ಬೆಂಗಳೂರು: ಶುಕ್ರವಾರ (ಜು.15) ಗಾರ್ಗಿ ಸಿನಿಮಾ (Gargi Movie) ರಿಲೀಸ್ ಆಗಿದೆ. ಕನ್ನಡ, ತಮಿಳು, ತೆಲುಗು, ಭಾಷೆಗಳಲ್ಲಿ ಬಿಡುಗಡೆಗೊಂಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಮೂರು ಭಾಷೆಗಳಲ್ಲಿ ಸ್ವತಃ ಸಾಯಿ ಪಲ್ಲವಿ ಅವರು ಡಬ್ ಮಾಡಿದ್ದು ವಿಶೇಷ. ಕನ್ನಡದಲ್ಲಿ ಸಾಯಿ ಪಲ್ಲವಿ ಧ್ವನಿಗೆ ಕನ್ನಡಿಗರು ಫಿದಾ ಆಗಿದ್ದು, ಟ್ವೀಟ್ ಮೂಲಕ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರ ಬಹಳ ಭಾವನಾತ್ಮಕವಾಗಿದ್ದು, ಸಖತ್ ಮೂವಿ ಎಂದು ಟ್ವೀಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಸಿನಿಮಾದ ಕಥೆ, ಅಪ್ಪ ಮಗಳ ಎಮೋಷನ್, ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ʻಸಾಯಿ ಪಲ್ಲವಿ ಅವರ ಸ್ಕ್ರಿಪ್ಟ್ ಆಯ್ಕೆ ತುಂಬಾ ಚೆನ್ನಾಗಿರುತ್ತದೆ. ಗಾರ್ಗಿ ಒಳ್ಳೆಯ ಸಿನಿಮಾʼ ಎಂದು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ಇದನ್ನೂ ಓದಿ | Upcoming Kannada Movie | ಕನ್ನಡದ ಎಂಟು ಸಿನಿಮಾಗಳು ತೆರೆಗೆ: ಇದು ಸಿನಿ ರಸಿಕರ ವಾರ
ಕೋರ್ಟ್ ರೂಮ್ ಡ್ರಾಮಾ ಮತ್ತು ಅಪ್ಪ ಮಗಳ ಬಾಂಧವ್ಯ ಸೊಗಸಾಗಿ ಮೂಡಿ ಬಂದಿದೆ ಎಂದು ಪ್ರೇಕ್ಷಕರು ಹಂಚಿಕೊಂಡಿದ್ದಾರೆ.
ಕನ್ನಡಕ್ಕೆ ಡಬ್ ಆದ ಈ ಚಿತ್ರದ ವಿತರಣೆಯ ಹಕ್ಕನ್ನು ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪಡೆದಿದ್ದಾರೆ. ಅವರು ತಮ್ಮ ʼಪರಂವಃ ಸ್ಟುಡಿಯೋಸ್ʼ ಮೂಲಕ ವಿತರಣೆ ಮಾಡಲಿದ್ದಾರೆ.
ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋವಿಂದ್ ವಸಂತ ಸಂಗೀತ ನೀಡಿದ್ದಾರೆ. ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ. ಸಾಯಿ ಪಲ್ಲವಿ ಜತೆಗೆ ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬಹುಭಾಷಾ ನಟಿ ಸಾಯಿ ಪಲ್ಲವಿ ನಟನೆಯ ತೆಲುಗು ಸಿನಿಮಾ ವಿರಾಟ ಪರ್ವಂ (Virata Parvam) ಜೂನ್ 17 ರಂದು ಬಿಡುಗಡೆಯಾಗಿತ್ತು. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಪಡೆದಿರಲಿಲ್ಲ. ಹೀಗಾಗಿ ಸಿನಿಮಾ ಬಿಡುಗಡೆಯಾಗಿ ಕೇವಲ 15 ದಿನಕ್ಕೆ (ಜು.೧)ಕ್ಕೆ ಒಟಿಟಿಯಲ್ಲಿ ಬಿಡುಗಡೆಗೊಂಡಿತ್ತು. ಒಟಿಟಿ ಟ್ರೆಂಡಿಂಗ್‌ನಲ್ಲಿ ಮಾತ್ರ ನಂ.೧ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ | Gargi Film | ಕನ್ನಡದಲ್ಲಿ ಕೇಳಿ ಬರಲಿದೆ ನಟಿ ಸಾಯಿ ಪಲ್ಲವಿ ಧ್ವನಿ; ವಿತರಣೆಯ ಹಕ್ಕು ಪಡೆದ ಸಿಂಪಲ್ ಸ್ಟಾರ್