Site icon Vistara News

Hansika Motwani | ಪ್ರಿ ವೆಡ್ಡಿಂಗ್‌ ಸಂಭ್ರಮದಲ್ಲಿ ನಟಿ ಹನ್ಸಿಕಾ ಮೊಟ್ವಾನಿ

Hansika Motwani (Hansika Motwani-Sohael Kathuriya pre-wedding festivities )

ಬೆಂಗಳೂರು: ನಟಿ ಹನ್ಸಿಕಾ ಮೊಟ್ವಾನಿ (Hansika Motwani ) ಈ ಹಿಂದೆ ಅಷ್ಟೇ ತಾವು ಮದುವೆ ಆಗುತ್ತಿರುವ ಹುಡುಗನನ್ನು ಇನ್‌ಸ್ಟಾ ಮೂಲಕ ಪರಿಚಯಿಸಿದ್ದರು. ಇದೀಗ ನಟಿಯ ಮನೆಯಲ್ಲಿ ಮದುವೆಯ ತಯಾರಿ ಭರದಿಂದ ಸಾಗುತ್ತಿದೆ. ಉದ್ಯಮಿ ಸೋಹೆಲ್ ಖತುರಿ ಜತೆ ನಟಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಜೋಡಿ ಪ್ರಿ ವೆಡ್ಡಿಂಗ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಡಿಸೆಂಬರ್‌ ಮೊದಲ ವಾರದಲ್ಲಿ ನಟಿ ಹನ್ಸಿಕಾ ಮೊಟ್ವಾನಿ ಮದುವೆ ಸಂಭ್ರಮದಿಂದ ಜರುಗಲಿದೆ. ಇತ್ತೀಚೆಗೆ ಉದ್ಯಮಿ ಸೊಹೈಲ್ ಪ್ಯಾರಿಸ್‌ನಲ್ಲಿ ನಟಿಗೆ ಪ್ರಪೋಸ್ ಮಾಡಿದ್ದರು. ಈ ಕುರಿತು ಹನ್ಸಿಕಾ ಅಧಿಕೃತವಾಗಿ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ವರದಿ ಪ್ರಕಾರ ಜೈಪುರದಲ್ಲಿ 50 ವರ್ಷದ ಹಳೆಯ ಕಟ್ಟದಲ್ಲಿ ನಟಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Hansika Motwani | ನಟಿ ಹನ್ಸಿಕಾ ಮೊಟ್ವಾನಿ ಮದುವೆ ಆಗುವುದು ಯಾರ ಜತೆ? ಇಲ್ಲಿದೆ ಫೋಟೊ

ಕನ್ನಡದಲ್ಲಿ ʻಬಿಂದಾಸ್‌ʼ ಚಿತ್ರದ ಮೂಲಕ ಹನ್ಸಿಕಾ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿದ್ದರು. ʻವಾಲುʼ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಹನ್ಸಿಕಾ ಮೊಟ್ವಾನಿ ಸಿಂಬು ಜತೆ ಕಾಣಿಸಿಕೊಂಡಿದ್ದರು. ಹಾಗಾಗಿ ನಟ ಸಿಂಬು ಜತೆ ಡೇಟಿಂಗ್‌ ಮಾಡುತ್ತಿದ್ದರು ಎಂಬ ಸುದ್ದಿಗಳು ಈ ಮುಂಚೆ ಹರಿದಾಡುತ್ತಿದ್ದವು. ಆ ನಂತರ ಇವರಿಬ್ಬರು ದೂರವಾಗಿದ್ದರು.

ನಟ ಪ್ರಭುದೇವ ಜತೆಗೂ ನಟಿಯ ಹೆಸರು ತಳಕು ಹಾಕಿಕೊಂಡಿತ್ತು. ಟಾಲಿವುಡ್‌ನಲ್ಲಿ ಎಂಟ್ರಿ ಪಡೆದ ಹನ್ಸಿಕಾ ತಮಿಳಿನಲ್ಲಿ ಹೆಚ್ಚಾಗಿ ಸಕ್ಸೆಸ್‌ ಪಡೆದರು. ಇವರ ಕೈಯಲ್ಲಿ ಈಗಾಗಲೇ ಐದು ಸಿನಿಮಾಗಳಿವೆ.

ಇದನ್ನೂ ಓದಿ | Actor Prabhas | ಪ್ರಭಾಸ್‌ ಜನುಮದಿನಕ್ಕೆ ʻಬಿಲ್ಲಾʼ ರಿ ರಿಲೀಸ್‌: ಬಿಕಿನಿಯಲ್ಲಿ ಅನುಷ್ಕಾ ಶೆಟ್ಟಿ ಎಂಟ್ರಿ, ಹುಚ್ಚೆದ್ದು ಕುಣಿದ ಫ್ಯಾನ್ಸ್‌!

Exit mobile version