Site icon Vistara News

Hansika Motwani | ನಟಿ ಹನ್ಸಿಕಾ ಮೊಟ್ವಾನಿ ಬ್ಯಾಚುಲರೇಟ್‌ ಪಾರ್ಟಿ ಹೇಗಿತ್ತು? ವೈರಲ್‌ ಆಯ್ತು ವಿಡಿಯೊ!

Hansika Motwani

ಬೆಂಗಳೂರು : ನಟಿ ಹನ್ಸಿಕಾ ಮೊಟ್ವಾನಿ (Hansika Motwani ) ಡಿಸೆಂಬರ್‌ ಮೊದಲ ವಾರದಲ್ಲಿ ಹಸೆಮಣೆ ಏರಲಿದ್ದಾರೆ. ಇತ್ತೀಚೆಗೆ ಉದ್ಯಮಿ ಸೊಹೈಲ್ ಪ್ಯಾರಿಸ್‌ನಲ್ಲಿ ನಟಿಗೆ ಪ್ರಪೋಸ್ ಮಾಡಿದ್ದರು. ಈ ಕುರಿತು ಹನ್ಸಿಕಾ ಅಧಿಕೃತವಾಗಿ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಇದೀಗ ನಟಿ ತಮ್ಮ ಬ್ಯಾಚುಲರ್‌ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಗೆಳತಿಯರೊಂದಿಗೆ ಗ್ರೀಸ್‌ಗೆ ತೆರಳಿದ್ದು, ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ನಟಿಯ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಡಿಸೆಂಬರ್‌ 4ರಂದು ನಟಿ ಹನ್ಸಿಕಾ ಮೊಟ್ವಾನಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವರದಿ ಪ್ರಕಾರ ಜೈಪುರದಲ್ಲಿ ಹಳೆಯ ಕಾಲದ ಕೋಟೆಯಲ್ಲಿ ನಟಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಗೆಳತಿಯರೊಂದಿಗೆ ಬ್ಯಾಚುಲರ್‌ ಪಾರ್ಟಿಯನ್ನು ನಟಿ ಮಾಡುತ್ತಿದ್ದು, ʻʻಬೆಸ್ಟ್‌ ಬ್ಯಾಚುಲರೇಟ್‌ʼʼಎಂದು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ರೆಸ್ಟೊರೆಂಟ್‌ನಲ್ಲಿ ಡ್ಯಾನ್ಸ್ ಮಾಡಿರುವ, ವಿಡಿಯೊವನ್ನೂ ನಟಿ ಹಂಚಿಕೊಂಡಿದ್ದು, ಅತ್ಯದ್ಭುತ ಬ್ಯಾಚುಲರ್ ಪಾರ್ಟಿ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Hansika Motwani | ನಟಿ ಹನ್ಸಿಕಾ ಮೊಟ್ವಾನಿ ಮದುವೆ ಆಗುವುದು ಯಾರ ಜತೆ? ಇಲ್ಲಿದೆ ಫೋಟೊ

ಕನ್ನಡದಲ್ಲಿ ʻಬಿಂದಾಸ್‌ʼ ಚಿತ್ರದ ಮೂಲಕ ಹನ್ಸಿಕಾ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿದ್ದರು. ʻವಾಲುʼ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಹನ್ಸಿಕಾ ಮೊಟ್ವಾನಿ ಸಿಂಬು ಜತೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ | Hansika Motwani | ಪ್ರಿ ವೆಡ್ಡಿಂಗ್‌ ಸಂಭ್ರಮದಲ್ಲಿ ನಟಿ ಹನ್ಸಿಕಾ ಮೊಟ್ವಾನಿ

Exit mobile version