ಬೆಂಗಳೂರು: ಹನ್ಸಿಕಾ ಮೋಟ್ವಾನಿ (Hansika Motwani) ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೋಹೇಲ್ ಖತುರಿಯಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸ್ನೇಹಿತೆಯ ಪತಿಯನ್ನೇ ಪಟಾಯಿಸಿ ಮದುವೆಯಾದಳು ಎಂಬ ನೆಟ್ಟಿಗರ ಮಾತಿಗೆ ಹನ್ಸಿಕಾ ಮೋಟ್ವಾನಿ ಸ್ಪಷ್ಟನೆ ನೀಡಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗಿರುವ ʻಲವ್ ಶಾದಿ ಡ್ರಾಮಾ’ದಲ್ಲಿ ಈ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ.
ಸೋಹೇಲ್ ಈ ಹಿಂದೆ ರಿಂಕಿಯನ್ನು ಮದುವೆಯಾಗಿದ್ದರು ಎಂದು ತಿಳಿದಾಗ ನಟಿ ಟ್ರೋಲ್‌ಗೆ ಒಳಗಾಗಿದ್ದಾರೆ. ಹನ್ಸಿಕಾ ಅವರಿಗೆ ಒಳ್ಳೆ ಫ್ರೆಂಡ್ ಎಂದು ಕೂಡ ಹೇಳಲಾಗಿತ್ತು. ಲವ್ ಶಾದಿ ಡ್ರಾಮಾದ ಮೊದಲ ಸಂಚಿಕೆಯಲ್ಲಿ, ಮದುವೆಯ ಬಗ್ಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹನ್ಸಿಕಾ ಮಾತನಾಡಿ ʻʻಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನೊಬ್ಬ ಪಬ್ಲಿಕ್ ಫಿಗರ್ ಆದ ಕಾರಣ ನನ್ನ ಕಡೆ ಬೊಟ್ಟು ಮಾಡಿ ಖಳನಾಯಕನನ್ನಾಗಿ ಮಾಡುವುದು ತುಂಬಾ ಸುಲಭವಾಗಿತ್ತು. ಸೆಲೆಬ್ರಿಟಿ ಆಗಿರುವುದರಿಂದ ನಾನು ತೆರುತ್ತಿರುವ ಬೆಲೆ ಇದುʼʼ ಎಂದು ಹನ್ಸಿಕಾ ಹೇಳಿದ್ದಾರೆ.
ಇದನ್ನೂ ಓದಿ: Hansika Motwani: ಮದುವೆಯ ಬಳಿಕ ಗ್ಲಾಮರಸ್ ಲುಕ್‌ನಲ್ಲಿ ಕಂಡ ಹನ್ಸಿಕಾ ಮೋಟ್ವಾನಿ
ಸೋಹೇಲ್ ಹನ್ಸಿಕಾ ಅವರನ್ನು ಬೆಂಬಲಿಸಿ ಮಾತನಾಡಿ ʻʻನಾನು ಈ ಮೊದಲು ಮದುವೆ ಆಗಿದ್ದೆ. ಅದು ಮುರಿದು ಬಿತ್ತು. ಈ ವಿಚಾರ ಪ್ರಪಂಚಕ್ಕೆ ಗೊತ್ತಾಯಿತು. ಆದರೆ, ತಪ್ಪಾದ ರೀತಿಯಲ್ಲಿ ಈ ಮಾಹಿತಿಯನ್ನು ಹೇಳಲಾಯಿತು. ಹನ್ಸಿಕಾ ಅವರಿಂದ ನನ್ನ ಹಾಗೂ ರಿಂಕಿ ಸಂಬಂಧ ಹಾಳಾಯಿತು ಎಂದು ಹೇಳಲಾಯಿತು. ಇದು ಸುಳ್ಳು ಹಾಗೂ ಆಧಾರ ರಹಿತವಾದುದ್ದು. ನಾವಿಬ್ಬರೂ ಸ್ನೇಹಿತರು. ಹನ್ಸಿಕಾ ನನ್ನ ಮದುವೆಗೆ ಹಾಜರಾದ ಫೋಟೊ ನೋಡಿದ್ದರಿಂದ ಈ ಊಹಾಪೋಹ ಪ್ರಾರಂಭವಾಯಿತುʼʼ ಎಂದು ಸೋಹೈಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Hansika Motwani | ಇಲ್ಲಿವೆ ಹಂನ್ಸಿಕಾ ಮೋಟ್ವಾನಿ ಮದುವೆಯ ಫೋಟೋಗಳು – Hansika Motwani marriage glimpse photos
ಹನ್ಸಿಕಾ ಅವರ 50ನೇ ಚಿತ್ರ, ಮಹಾ, ಕಳೆದ ವರ್ಷ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಈ ಸಿನಿಮಾವನ್ನು ಯುಆರ್ ಜಮೀಲ್ ನಿರ್ದೇಶಿಸಿದ್ದಾರೆ. MY3 ಸಿರೀಸ್ ಬಿಡುಗಡೆಗಾಗಿ ಕಾಯುತ್ತಿದ್ದಾಳೆ. ಎಂ ರಾಜೇಶ್ ನಿರ್ದೇಶಿಸಿದ್ದಾರೆ. ಸಿರೀಸ್‌ನಲ್ಲಿ ಮುಗೇನ್ ರಾವ್, ಶಾಂತನು ಮತ್ತು ಅಶ್ನಾ ಜವೇರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪಾರ್ಟ್‌ನರ್ ಹಾಗೂ ಮೈ ನೇಮ್ ಈಸ್ ಶ್ರುತಿ ಚಿತ್ರದಲ್ಲಿ ಹನ್ಸಿಕಾ ಕಾಣಿಸಿಕೊಳ್ಳಲಿದ್ದಾರೆ.