Site icon Vistara News

Hamare Baarah: ಮುಸ್ಲಿಂ ಮಹಿಳೆಯರ ಕುರಿತ ಹಮಾರೆ ಬಾರಾ ಸಿನಿಮಾ ರಿಲೀಸ್‌ಗೆ ಕೋರ್ಟ್‌ ಗ್ರೀನ್‌ ಸಿಗ್ನಲ್!

Hamare Baarah

Hamare Baarah Gets Green Light, Movie Released After Court Order and Dialogue Edits

ಮುಂಬೈ: ಇಸ್ಲಾಂ, ಮುಸ್ಲಿಂ ಮಹಿಳೆಯರು, ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತ ಕಥಾಹಂದರ ಹೊಂದಿರುವ, ಆದರೆ, ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಕಾರಣವಾಗಿದ್ದ ಹಮಾರೆ ದೋ (Hamare Baarah) ಸಿನಿಮಾವನ್ನು ಬಿಡುಗಡೆಗೊಳಿಸಲು ಕೊನೆಗೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಹಮಾರೆ ದೋ ಸಿನಿಮಾವನ್ನು ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್‌ (Bombay High Court) ಅನುಮತಿ ನೀಡಿದ್ದು, ಅದರಂತೆ ಶುಕ್ರವಾರ (ಜೂನ್‌ 6) ಸಿನಿಮಾ ಬಿಡುಗಡೆಯಾಗಿದೆ.

ಸಿನಿಮಾದಲ್ಲಿ ಒಂದಷ್ಟು ದೃಶ್ಯಗಳನ್ನು, ಸಂಭಾಷಣೆಯನ್ನು ತೆಗೆಯಬೇಕು. ಒಬ್ಬ ಮುಸ್ಲಿಂ ಸದಸ್ಯ ಸೇರಿ ಮೂವರು ಇರುವ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯ ಅಭಿಪ್ರಾಯದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಹುದು ಎಂಬುದಾಗಿ ಬಾಂಬೆ ಹೈಕೋರ್ಟ್‌ ತಿಳಿಸಿತು. ಅದರಂತೆ, ಜೂನ್‌ 7ರಂದು ಸಿನಿಮಾ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಯನ್ನು 15 ದಿನಗಳವರೆಗೆ ನಿಷೇಧಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಸಿನಿಮಾದ ಕತೆ ಏನು?

ಮನ್ಸೂರ್‌ ಅಲಿ ಖಾನ್‌ ಸಂಜಾರಿ ಎಂಬ ಮುಸ್ಲಿಂ ವ್ಯಕ್ತಿಯ ಸುತ್ತಲೂ ನಡೆಯುವ ಕತೆಯನ್ನು ಹೆಣೆಯಲಾಗಿದೆ. ಮನ್ಸೂರ್‌ ಅಲಿ ಖಾನ್‌ ಸಂಜಾರಿಯ ಮೊದಲ ಪತ್ನಿಯು ಹೆರಿಗೆ ವೇಳೆಯೇ ನಿಧನರಾಗುತ್ತಾರೆ. ಆದರೆ, ಮಕ್ಕಳು ಬೇಕು ಎಂಬ ಕಾರಣಕ್ಕಾಗಿ ಎರಡನೇ ಮದುವೆಯಾಗುವ ಆತನು, ಎರಡನೇ ಪತ್ನಿಯೊಂದಿಗೆ 5 ಮಕ್ಕಳೊಂದಿಗೆ ಪಡೆಯುವ ಆತನು, ಪತ್ನಿಯು 6ನೇ ಬಾರಿ ಗರ್ಭಿಣಿಯಾಗುತ್ತಾರೆ. ಆಗ ವೈದ್ಯರು, ಮಹಿಳೆ ಜೀವಕ್ಕೆ ಕುತ್ತಿದೆ, ಗರ್ಭಪಾತ ಮಾಡಿಸಬೇಕು ಎಂದು ಹೇಳುತ್ತಾರೆ. ಆದರೆ, ಗರ್ಭಪಾತಕ್ಕೆ ಮನ್ಸೂರ್‌ ಅಲಿ ಖಾನ್‌ ಸಂಜಾರಿ ನಿರಾಕರಿಸುತ್ತಾನೆ.

ಮನ್ಸೂರ್‌ ಅಲಿ ಖಾನ್‌ ಸಂಜಾರಿಯ ಮೊದಲನೇ ಪತ್ನಿಯ ಮಗಳು ಮಲತಾಯಿಯ ಹಕ್ಕುಗಳಿಗಾಗಿ ಹೋರಾಡಲು ಕೋರ್ಟ್‌ ಮೊರೆ ಹೋಗುತ್ತಾಳೆ. ಕೋರ್ಟ್‌ನಲ್ಲಿ ಆಕೆಯ ವಾದ ಏನಿರುತ್ತದೆ? ಪುರುಷ ಪ್ರಧಾನ ಸಮಾಜದ ಕಟ್ಟುಪಾಡುಗಳೇನು? ಮುಸ್ಲಿಂ ಮಹಿಳೆಯರ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡುತ್ತಾಳೆ. ಕತೆಯಲ್ಲಿ ಮುಂದೇನಾಗುತ್ತದೆ ಎಂಬುದೇ ಕುತೂಹಲವಾಗಿದೆ. ಆದರೆ, ಸಿನಿಮಾಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಂ ಸಂಘಟನೆಗಳು ಕೋರ್ಟ್‌ ಮೊರೆ ಹೋಗಿದ್ದವು.

ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ಬ್ಯಾನ್‌ ಮಾಡಿದ ಕರ್ನಾಟಕ ಸರ್ಕಾರ

Exit mobile version