Site icon Vistara News

Actress Gautami: ಕಮಲ್ ಹಾಸನ್‌ ಮಾಜಿ ಪ್ರಿಯತಮೆ ನಟಿ ಗೌತಮಿಗೆ 25 ಕೋಟಿ ರೂ. ವಂಚನೆ!

Gautami Kamal Hassan

ಬೆಂಗಳೂರು: ನಟಿ ಗೌತಮಿ (Actress Gautami) ಚೆನ್ನೈ ಮಹಾನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಲಗಪ್ಪನ್ ಕಂಪನಿಯ ಅಧ್ಯಕ್ಷ ತಾನು ಬೆವರು ಸುರಿಸಿ ಸಂಪಾದಿಸಿದ 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲಪಟಾಯಿಸಿದ್ದಾರೆಂದು ಆರೋಪ ಮಾಡಿ (Alagappan), ದೂರನ್ನು ದಾಖಲಿಸಿದ್ದಾರೆ. ತಮಿಳು ಚಿತ್ರರಂಗದ ಪ್ರಮುಖ ನಾಯಕಿ ನಟಿ ಗೌತಮಿ ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಪದಾರ್ಪಣೆ ಮಾಡಿದ್ದರು. ರಜನಿಕಾಂತ್ ಅವರ ಗುರು ಶಿಷ್ಯಂ ಚಿತ್ರದಲ್ಲಿ ನಾಯಕಿಯಾಗಿ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ನಂತರ ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್, ಪ್ರಭು ಮುಂತಾದ ನಟರ ಎದುರು ಜತೆ ತೆರೆ ಕಂಚಿಕೊಂಡು ಖ್ಯಾತಿ ಪಡೆದರು.

ಗೌತಮಿ ನಟ ಕಮಲ್ ಹಾಸನ್‌ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. 2004ರಿಂದ 2016ರವರೆಗೂ ಇಬ್ಬರೂ ಜತೆಯಾಗಿಯೇ ಇದ್ದರು. ಆ ಬಳಿಕ ಬೇರೆಯಾಗುತ್ತಿರುವ ಕುರಿತು ಲಿಖಿತ ಹೇಳಿಕೆ ನೀಡಿದ್ದರು.

ಇದೀಗ ನಟಿ ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ. ಕನ್‌ಸ್ಟ್ರಕ್ಷನ್ ಕಂಪನಿಯೊಂದರ ಮುಖ್ಯಸ್ಥ ಅಳಗಪ್ಪನ್ ತನಗೆ 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಂಚಿಸಿದ್ದಾನೆ ಎಂದು ದೂರು ನೀಡಿದ್ದಾರೆ. 17 ವರ್ಷದಿಂದ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೆ. 2004ರಲ್ಲಿ ನನಗೆ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಹಾಗಾಗಿ ಸಿನಿಮಾದಿಂದ ಕೊಂಚ ವಿರಾಮ ತೆಗೆದುಕೊಂಡೆ. ಸಿನಿಮಾದಲ್ಲಿ ದುಡಿದ ಹಣದಿಂದ ಆ ಆಸ್ತಿಯನ್ನು ಖರೀದಿಸಿದ್ದೆ. ಸದ್ಯ ಇದರ ಬೆಲೆ 25 ಕೋಟಿ ರೂ. ಇದೆ ಎಂದು ಹೇಳಿದ್ದಾರೆ.

ಈ ಆಸ್ತಿಯನ್ನು ವೈದ್ಯಕೀಯ ಚಿಕಿತ್ಸೆ ಹಾಗೂ ಕುಟುಂಬದ ಅಗತ್ಯತೆಯ ಹಿನ್ನೆಲೆಯಲ್ಲಿ ಮಾರಲು ಮುಂದಾಗಿದ್ದರು ನಟಿ. ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಅಳಗಪ್ಪನ್ ಅವರನ್ನು ಸಂಪರ್ಕಿಸಿ ಮಾರಾಟ ಮಾಡಲು ಸಹಾಯ ಮಾಡುವಂತೆ ಕೋರಿದ್ದರು. ಈ ಕಾರಣಕ್ಕೆ ಗೌತಮಿ ತನ್ನ ಜಮೀನು ಮಾರುವುದಕ್ಕೆಂದು ಅಳಗಪ್ಪನ್ ಕಂಪನಿ ಮುಖ್ಯಸ್ಥನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರು. ಈ ವೇಳೆ ತನ್ನ ಬಳಿಕ ಹಲವು ಪೇಪರ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಅಲ್ಲದೆ ತಮ್ಮ ಕೃಷಿ ಭೂಮಿಯನ್ನು 4 ಕೋಟಿ ರೂ.ಗೆ ಮಾರಾಟ ಮಾಡಿ ಕೇವಲ 62 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ತಮ್ಮ ಸಹಿಯನ್ನು ಫೋರ್ಜರಿ ಮಾಡಿ ಅಳಗಪ್ಪನ್ ಕಂಪನಿ ಮುಖ್ಯಸ್ಥ ಹಾಗೂ ಆತನ ಕುಟುಂಬದವರು ತಮ್ಮ 8 ಎಕರೆ ಜಮೀನನ್ನು ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Chaithra Kundapura: ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ; ಚೈತ್ರಾ ಕುಂದಾಪುರ ಸಿಸಿಬಿ ವಶಕ್ಕೆ

ಅಳಗಪ್ಪನ್ ಹಾಗೂ ಅವರ ಕುಟುಂಬದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರ 10 ಲಕ್ಷ ಮೌಲ್ಯದ ಜಮೀನನ್ನು ವಶಪಡಿಸಿಕೊಳ್ಳಬೇಕು ಎಂದು ಗೌತಮಿ ದೂರಿನಲ್ಲಿ ತಿಳಿಸಿದ್ದಾರೆ.

Exit mobile version