Site icon Vistara News

ಡಾಲಿ ಧನಂಜಯ್‌ಗೆ ಜನುಮ ದಿನದ ಶುಭಾಶಯ

ಡಾಲಿ ಧನಂಜಯ್‌

1986ರ ಆ. 23ರಂದು ಹಾಸನ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಜನನ. ಇವರ ಮೂಲ ಹೆಸರು ಕಾಳೇನಹಳ್ಳಿ ಅಡವಿಸ್ವಾಮಿ ಧನಂಜಯ.

2013ರ ‘ಡೈರೆಕ್ಟರ್ ಸ್ಪೆಷಲ್’ ಚಿತ್ರದಲ್ಲಿ ಧನಂಜಯ್‌ ಪಾತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ.

‘ಡೈರೆಕ್ಟರ್ ಸ್ಪೆಷಲ್’ ಚಿತ್ರಕ್ಕಾಗಿ SIIMAದಿಂದ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ.

ಸಂಗೀತಗಾರ ವಿ. ಹರಿಕೃಷ್ಣ ಅವರ ಚೊಚ್ಚಲ ನಿರ್ಮಾಣದ ಚಿತ್ರ ‘ರಾಟೆ’ಯಲ್ಲಿ ರಾಜಾ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು.

2017ರಲ್ಲಿ ಅಲ್ಲಮ (Allama) ಚಿತ್ರದಲ್ಲಿ ನಟನೆಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ.

ನೆಗಟಿವ್‌ ರೋಲ್‌ ಮೂಲಕವೇ ಜನಮನ ಗೆದ್ದಿರುವ ಧನಂಜಯ್‌, 2018ರ ‘ಟಗರು’ ಸಿನಿಮಾದ ಮೂಲಕ ಡಾಲಿ ಹೆಸರಿನಲ್ಲಿ ಫೇಮಸ್‌ ಆದರು.

2021ರ ದುನಿಯಾ ವಿಜಯ್‌ ನಟನೆಯ ‘ಸಲಗ’ ಚಿತ್ರದಲ್ಲಿ ʼACP ಸಾಮ್ರಾಟ್‌ʼ ಪಾತ್ರದಲ್ಲಿ ಧನಂಜಯ್‌ ಅಬ್ಬರಿಸಿದ್ದಾರೆ.

Bhairava Geethaದಲ್ಲಿ ನಾಯಕನಾಗಿ ಟಾಲಿವುಡ್‌ಗೆ ಕಾಲಿಟ್ಟ ಡಾಲಿ, Pushpa: The Rise ಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರದ ಮೂಲಕ ಮಿಂಚಿದ್ದಾರೆ.

ಈ ವರ್ಷ ಧನಂಜಯ್‌ ನಟನೆಯ 6 ಚಿತ್ರಗಳು ಬಿಡುಗಡೆಯಾಗಲಿವೆ.

ಇದನ್ನೂ ಓದಿ| ಜನುಮದಿನದ ಶುಭಾಶಯ ರಣದೀಪ್ ಹೂಡಾ

Exit mobile version