ಬೆಂಗಳೂರು : ನಟ ಪುನೀತ್ ರಾಜಕುಮಾರ್ ಅಭಿನಯದ ಕನಸಿನ ಪ್ರಾಜೆಕ್ಟ್ ʻಗಂಧದ ಗುಡಿʼ ಸಿನಿಮಾ (Gandhada Gudi) ಅಕ್ಟೋಬರ್ 28ರಂದು ಶುಕ್ರವಾರ ತೆರೆ ಕಂಡಿದೆ. ರಾಜ್ಯಾದ್ಯಂತ ʻಗಂಧದ ಗುಡಿʼ ಸಿನಿಮಾ 250ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಗೆ ಪ್ರಸನ್ನ ಥಿಯೇಟರ್‌ನಲ್ಲಿ ಶೋ ಆರಂಭಗೊಂಡಿದೆ. ‘ಗಂಧದ ಗುಡಿ’ ಚಿತ್ರವನ್ನು ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.
ರಾರಾಜಿಸಿದ ರಾಜರತ್ನ ಕಟೌಟ್
ಬೆಂಗಳೂರಿನ ನರ್ತಕಿ ಥಿಯೇಟರ್ ಆವರಣದಲ್ಲಿ 80 ಅಡಿ ಎತ್ತರ ಇರುವ ಪುನೀತ್ ಅವರ ಬೃಹತ್ ಕಟೌಟ್ ರಾರಾಜಿಸುತ್ತಿದೆ. ಪುನೀತ್ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಆವರಣದಲ್ಲಿ 75 ಕಟೌಟ್‌ಗಳನ್ನು ಇಡಲಾಗಿದೆ. ರಾಜ್ಯದೆಲ್ಲೆಡೆ ಪುನೀತ್ ಹವಾ ಶುರುವಾಗಿದ್ದು, ವಿವಿಧೆಡೆ ಅಪ್ಪು ಕಟೌಟ್‌ಗಳು ಗಮನ ಸೆಳೆಯುತ್ತಿವೆ. ಬೆಳಗ್ಗೆ 6 ಗಂಟೆಗೆ ಪ್ರಸನ್ನ ಥಿಯೇಟರ್, ಬೆಳಗ್ಗೆ 7 ಗಂಟೆಗೆ ವೀರೇಶ್ ಥಿಯೇಟರ್, 10 ಗಂಟೆಗೆ ಕೆಜಿ ರಸ್ತೆಯ ಪ್ರಮುಖ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡಿದೆ. ಒರಾಯನ್ ಮಾಲ್, ಜಿಟಿ ಮಾಲ್, ಪಿವಿಆರ್‌ಗಳಲ್ಲಿ ಒಟ್ಟು 50 ಶೋಗಳು ಪ್ರದರ್ಶನ ಕಾಣುತ್ತಿವೆ. ಈ ಬಗ್ಗೆ ಕೆಆರ್‌ಜಿ ಸ್ಟುಡಿಯೋಸ್ ಹೇಳಿಕೊಂಡಿದೆ.
ಇದನ್ನೂ ಓದಿ | Gandhada Gudi | ‘ಪುನೀತ್ ಪರ್ವ’ಕ್ಕೆ ಬಾಲಯ್ಯ, ಸೂರ್ಯ, ಕಮಲ್ ಹಾಸನ್ ಆಗಮನ!
ಇದೊಂದು ಸಾಕ್ಷ್ಯ ಚಿತ್ರ ಮಾಡುವ ಯೋಚನೆ ಹೊಳೆದು, ಅದನ್ನು ‘ಗಂಧದಗುಡಿ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಚನೆ ಮಾಡಿದ್ದರು ಪುನೀತ್ ರಾಜ್‌ಕುಮಾರ್. ಇದೀಗ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆ ಮೇಲೆ ನೋಡಿ ಕಣ್ತುಂಬಿಸಿಕೊಂಡಿದ್ದಾರೆ ಅಪ್ಪು ಫ್ಯಾನ್ಸ್.
ಇದನ್ನೂ ಓದಿ | Gandhada Gudi | ನಾಳೆ ʻಗಂಧದ ಗುಡಿʼ ಆರ್ಭಟ ಶುರು: ಹಲವು ಮಾಲ್‌ಗಳಲ್ಲಿ 50 ಪ್ರದರ್ಶನ!