2 Film

ಬೆಂಗಳೂರು: ಕಮಲ್‌ ಹಾಸನ್‌ ನಟನೆಯ ಇಂಡಿಯನ್‌-2 ಸಿನಿಮಾಗೆ (Indian 2 Film) ಕ್ರಿಕೆಟರ್‌ ಯುವರಾಜ್‌ ಸಿಂಗ್‌ ತಂದೆ ನಟನೆ ಮಾಡುತ್ತಿದ್ದಾರೆ. ಯೋಗರಾಜ್‌ ಸಿಂಗ್‌ ಮೇಕಪ್‌ ಮಾಡಿಕೊಳ್ಳುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಎಂ.ಎಸ್ ಧೋನಿ ನಂತರ ಮಾಜಿ ಕ್ರಿಕೆಟಿಗ ಯೋಗರಾಜ್‌ ಸಿಂಗ್‌ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.

ಕಮಲ್ ಹಾಸನ್ ಅಭಿಮಾನಿಗಳು ಇಂಡಿಯನ್‌-2 ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಚಿತ್ರದ ಶೂಟಿಂಗ್ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ಚಿತ್ರೀಕರಣ ವಿಳಂಬವಾಗಿತ್ತು. ಯೋಗರಾಜ್‌ ಸಿಂಗ್‌ ಪೋಸ್ಟ್‌ ಶೇರ್‌ ಮಾಡಿದ್ದು “ಕ್ಯಾಮೆರಾ ಹಿಂದೆ ಇರುವ ತಾಂತ್ರಿಕ ವರ್ಗಕ್ಕೆ ಧನ್ಯವಾದಗಳು, ಮೇಕಪ್ ಮೆನ್ (ಮೇಕಪ್ ದಾದಾ) ನನ್ನನ್ನು ಹೆಚ್ಚು ಸ್ಮಾರ್ಟ್ ಆಗಿ ಕಾಣಿಸುವಂತೆ ಮಾಡಿದ್ದೀರಿ. ಕಮಲ್ ಹಾಸನ್ ಅವರ ಜತೆ ಇಂಡಿಯನ್ 2 ಚಿತ್ರದಲ್ಲಿ ನಟಿಸಲು ಲಯನ್ ಆಫ್ ಪಂಜಾಬ್ ತಯಾರಾಗುತ್ತಿದ್ದಾರೆʼʼ ಎಂದು ಯೋಗರಾಜ್‌ ಸಿಂಗ್‌ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ |ವಿಕ್ರಮ್ ಸಕ್ಸಸ್‌‌, ಕಮಲ್‌ ಹಾಸನ್‌ಗೆ ಮೆಗಾಸ್ಟಾರ್ ಚಿರಂಜೀವಿ ಸನ್ಮಾನ

ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಈ ಚಿತ್ರದಲ್ಲಿ ಪವರ್‌ಫಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೊದಲು ಯೋಗರಾಜ್‌ ಸಿಂಗ್‌ ಸೂಪರ್‌ಸ್ಟಾರ್ ರಜನಿಕಾಂತ್ ಅವರ ʻದರ್ಬಾರ್‌ʼ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜತೆಗೆ ಹಲವಾರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಬ್ಲಾಕ್‌ಬಸ್ಟರ್ ಹಿಂದಿ ಚಲನಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ | ಕಾಲಿವುಡ್​ ನಿರ್ಮಾಪಕರಿಗೆ ಸೇರಿದ ಸ್ಥಳಗಳಲ್ಲಿ ಐಟಿ ರೇಡ್​; 200 ಕೋಟಿ ರೂ ಅಕ್ರಮ ಆದಾಯ ಪತ್ತೆ

Exit mobile version