1973ರ ಸೆಪ್ಟೆಂಬರ್ 2ರಂದು ಜನನ. ಮೂಲ ಹೆಸರು ಸುದೀಪ್ ಸಂಜೀವ್.
ತಾಯವ್ವ ಚಿತ್ರದ ಮೂಲಕ ರಾಮು ಪಾತ್ರದಲ್ಲಿ ಬೆಳ್ಳಿ ತೆರೆಗೆ ಪದಾರ್ಪಣೆ
2001ರ ವಾಲಿ ಚಿತ್ರದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು.
2001ರ ಹುಚ್ಚ ಚಿತ್ರದಲ್ಲಿ ನಟ ಸುದೀಪ್ ಕಿಚ್ಚನ ಪಾತ್ರ ನಿರ್ವಹಿಸಿದ್ದರು. ಹೀಗಾಗಿ ಅಭಿಮಾನಿಗಳಿಂದ ʼಕಿಚ್ಚʼ ಎಂಬ ಬಿರುದು ಬಂತು.
2001ರಲ್ಲಿ ಪ್ರಿಯಾ ರಾಧಾಕೃಷ್ಣ ಜತೆ ಸುದೀಪ್ ವಿವಾಹವಾಗಿದ್ದು, ಒಬ್ಬರು ಪುತ್ರಿಯನ್ನು ಹೊಂದಿದ್ದಾರೆ.
ಸತತ 3 ವರ್ಷಗಳ ಸುದೀಪ್ ಅವರಿಗೆ ಪ್ರತಿಷ್ಠಿತ ʼಫಿಲ್ಮ್‌ಫೇರ್ ಅವಾರ್ಡ್ʼ ಒಲಿದು ಬಂದಿತ್ತು. 2001ರಲ್ಲಿ ʼಹುಚ್ಚʼ ಸಿನಿಮಾಗಾಗಿ, 2002ರಲ್ಲಿ ʼನಂದಿʼ ಚಿತ್ರಕ್ಕಾಗಿ & 2003ರಲ್ಲಿ ʼಸ್ವಾತಿ ಮುತ್ತುʼ ಚಿತ್ರಕ್ಕೋಸ್ಕರ ಸುದೀಪ್ ಫಿಲ್ಮ್‌ಫೇರ್ ಅವಾರ್ಡ್‌ಗೆ ಭಾಜನರಾಗಿದ್ದರು.
2008ರಲ್ಲಿ ಹಾರರ್ ಚಿತ್ರ Phoonk ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದರು. ಉತ್ತಮ ನಟ ಎಂಬ ಮೆಚ್ಚುಗೆ ಪಡೆದ ಕಿಚ್ಚ.
My autograph ಮೂಲಕ ಚೊಚ್ಚಲ ಬಾರಿಗೆ ನಿರ್ದೇಶನ. 175 ದಿನ ಪೂರೈಸಿ ದೊಡ್ಡ ಯಶಸ್ಸು ಕಂಡಿದ್ದ ಸಿನಿಮಾ.
2012ರಲ್ಲಿ ಕಿಚ್ಚ ಸುದೀಪ್‌ಗೆ ಒಲಿದ ಅಭಿನಯ ಚಕ್ರವರ್ತಿ ಎಂಬ ಬಿರುದು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಕರ್ನಾಟಕ ಬುಲ್ಡೋಜರ್ಸ್ ಕ್ರಿಕೆಟ್ ತಂಡದ ನಾಯಕರಾಗಿ ಮುಂದಾಳತ್ವ ವಹಿಸಿರುವ ಸುದೀಪ್.
ಸದ್ಯ ವಿಕ್ರಾಂತ ರೋಣ ಚಿತ್ರದಲ್ಲಿ ಮಿಂಚಿರುವ ಸುದೀಪ್, Kabza ಚಿತ್ರದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ| Happy Birthday@ಚಿರಂಜೀವಿ