Site icon Vistara News

Hansika Motwani | ಹನ್ಸಿಕಾ ಮೋಟ್ವಾನಿ ವಿವಾಹ: ಹೇಗಿತ್ತು ಪ್ರಿ ವೆಡ್ಡಿಂಗ್‌ ಪಾರ್ಟಿ? ವಿಡಿಯೊ ವೈರಲ್‌!

Hansika Motwani

ಬೆಂಗಳೂರು: ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಸೊಹೈಲ್ ಖತುರಿಯಾ ಜತೆ ಡಿಸೆಂಬರ್ 4 ರಂದು ಜೈಪುರದ ಮುಂಡೋಟಾ ಕೋಟೆಯಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 2 ರಂದು ಮೆಹೆಂದಿ ಕಾರ್ಯಕ್ರಮ ನೆರವೇರಿದೆ. ಇದೀಗ ಜೋಡಿಯ ಪ್ರಿ ವೆಡ್ಡಿಂಗ್‌ ಪಾರ್ಟಿಯ ವಿಡಿಯೊ ವೈರಲ್‌ ಆಗಿದೆ.

ಜೋಡಿಯ ಸೂಫಿ ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಹನ್ಸಿಕಾ ಅವರು ಬಿಳಿ ಬಣ್ಣದ ಲೆಹೆಂಗಾವನ್ನು ಧರಿಸಿ ಮಿಂಚಿದ್ದಾರೆ. ಹನ್ಸಿಕಾ ಮತ್ತು ಸೊಹೈಲ್ ಅವರ ಡೆಸ್ಟಿನೇಶನ್ ವೆಡ್ಡಿಂಗ್ ಅದ್ಧೂರಿಯಾಗಿ ನಡೆಯಲಿದೆ. ಜೋಡಿ ತಮ್ಮ ಆಪ್ತರು ಮತ್ತು ಕುಟುಂಬವನ್ನು ಮಾತ್ರ ಆಹ್ವಾನಿಸಿದೆ. ತಮ್ಮ ವಿವಾಹೋತ್ಸವನ್ನು ಒಟಿಟಿಯಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ ಎಂದು ನಟಿ ಈ ಹಿಂದೆ ಹೇಳಿಕೆ ನೀಡಿದ್ದರು.

ಈ ಹಿಂದೆ ಅಷ್ಟೇ ನಟಿ ತಮ್ಮ ಬ್ಯಾಚುಲರ್‌ ಪಾರ್ಟಿಗೆಂದು ಗೆಳತಿಯರೊಂದಿಗೆ ಗ್ರೀಸ್‌ಗೆ ತೆರಳಿದ್ದು, ಎಂಜಾಯ್‌ ಮಾಡಿದ್ದರು. ನಟಿಯ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ರಾತ್ರಿ ವೇಳೆ ರೆಸ್ಟೋರೆಂಟ್‌ನಲ್ಲಿ ಡ್ಯಾನ್ಸ್ ಮಾಡಿರುವ, ವಿಡಿಯೊವನ್ನೂ ನಟಿ ಹಂಚಿಕೊಂಡಿದ್ದು, ಅತ್ಯದ್ಭುತ ಬ್ಯಾಚುಲರ್ ಪಾರ್ಟಿ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ | Hansika Motwani | ನಟಿ ಹನ್ಸಿಕಾ ಮೊಟ್ವಾನಿ ಬ್ಯಾಚುಲರೇಟ್‌ ಪಾರ್ಟಿ ಹೇಗಿತ್ತು? ವೈರಲ್‌ ಆಯ್ತು ವಿಡಿಯೊ!

ಕನ್ನಡದಲ್ಲಿ ʻಬಿಂದಾಸ್‌ʼ ಚಿತ್ರದ ಮೂಲಕ ಹನ್ಸಿಕಾ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿದ್ದರು. ʻವಾಲುʼ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಹನ್ಸಿಕಾ ಮೊಟ್ವಾನಿ ಸಿಂಬು ಜತೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ | Hansika Motwani | ಪ್ರಿ ವೆಡ್ಡಿಂಗ್‌ ಸಂಭ್ರಮದಲ್ಲಿ ನಟಿ ಹನ್ಸಿಕಾ ಮೊಟ್ವಾನಿ

Exit mobile version