Site icon Vistara News

Game of Thrones : ಬಾಲಿವುಡ್‌ನಲ್ಲಿ ಗೇಮ್‌ ಆಫ್‌ ಥ್ರೋನ್ಸ್‌! ಸಕತ್‌ ಆಗಿದೆ ಈ ಎಐ ವಿಡಿಯೊ

Game of Thrones

ಮುಂಬೈ: ಗೇಮ್‌ ಆಫ್‌ ಥ್ರೋನ್ಸ್‌ (Game of Thrones) ಅನೇಕರ ಮನ ಮೆಚ್ಚಿದ ಹಾಲಿವುಡ್‌ ಸೀರಿಸ್‌. ಎಂಟು ಸೀಸನ್‌ಗಳನ್ನು ಪೂರೈಸಿರುವ ಈ ಸೀರಿಸ್‌ನ ಅನೇಕ ಪಾತ್ರಗಳು ವೀಕ್ಷಕರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದಂತೆ ಉಳಿದುಕೊಂಡಿವೆ. ಹಾಲಿವುಡ್‌ನ ಈ ಗೇಮ್‌ ಅಫ್‌ ಥ್ರೋನ್ಸ್‌ ಅನ್ನು ಬಾಲಿವುಡ್‌ನಲ್ಲಿ ಮಾಡಿದ್ದರೆ ಹೇಗಿರುತ್ತಿತ್ತು? ಹೀಗೊಂದು ಪ್ರಶ್ನೆ ನಿಮ್ಮಲ್ಲೂ ಇರಬಹುದು. ಅದಕ್ಕೆ ಉತ್ತರವೆನ್ನುವಂತೆ ಅಭಿಮಾನಿಯೊಬ್ಬರು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿಕೊಂಡು ಬಾಲಿವುಡ್‌ನ ಗೇಮ್‌ ಆಫ್‌ ಥ್ರೋನ್ಸ್‌ನ ಪರಿಚಯ ಮಾಡಿಕೊಟ್ಟಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಶಾದಿ ಕರಣ್‌ ಹೆಸರಿನವರು ರೆಡ್ಡಿಟ್‌ನಲ್ಲಿ ಇಂತದ್ದೊಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಗೇಮ್‌ ಆಫ್‌ ಥ್ರೋನ್ಸ್‌ನ ಕಿಟ್‌ ಹ್ಯಾರಿಂಗ್‌ಟನ್‌ನ ಜಾನ್‌ ಸ್ನೋ ಸ್ಥಾನವನ್ನು ರಣವೀರ್‌ ಸಿಂಗ್‌ ಪಡೆದುಕೊಂಡಿದ್ದಾರೆ. ಹಾಗೆಯೇ ಎಮಿಲಿಯಾ ಕ್ಲಾರ್ಕ್‌ ಬದಲಾಗಿ ಐಶ್ವರ್ಯ ರೈ ಅವರು ಡೇನೆರಿಸ್‌ ಟಾರ್ಗರಿಯನ್‌ ಆಗಿ ಕಾಣಿಸಿಕೊಂಡಿದ್ದಾರೆ. ಆದಿತ್ಯ ರಾಯ್‌ ಕಪೂರ್‌ ಅವರು ಜೇಮ್‌ ಲ್ಯಾನಿಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಆರ್ಯ ಸ್ಟಾರ್ಕ್‌ ಆಗಿ ಮೈಸಿ ವಿಲಿಯಮ್ಸ್‌ ಬದಲಾಗಿ ಆಲಿಯಾ ಭಟ್‌ ಅವರನ್ನು ತೋರಿಸಲಾಗಿದೆ. ಹಾಗೆಯೇ ಲೀನಾ ಹೆಡೆ ನಟಿಸಿದ ಸೆರ್ಸಿ ಲ್ಯಾನಿಸ್ಟರ್‌ ಪಾತ್ರದಲ್ಲಿ ಟಬು ಕಾಣಿಸಿಕೊಳ್ಳುತ್ತಾರೆ. ಪೀಟರ್‌ ಡಿಂಕ್ಲೇಜ್‌ ನಟಿಸಿರುವ ಟೈರಿಯನ್‌ ಲ್ಯಾನಿಸ್ಟರ್‌ ಪಾತ್ರದಲ್ಲಿ ಕೇಯ್‌ ಮೆನನ್‌ ನಟಿಸುತ್ತಾರೆ. ಮತ್ತು ಕಿಯಾರಾ ಅಡ್ವಾಣಿ ಅವರು ಸನ್ನಾ ಸ್ಟಾರ್ಕ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಈ ರೀತಿಯ ವಿಡಿಯೊವನ್ನು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗಿದೆ.

What If Game Of Thrones Was Made In Bollywood
by u/ShadyKaran in indiasocial


ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನರಿಂದ ವೀಕ್ಷಣೆಗೊಂಡಿದೆ. ಹಲವರು ವಿಡಿಯೊ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಾತ್ರ ಹೊಂದಾಣಿಕೆ ಸರಿಯಾಗಿದೆ, ಬಾಲಿವುಡ್‌ನಲ್ಲಿ ಈ ಪಾತ್ರಗಳನ್ನು ನಿಭಾಯಿಸಲು ಇವರೇ ದಿ ಬೆಸ್ಟ್‌ ನಟ, ನಟಿಯರು ಎಂದು ಅನೇಕರು ವಿಡಿಯೊಗೆ ಕಾಮೆಂಟ್‌ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತಿದ್ದಾರೆ. ಇನ್ನು ಕೆಲವರು ಬಾಲಿವುಡ್‌ನಲ್ಲಿ ಈ ರೀತಿಯ ಸೀರಿಸ್‌ ಮಾಡಲು ಸಾಧ್ಯವೇ ಇಲ್ಲ. ಈ ರೀತಿಯ ವಿಡಿಯೊ ಮಾಡಿ ಗೇಮ್‌ ಆಫ್‌ ಥ್ರೋನ್ಸ್‌ ಸೀರಿಸ್‌ಗೆ ಅವಮಾನಿಸಬೇಡಿ ಎಂದು ವಿರೋಧವನ್ನೂ ಹೊರಹಾಕಿದ್ದಾರೆ.

ಇದನ್ನೂ ಓದಿ: Viral Video: ಟ್ರಾಫಿಕ್‌ ಸಿಗ್ನಲ್‌ ವೇಳೆ ಬ್ಯಾಗ್‌ಗೆ ಕೈಹಾಕಿ ತಿಂಡಿ ತಿಂದ ಡೆಲಿವರಿ ಬಾಯ್; ಆರ್ಡರ್‌ ಮಾಡಿದವನ ಬಗ್ಗೆ ಮರುಕ


ಗೇಮ್‌ ಆಫ್‌ ಥ್ರೋನ್ಸ್‌ ಸೀರಿಸ್‌ ಆರ್‌ಆರ್‌ ಮಾಟಿನ್‌ ಅವರ ಕಾದಂಬರಿಗಳ ಸರಣಿಯಾದ ಎ ಸಾಂಗ್‌ ಆಫ್‌ ಐಸ್‌ ಅಂಡ್‌ ಫೈರ್‌ ಅನ್ನು ಆಧರಿಸಿದೆ. ಈ ಸೀರಿಸ್‌ ಅನ್ನು ಡೇವಿಡ್‌ ಬೆನಿಯೋಫ್‌ ಮತ್ತು ಡಿಬಿ ವೈಸ್‌ ಅವರು ನಿರ್ದೇಶಿಸಿದ್ದಾರೆ. 2011ರಲ್ಲಿ ಬಿಡುಗಡೆಯಾದ ಈ ಸೀರಿಸ್‌ 2019ರಲ್ಲಿ ಮುಕ್ತಾಯವಾಯಿತು. ಈ ಸೀರಿಸ್‌ 59 ಪ್ರೈಮ್‌ಟೈಮ್‌ ಎಮ್ಮಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಆ ಮೂಲಕ ಅತಿಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡು ಸೀರಿಸ್‌ ಆಗಿ ಹೊರಹೊಮ್ಮಿದೆ.

Exit mobile version