Site icon Vistara News

Gaalipata 2 | ವಿದ್ಯಾರ್ಥಿಗಳಿಗೆ ಶುರುವಾಯ್ತು ಗಾಳಿಪಟ-2 ಕ್ರೇಜ್!

Gaalipata 2

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಅವರ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಗಾಳಿಪಟ-2 (Gaalipata 2) ರಾಜ್ಯಾದ್ಯಂತ ಆಗಸ್ಟ್‌ 12ರಂದು ತೆರೆಗೆ ಬರಲು ಸಜ್ಜಾಗಿದೆ.

ಚಿತ್ರತಂಡ ಪ್ರಮೋಶ್‌ನ್‌ನಲ್ಲಿ ಭರ್ಜರಿಯಾಗಿ ಬ್ಯುಸಿಯಾಗಿದೆ. ಗಾಳಿಪಟ-2 ಸಿನಿಮಾದ ಬಗ್ಗೆ ವಿದ್ಯಾರ್ಥಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ. ಚಿತ್ರತಂಡ ಕಾಲೇಜ್‌ಗಳಿಗೆ ಹೋಗಿ ಪ್ರಮೋಷನ್ ಮಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಜೋಶ್‌ನಿಂದ ಕೂಗಿ ಸ್ಟೆಪ್ಸ್ ಹಾಕಿದ್ದಾರೆ.

ಯೋಗರಾಜ್‌ ಭಟ್‌ ಈ ಚಿತ್ರದ ನಿರ್ದೇಶನ ಮಾಡಿದ್ದು, ಸದ್ಯ ಕೆವಿಎನ್‌ ಪ್ರೊಡಕ್ಷನ್‌ ವಿತರಣೆ ಹಕ್ಕನ್ನು ಪಡೆದಿದೆ. ಈ ಹಿಂದೆ ತೆರೆಕಂಡ ಗೋಲ್ಡನ್ ಸ್ಟಾರ್‌ ಗಣೇಶ್ ನಟನೆಯ ‘ಸಖತ್’ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕೆವಿಎನ್‌ ಪ್ರೊಡಕ್ಷನ್ಸ್ ಆನಂತರ ‘ಬೈ ಟು ಲವ್’ ಚಿತ್ರಕ್ಕೂ ಹಣ ಹಾಕಿತ್ತು.

ಇದನ್ನೂ ಓದಿ | Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್‌ವುಡ್‌ ತಾರಾ ಬಳಗ

ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ.

ಇದನ್ನೂ ಓದಿ | ಆಗಸ್ಟ್‌ 15ಕ್ಕೆ 3 ದಿನ ಮೊದಲು ಹಾರಲಿದೆ ʼಗಾಳಿಪಟ -2ʼ: ಗೋಲ್ಡನ್‌ ಸ್ಟಾರ್‌ ಯೋಗರಾಜ ಭಟ್‌ ಜೋಡಿ

Exit mobile version