Site icon Vistara News

Hansika Motwani | ನಟಿ ಹನ್ಸಿಕಾ ಮೊಟ್ವಾನಿ ಮದುವೆ ಆಗುವುದು ಯಾರ ಜತೆ? ಇಲ್ಲಿದೆ ಫೋಟೊ

Hansika Motwani

ಬೆಂಗಳೂರು: ನಟಿ ಹನ್ಸಿಕಾ ಮೊಟ್ವಾನಿ (Hansika Motwani ) ಮದುವೆ ಆಗುತ್ತಿದ್ದಾರೆ ಎಂದು ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಇದೀಗ ತಾವು ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಹಾಕಿರುವ ನಟಿ, ಉದ್ಯಮಿ ಸೋಹೆಲ್ ಖತುರಿಯಾರನ್ನು ವಿವಾಹವಾಗಲಿದ್ದಾರೆ.
ಸೋಹೆಲ್ ಖತುರಿ ಉದ್ಯಮಿಯಾಗಿದ್ದು, ಪ್ಯಾರಿಸ್‌ ಐಫೆಲ್‌ ಟವರ್‌ ಮುಂದೆ ತಮಗೆ ಪ್ರಪೋಸ್‌ ಮಾಡುತ್ತಿರುವ ಫೋಟೊವನ್ನು ನಟಿ ಹನ್ಸಿಕಾ ಮೋಟ್ವಾನಿ ಹಂಚಿಕೊಂಡಿದ್ದಾರೆ. ಈ ಸಂದರ್ಭದ ಐದು ಚಿತ್ರಗಳನ್ನು ಪೋಸ್ಟ್ ಮಾಡಿರುವ ಹನ್ಸಿಕಾ, ‘ಈಗ ಮತ್ತು ಎಂದೆಂದಿಗೂ’ ಎಂದು ಬರೆದಿದ್ದಾರೆ. ಸೋಹೆಲ್ ಖತುರಿ ʻಐ ಲವ್‌ ಯೂ ಮೈ ಲೈಫ್‌ʼ ಎಂದು ಕಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.

ವರದಿ ಪ್ರಕಾರ ಹನ್ಸಿಕಾ ಮತ್ತು ಸೋಹೆಲ್ ಖತುರಿ ಡಿಸೆಂಬರ್ 4ರಂದು ರಾಜಸ್ಥಾನದಲ್ಲಿ ವಿವಾಹವಾಗಲಿದ್ದಾರೆ. ಅನುಷ್ಕಾ ಶೆಟ್ಟಿ, ವರುಣ್ ಧವನ್, ಕರಣ್ ಟ್ಯಾಕರ್, ಪಿವಿ ಸಿಂಧು ಮತ್ತು ಶಿವಲೀಕಾ ಒಬೆರಾಯ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | Hansika Motwani | ʻಬಿಂದಾಸ್‌ʼ ಹುಡುಗಿಗೆ ಕಲ್ಯಾಣವಂತೆ: ವರ ಯಾರು?

ಡಿಸೆಂಬರ್‌ನಲ್ಲಿ ನಟಿ ಹನ್ಸಿಕಾ ಮೊಟ್ವಾನಿ ಹಸೆಮಣೆ ಏರಲಿದ್ದು, ಈಗಾಗಲೇ ಜೈಪುರದ ಮುಂಡೋಟ ಪ್ಯಾಲೇಸ್‌ ಬುಕ್‌ ಮಾಡಿದ್ದಾರೆ. ಹಾಗಾಗಿ ಅದ್ಧೂರಿಯಾಗಿಯೇ ಕಲ್ಯಾಣೋತ್ಸವ ನಡೆಯಲಿದೆ ಎಂದು ವರದಿ ಆಗಿದೆ.

ಕನ್ನಡದಲ್ಲಿ ʻಬಿಂದಾಸ್‌ʼ ಚಿತ್ರದ ಮೂಲಕ ಹನ್ಸಿಕಾ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿದ್ದರು. ʻವಾಲುʼ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಹನ್ಸಿಕಾ ಮೊಟ್ವಾನಿ ಸಿಂಬು ಜತೆ ಕಾಣಿಸಿಕೊಂಡಿದ್ದರು. ಹಾಗಾಗಿ ನಟ ಸಿಂಬು ಜತೆ ಡೇಟಿಂಗ್‌ ಮಾಡುತ್ತಿದ್ದರು ಎಂಬ ಸುದ್ದಿಗಳು ಈ ಮುಂಚೆ ಹರಿದಾಡುತ್ತಿತ್ತು. ಆ ನಂತರ ಇವರಿಬ್ಬರು ದೂರವಾಗಿದ್ದರು.

ನಟ ಪ್ರಭುದೇವ ಜತೆಗೂ ನಟಿಯ ಹೆಸರು ತಳಕು ಹಾಕಿಕೊಂಡಿತ್ತು. ಟಾಲಿವುಡ್‌ನಲ್ಲಿ ಎಂಟ್ರಿ ಪಡೆದ ಹನ್ಸಿಕಾ ತಮಿಳಿನಲ್ಲಿ ಹೆಚ್ಚಾಗಿ ಸಕ್ಸೆಸ್‌ ಪಡೆದರು. ಇವರ ಕೈಯಲ್ಲಿ ಈಗಾಗಲೇ ಐದು ಸಿನಿಮಾಗಳಿವೆ.

ಇದನ್ನೂ ಓದಿ | ಜನುಮದಿನದ ಶುಭಾಶಯ Hansika Motwani

Exit mobile version